ಸಾರಾಂಶ
ಅಡಕೆ ಧಾರಣೆ ಕುಸಿತಕ್ಕೆ ಕಾರಣವಾದ ಅಕ್ರಮವಾಗಿ ಭಾರತಕ್ಕೆ ಆಮದಾಗುತ್ತಿರುವ ಅಡಕೆಯನ್ನು ತಡೆಗಟ್ಟಲು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ನೀಡಿದ್ದಾರೆ. ತಕ್ಷಣವೇ ಮುಂದಿನ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಅಡಕೆ ಧಾರಣೆ ಕುಸಿತಕ್ಕೆ ಕಾರಣವಾದ ಅಕ್ರಮವಾಗಿ ಭಾರತಕ್ಕೆ ಆಮದಾಗುತ್ತಿರುವ ಅಡಕೆಯನ್ನು ತಡೆಗಟ್ಟಲು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ನೀಡಿದ್ದಾರೆ. ಅಲ್ಲದೇ, ತಕ್ಷಣವೇ ಮುಂದಿನ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸೋಮವಾರ ನವದೆಹಲಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಅಡಕೆ ಸಹಕಾರ ಸಂಘಗಳ ಮಹಾಮಂಡಲ ನೇತೃತ್ವದ ನಿಯೋಗದಿಂದ ಮನವಿ ಸ್ವೀಕರಿಸಿದ ಸಚಿವರು, ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.ಅಕ್ರಮವಾಗಿ ಭಾರತಕ್ಕೆ ಅಡಕೆ ಆಮದಾಗುತ್ತಿದೆ. ಇದರಿಂದಾಗಿ ಅಡಕೆ ಧಾರಣೆ ಕುಸಿಯುತ್ತಿದೆ. ಇದರಿಂದ ಬೆಳೆಗಾರರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಒಂದೆಡೆ ಭರದಿಂದ ನಲುಗುತ್ತಿದ್ದು, ಇದರ ಜೊತೆಗೆ ಧಾರಣೆ ಕುಸಿತ ಆಗುತ್ತಿರುವುದು ಆತಂಕಕಾರಿಯಾಗಿದೆ ಎಂದು ನಿಯೋಗ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿತು.
ನಿಯೋಗದಲ್ಲಿ ಮಹಾಮಂಡಲ ಅಧ್ಯಕ್ಷ, ಮಾಮ್ಕೋಸ್ ನಿರ್ದೇಶಕ ಸುಬ್ರಹ್ಮಣ್ಯ ಯಡಗೆರೆ, ಕ್ರ್ಯಾಮ್ ಅಧ್ಯಕ್ಷ ಎಚ್.ಎಸ್. ಮಂಜಪ್ಪ ಹೊಸಬಾಳೆ, ಸಾಗರದ ಆಪ್‌ಕೋಸ್ ಅಧ್ಯಕ್ಷ ಇಂಧೂದರ ಗೌಡ, ಮಾಮ್ಕೋಸ್ ಎಂ.ಡಿ. ಶ್ರೀಕಾಂತ್ ಬರುವೆ, ಶಿರಸಿಯ ಟಿಎಸ್‌ಎಸ್‌ನ ಪ್ರಧಾನ ವ್ಯವಸ್ಥಾಪಕ ವಿಜಯಾನಂದ ಭಟ್ ಇದ್ದರು.- - - -ಫೋಟೋ:
ನವದೆಹಲಿಯಲ್ಲಿ ಸೋಮವಾರ ಅಡಕೆ ಸಹಕಾರ ಸಂಘಗಳ ಮಹಾಮಂಡಲದ ನೇತೃತ್ವದ ನಿಯೋಗವು ಕೇಂದ್ರ ಗೃಹಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರನ್ನು ಭೇಟಿಯಾಗಿ, ಅಡಕೆ ಧಾರಣೆ ಕುಸಿತಕ್ಕೆ ಕಾರಣವಾದ ಭಾರತಕ್ಕೆ ಅಕ್ರಮ ಅಡಕೆ ಆಮದನ್ನು ನಿಯಂತ್ರಿಸಲು ಮನವಿ ಮಾಡಿದರು.