ಕನ್ನಡಪ್ರಭ ವಾರ್ತೆ ಹನೂರುಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವದ ಪ್ರಯುಕ್ತ ಎಣ್ಣೆ ಮಜ್ಜನ ಸೇವೆ ಧಾರ್ಮಿಕವಾಗಿ ಪೂಜಾ ಕಾರ್ಯಕ್ರಮಗಳು ವಿಧಿ ವಿಧಾನಗಳೊಂದಿಗೆ ನಡೆಯಿತು.

ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಚಂದ್ರಮಾನ ಯುಗಾದಿ ಜಾತ್ರಾ ಮಹೋತ್ಸವದ ಪ್ರಯುಕ್ತ ಸ್ವಾಮಿಗೆ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅವರ ದಿವ್ಯ ಸಾನಿಧ್ಯದಲ್ಲಿ ಬೆಳಗಿನ ಜಾವ ಬುಡಕಟ್ಟು ಸಮುದಾಯದ ಬೇಡಗಂಪಣ ಅರ್ಚಕರಿಂದ ಮಾದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. ವಿಶೇಷ ಧೋಪದ ಅಭಿಷೇಕ ಪೂಜಾ ಕಾರ್ಯಕ್ರಮಗಳು ಮಹಾಮಂಗಳಾರತಿಯೊಂದಿಗೆ ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಸಂಭ್ರಮ ಸಡಗರದೊಂದಿಗೆ ನಡೆಯಿತು.

ವಿಶೇಷ ಹೂವಿನ ಅಲಂಕಾರ :

ಹಬ್ಬದ ನಿಮಿತ್ತ ಗರ್ಭಗುಡಿ ಸೇರಿದಂತೆ ಪ್ರಾರಂಭದಲ್ಲಿ ವಿವಿಧ ಬಗೆಯ ಫಲ ಪುಷ್ಪಗಳಿಂದ ಆಕರ್ಷಕವಾಗಿ ಸಿಂಗರಿಸಲಾಗಿತ್ತು.ವಿಶೇಷ ಉತ್ಸವಗಳು

ಪ್ರಾಧಿಕಾರದ ವತಿಯಿಂದ ವಿವಿಧ ಉತ್ಸವಗಳಾದ ಚಿನ್ನದ ತೇರು, ಬೆಳ್ಳಿ ರಥೋತ್ಸವ ಹಾಗೂ ಹುಲಿ ವಾಹನ ಉತ್ಸವ ಮಾದೇಶ್ವರ ಉತ್ಸವ ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜೊತೆಗೆ ಇಷ್ಟಾರ್ಥ ಸಿದ್ಧಿಸುವಂತೆ ಮಾದೇಶ್ವರನಿಗೆ ನಿವೇದನೆ ಮಾಡಿಕೊಂಡು ಉರುಳು ಸೇವೆ ದೂಪದ ಸೇವೆ ಹಾಗೂ ಪಂಜಿನ ಸೇವೆ ಸಲ್ಲಿಸುವ ಮೂಲಕ ತಮ್ಮ ಹರಕೆ ಕಾಣಿಕೆಗಳನ್ನು ಸಹ ಮಾದೇಶ್ವರನಿಗೆ ಅರ್ಪಿಸಿದರು.


ವಿದ್ಯುತ್‌ ದೀಪಾಲಂಕಾರ:

ರಾಜಗೋಪುರ ದೇವಾಲಯದ ಸುತ್ತಲೂ ಆಲಂಬಾಡಿ ಬಸವ ಹಾಗೂ ವಿವಿಧಡೆ ಜಗಮಗಿಸಿದ ವಿಶೇಷ ವಿದ್ಯುತ್ ದೀಪ ಅಲಂಕಾರ ನೋಡುಗರ ಕಣ್ಮನ ಸೆಳೆಯುವ ಹಾಗೆ ಅಲಂಕಾರ ಮಾಡಲಾಗಿತ್ತು.

ಆಲಂಬಡಿ ಬಸವನಿಗೆ ಪೂಜೆ:

ಆಲಂಬಾಡಿ ಬಸವನಿಗೆ ಮಾದಪ್ಪನ ಭಕ್ತರು ಎಣ್ಣೆ ಹಾಗೂ ಹಾಲಿನಲ್ಲಿ ಅಭಿಷೇಕ ಮಾಡಿ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಸುವಂತೆ ಪೂಜೆ ಸಲ್ಲಿಸಿದರು.

ಕಾರ್ಯದರ್ಶಿಗಳಿಂದ ಪರಿಶೀಲನೆ:

ದೇಗುಲಕ್ಕೆ ಬರುವ ಭಕ್ತರೊಂದಿಗೆ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ಅವರು ಕುಳಿತು ಪ್ರಸಾದ ಸೇವಿಸಿದರು. ಬಳಿಕ ಲಾಡು ತಯಾರಿಕಾ ಘಟಕ, ಕುಡಿಯುವ ನೀರು ಸೇರಿ ವಿವಿಧ ವ್ಯವಸ್ಥೆಗಳನ್ನು ಪರಿಶೀಲಿಸಿದರು.

---

17ಸಿಎಚ್‌ಎನ್‌56 ಹನೂರು ಮಲೆ ಮಾದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವ ಪ್ರಯುಕ್ತ ವಿವಿಧ ಉತ್ಸವದಲ್ಲಿ ಭಾಗವಹಿಸಿರುವ ಭಕ್ತರು.

--------------- 17ಸಿಎಚ್‌ಎನ್‌58

ಹನೂರು ಮಲೆ ಮಹದೇಶ್ವರ ಬೆಟ್ಟದಲ್ಲಿ ದೇವಾಲಯ ವಿಶೇಷ ವಿವಿಧ ಬಗೆಯ ಹೂಗಳಿಂದ ಅಲಂಕಾರಗೊಂಡಿರುವುದು.

---------------

17ಸಿಎಚ್‌ಎನ್‌57

ಹನೂರು ಮಲೆ ಮಾದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವ ಪ್ರಯುಕ್ತ ವಿವಿಧ ಉತ್ಸವ ನಡೆಯಿತು.

----------