ಸ್ವರ್ಣವಲ್ಲೀ ಪರಂಪರೆ ತಪಸ್ಸಿನ ಪರಂಪರೆ: ಡಾ. ಲಕ್ಷ್ಮೀಶ್ ಸೋಂದಾ

| Published : Feb 22 2024, 01:49 AM IST

ಸ್ವರ್ಣವಲ್ಲೀ ಪರಂಪರೆ ತಪಸ್ಸಿನ ಪರಂಪರೆ: ಡಾ. ಲಕ್ಷ್ಮೀಶ್ ಸೋಂದಾ
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಭಾರತದ ಪ್ರಾಚೀನ ಪೀಠಗಳಲ್ಲಿ ಕೆಲವೇ ಕೆಲವು ಧರ್ಮ ಪೀಠಗಳು ಆದಿಯಿಂದ ಇಂದಿನವರೆಗೂ ತಪಸ್ಸಿನ ಪರಂಪರೆಯನ್ನೇ ಅನೂಚಾನವಾಗಿ ನಡೆಸುತ್ತ ಬಂದಿದೆ.

ಶಿರಸಿ:ದಕ್ಷಿಣ ಭಾರತದ ಪ್ರಾಚೀನ ಪೀಠಗಳಲ್ಲಿ ಕೆಲವೇ ಕೆಲವು ಧರ್ಮ ಪೀಠಗಳು ಆದಿಯಿಂದ ಇಂದಿನವರೆಗೂ ತಪಸ್ಸಿನ ಪರಂಪರೆಯನ್ನೇ ಅನೂಚಾನವಾಗಿ ನಡೆಸುತ್ತ ಬಂದಿದೆ. ಅವುಗಳಲ್ಲಿ ಸೋಂದಾ ಸ್ವರ್ಣವಲ್ಲೀ ಮಠವೂ ಒಂದು ಎಂದು ಇತಿಹಾಸ ತಜ್ಞ ಡಾ. ಲಕ್ಷ್ಮೀಶ ಸೋಂದಾ ಹೇಳಿದರು.

ಅವರು ಸ್ವರ್ಣವಲ್ಲೀ ಮಠದ ಶಿಷ್ಯ ಸ್ವೀಕಾರ ಮಹೋತ್ಸವದ ಮಧ್ಯಾಹ್ನದ ಸಭಾ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲೀ ಮಠದ ಇತಿಹಾಸ ಮತ್ತು ಗುರುಪರಂಪರೆಯ ಕುರಿತು ಮಾತನಾಡಿದರು. ಕಾಶಿ, ಉಜ್ಜಯಿನಿ, ಸಪ್ತಶೃಂಗ ತ್ರಯಂಬಕ ಕ್ಷೇತ್ರ, ಗೋಕರ್ಣ, ಕಡತೋಕೆ, ಸಹಸ್ರಲಿಂಗ ಮತ್ತು ಪ್ರಸ್ತುತ ಮಠದ ಸ್ಥಳಕ್ಕೆ ಮಠ ಸ್ಥಳಾಂತರಗೊಂಡರೂ ಹಲವಾರು ರಾಜರ ಶ್ರದ್ಧೆಯ ಆಶ್ರಯ ಮತ್ತು ನಿರಂತರ ತಪಸ್ಸಿನ ಇತಿಹಾಸವನ್ನು ಎಳೆಎಳೆಯಾಗಿ ತೆರೆದಿಟ್ಟರು.

೩೫೦ ವರ್ಷಗಳ ಹಿಂದೆ ನಡೆದ ಮಹಾಯಾಗದ ಘಟನೆ, ಗೋಕರ್ಣದಲ್ಲಿ ಮಠವಿದ್ದ ಸಂಗತಿ ಹೀಗೆ ಅನೇಕ ಕುತೂಹಲದ ಸಂಗತಿಗಳಿಗೆ ನೆರೆದ ಸಾವಿರಾರು ಭಕ್ತರು ಸಾಕ್ಷಿಯಾದರು.ಈ ವೇಳೆ ವೇದಿಕೆಯಲ್ಲಿ ವಿ.ಎನ್. ಹೆಗಡೆ ಬೊಮ್ನಳ್ಳಿ, ಆರ್‌.ಎಸ್. ಹೆಗಡೆ ಭೈರುಂಬೆ, ಎನ್‌.ಜಿ. ಹೆಗಡೆ ಭಟ್ರಕೇರಿ, ಎಂ.ಆರ್. ಹೆಗಡೆ ಉಪಸ್ಥಿತರಿದ್ದರು. ಸುರೇಶ ಹಕ್ಕಿಮನೆ ಕಾರ್ಯಕ್ರಮ ನಿರ್ವಹಿಸಿದರು.