ಸಾರಾಂಶ
ಕನ್ನಡಪ್ರಭ ವಾರ್ತೆ ಬೀಳಗಿ
ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಸಹಕಾರಿ ಸಂಘವು ಅಭಿವೃದ್ಧಿಯುತ್ತ ಮುನ್ನಡೆಯುತ್ತ ₹೮೬.೨೧ ಲಕ್ಷಗಳ ನಿವ್ವಳ ಲಾಭಗಳಿಸಿದೆ ಎಂದು ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ಎಂ.ಎನ್.ಪಾಟೀಲ ಹೇಳಿದರು.ಇಲ್ಲಿನ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ಭಾನುವಾರ ನಡೆದ ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ್‌ನ ೨೦೨೩-೨೪ನೇ ಸಾಲಿನ ೧೪ನೇ ವಾರ್ಷಿಕ ಮಹಾಸಭೆ ಹಾಗೂ ಅನ್ನದಾತ ಸಹಕಾರಿ ಸಂಘದ ೪ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ₹೧೬೧.೫೭ ಕೋಟಿ ದುಡಿಯುವ ಬಂಡವಾಳ, ₹೧೫೫.೨೭ ಕೋಟಿ ಠೇವು ಹೊಂದುವ ಮೂಲಕ ₹೮೬.೨೧ ಲಕ್ಷ ನಿವ್ವಳ ಲಾಭಗಳಿಸಿದೆ ಎಂದರು. ಪ್ರಸಕ್ತ ವರ್ಷದಲ್ಲಿ ನಮ್ಮ ಸಂಘದ ಸದಸ್ಯರ ಬೇಡಿಕೆಯ ಅನುಗುಣವಾಗಿ ನೂತನವಾಗಿ ಜಮಖಂಡಿ, ಮುಧೋಳ, ಬನಹಟ್ಟಿ, ವಿಜಯಪುರ, ಇಳಕಲ್ಲ ಹಾಗೂ ಅಮೀನಗಡ ಸೇರಿದಂತೆ ೧೦ ಸ್ಥಳಗಳಲ್ಲಿ ಶಾಖೆಗಳನ್ನು ಪ್ರಾರಂಭಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಎಲ್ಲ ಗ್ರಾಹಕರಿಗೆ ಉತ್ತಮ ಹಾಗೂ ನಿರ್ದಿಷ್ಟ ಸೇವೆಯನ್ನು ನೀಡಲು ಸಹಕಾರಿ ಸಂಘದ ಎಲ್ಲ ಶಾಖೆಗಳಿಗೆ ಗಣಕೀಕತ ಮಾಡಲಾಗಿದ್ದು, ಇದರಿಂದ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಲು ಅನುಕೂಲವಾಗಿದೆ. ಸದಸ್ಯರು ಮತ್ತು ಗ್ರಾಹಕರ ಹಿತದೃಷ್ಟಿಯಿಂದ ನಮ್ಮ ಠೇವಣೆಯ ಬಡ್ಡಿ ದರವನ್ನು ರಾಷ್ಟ್ರೀಕತ ಹಾಗೂ ಪಟ್ಟಣ ಸಹಕಾರಿ ಬ್ಯಾಂಕುಗಳಿಂತ ಹೆಚ್ಚಿನ ಬಡ್ಡಿದರ ನೀಡಲಾಗುತ್ತಿದೆ. ಆರ್ಥಿಕವಾಗಿ ಸದಡಪಡಿಸಲು ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲಗಳನ್ನು ನೀಡಲಾಗಿದೆ. ಇದರ ಜತೆಗೆ ವಿಶೇಷವಾಗಿ ಉದ್ಯೋಗ ಸಾಲ ನೀಡಲಾಗಿದೆ. ಸಂಘದಿಂದ ಸಾಲ ಪಡೆದ ಸದಸ್ಯರು ಸಾಲವನ್ನು ಸರಿಯಾಗಿ ಸಕಾಲದಲ್ಲಿ ಸಾಲ ಮತ್ತು ಬಡ್ಡಿಯನ್ನು ಮರುಪಾವತಿಸಿ ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದರು. ಅನ್ನದಾತ ಸಹಕಾರಿ ಸಂಘವು ೪ ವರ್ಷದಲ್ಲಿ ₹೨೩.೫೫ ಲಕ್ಷ ಶೇರು ಬಂಡವಾಳ, ₹೮.೩೫ ಕೋಟಿಗಳ ಠೇವು, ₹೮.೬೨ ಕೋಟಿಗಳ ದುಡಿಯುವ ಬಂಡವಾಳ ಹೊಂದಿದ್ದು, ಎಲ್ಲ ಸದಸ್ಯರ ಸಹಕಾರದಿಂದ ಪ್ರಸಕ್ತ ಸಾಲಿನಲ್ಲಿ ₹೬.೬೬ ಲಕ್ಷ ಲಾಭಗಳಿಸಿದೆ. ಬೆಳೆಗಾವಿ ಜಿಲ್ಲೆಯ ತಾಲೂಕು ಕೇಂದ್ರದಲ್ಲಿ ನೂತನವಾಗಿ ೧೦ ಶಾಖೆಗಳನ್ನು ಪ್ರಾರಂಭಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.ಸಂಸ್ಥೆಯ ನಿರ್ದೇಶಕ ಬಿ.ಎನ್.ಹನಗಂಡಿ ಮಾತನಾಡಿ, ೨೦೧೦ರಲ್ಲಿ ಪ್ರಾರಂಭವಾದ ಈ ಸಂಸ್ಥೆಯು ಇಂದು ಹೆಮ್ಮರವಾಗಿ ಬೆಳೆಯುತ್ತಿದೆ. ಅಲ್ಲದೇ ಈ ಸಂಸ್ಥೆಯ ಅಧ್ಯಕ್ಷ ಎಂ.ಎನ್.ಪಾಟೀಲರು ತಮ್ಮ ಕಿರಿಯ ವಯಸ್ಸಿನಲ್ಲಿ ಶೈಕ್ಷಣಿಕ, ಉದ್ಯೋಗಿಕ, ಸಹಕಾರಿ ಕ್ಷೇತ್ರದಲ್ಲಿ ತೊಡಗಿಕೊಂಡು ಸಾಮಾಜಿಕ ಸೇವೆ ಮಾಡುತ್ತಿರುವುದು ಅವರು ಕಾರ್ಯ ಶ್ಲಾಘನೀಯ. ಅವರು ಇನ್ನು ಮುಂದೆ ಸಾಮಾಜಿಕ ಸೇವೆ ತೊಡಗಿರುವ ಅವರು ಬರುವ ದಿನಗಳಲ್ಲಿ ರಾಜಕೀಯ ರಂಗದಲ್ಲಿ ಬರಬೇಕಾಗಿದ್ದು ಬಹಳ ಅವಶ್ಯ ಇದೆ ಎಂದರು.ಸಂಘದ ನಿರ್ದೇಶಕರಾದ ಡಿ.ಪಿ.ಅಮಲಝರಿ, ಬಿ.ಪಿ.ಪಾಟೀಲ, ವೈ.ಎಂ.ಬೋರ್ಜಿ, ಸಂತೋಷ ಜಂಬಗಿ, ರವಿ ಪಾಟೀಲ, ಜಿ.ಜಿ.ದಿಕ್ಷೀತ, ವಿಠ್ಠಲ ನಿಂಬಾಳ್ಕರ, ಲತಾ ಪಿ.ಪಾಟೀಲ, ಕೆ.ಬಿ.ಪಾಟೀಲ, ಹಣಮಂತ ಅಂಟೀನ, ರಾಮಣ್ಣ ರಾಠೋಡ, ಶಂಕ್ರಪ್ಪ ಡಬರಿ ಹಾಗೂ ಸಲಹೆಗಾರ ಕೆ.ಬಿ.ಕುಲಕರ್ಣಿ, ಸಂಘದ ಮುಖ್ಯ ಕಾರ್ಯನಿರ್ವಾಹಕ ಪ್ರವೀಣ ಸಿ.ಕಡಕೋಳ, ಸಲಹೆಗಾರ ಕೂಡಗಿ, ಪರಶುರಾಮ ಮಮದಾಪೂರ, ಶರಣು.ವಿ.ಆಗ್ನಿ ಹಾಗೂ ಇನ್ನೂ ಅನೇಕರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಉತ್ತಮ ಗ್ರಾಹಕರಿಗೆ ಮತ್ತು ಠೇವುದಾರರಿಗೆ ಸನ್ಮಾನ ಮಾಡಲಾಯಿತು.
ಜನರ ಪ್ರೀತಿ, ವಿಶ್ವಾಸದಿಂದ ಬಾಡಗಂಡಿಯ ಎಸ್.ಆರ್.ಪಾಟೀಲ ಮೆಡಿಕಲ್ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ಆರ್ಯುವೇದಿಕ ಕಾಲೇಜು, ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ, ಅನೇಕ ಸಹಕಾರಿ ಸಂಸ್ಥೆಗಳು ಹಾಗೂ ರೈತಾಪಿ ಜನರ ಮತ್ತು ಈ ಭಾಗದಲ್ಲಿ ಉದ್ಯೋಗ ನೀಡಲು ಸಕ್ಕರೆ ಕಾರ್ಖಾನೆ ಮಾಡುವ ಮೂಲಕ ಎಸ್.ಆರ್.ಪಾಟೀಲ ಸಾಹೇಬರ ಕೊಡುಗೆ ಅಪಾರವಾಗಿದೆ. ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಗಳು ತಮ್ಮದೆಯಾದ ಕಾರ್ಯವ್ಯಾಪ್ತಿಯಲ್ಲಿ ತೊಡಗಿಕೊಂಡು ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಸರ್ವತೋಮ್ಮಖ ಅಭಿವೃದ್ಧಿಗೆ ಆಡಳಿತ ಮಂಡಳಿ ನಿರ್ದೇಶಕರ ಸಲಹೆ, ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಸರ್ವ ಸಿಬ್ಬಂದಿಯವರ ಕಾರ್ಯನಿಷ್ಠೆಯಿಂದ ಸಂಸ್ಥೆ ಅಭಿವೃದ್ಧಿಯತ್ತ ಸಾಗಿದೆ.-ಎಂ.ಎನ್.ಪಾಟೀಲ,
ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷರು.