ಸುರಪುರ: ಎಂಬಿಎ ವಿದ್ಯಾರ್ಥಿಗಳ ಪ್ರವಾಸ, ಸಂವಾದ

| Published : Mar 06 2024, 02:17 AM IST

ಸುರಪುರ: ಎಂಬಿಎ ವಿದ್ಯಾರ್ಥಿಗಳ ಪ್ರವಾಸ, ಸಂವಾದ
Share this Article
  • FB
  • TW
  • Linkdin
  • Email

ಸಾರಾಂಶ

ಸುರಪುರ ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದ ವತಿಯಿಂದ ಹುಬ್ಬಳ್ಳಿಯಲ್ಲಿ 3 ದಿನಗಳ ಕಾಲ ಕೈಗಾರಿಕಾ ಹಾಗೂ ಶೈಕ್ಷಣಿಕ ಪ್ರವಾಸ ನಡೆಯಿತು.

ಕನ್ನಡಪ್ರಭ ವಾರ್ತೆ ಸುರಪುರ

ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದ ವತಿಯಿಂದ ಹುಬ್ಬಳ್ಳಿಯಲ್ಲಿ 3 ದಿನಗಳ ಕಾಲ ಕೈಗಾರಿಕಾ ಹಾಗೂ ಶೈಕ್ಷಣಿಕ ಪ್ರವಾಸ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿಭಾಗದ ಮುಖ್ಯಸ್ಥ ಬಸವರಾಜ ಅಂಗಡಿ, ಕಾಲೇಜಿನ ಎಂಬಿಎ ವಿದ್ಯಾರ್ಥಿಗಳು ಎಲ್‌ಟಿವಿ ಪಾರ್ಲೆ ಪ್ರೈವೇಟ್ ಲಿಮಿಟೆಡ್‌ಗೆ ಭೇಟಿ ನೀಡಿದ್ದಾರೆ. ನಾಯಕತ್ವ, ಏಕಾಗ್ರತೆ, ಸಮಯ ನಿರ್ವಹಣೆ, ಟ್ರ‍್ಯಾಕಿಂಗ್ ಪ್ರಕ್ರಿಯೆ, ಸರಳತೆಯೊಂದಿಗೆ ಪ್ರಾಮಾಣಿಕತೆ ಮುಂತಾದ ಅಂಶಗಳ ಪ್ರಾಮುಖ್ಯತೆ ಮನದಟ್ಟು ಮಾಡಿಕೊಂಡರು ಎಂದರು.

ಹುಬ್ಬಳ್ಳಿಯಲ್ಲಿ ನಡೆದ ಉದ್ಯಮಶೀಲತಾ ಚರ್ಚಾಕೂಟದಲ್ಲಿ ವಿಆರ್‌ಎಲ್ ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ ಹುಬ್ಬಳ್ಳಿಯ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ್ ಅವರು ಕ್ರಾಂತಿಕಾರಿ ನಾಳೆ ಕುರಿತು ಮಾತನಾಡಿದರು. ಕವಿತಾಳದಿಂದ ಡಾ. ಕವಿತಾ ಮಿಶ್ರಾ ಅವರು ಯಶಸ್ವಿ ಮಹಿಳಾ ಕೃಷಿ-ಉದ್ಯಮಿಗಳ ಸವಾಲುಗಳು ಕುರಿತು ಮಾತನಾಡಿದರು.

ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಶರಣಬಸಪ್ಪ ಸಾಲಿಯವರು ಮಹಾವಿದ್ಯಾಲಯದ ಸುಮಾರು 30 ಎಂಬಿಎ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಒಟ್ಟುಗೂಡಿ ಪ್ರವಾಸಕ್ಕೆ ತೆರಳಿದ್ದರ. ಪಠ್ಯ ಕ್ರಮದ ಸಿದ್ಧಾಂತ ಮತ್ತು ಪ್ರಾಯೋಗಿಕಗಳನ್ನು ಅರ್ಥಮಾಡಿಕೊಳ್ಳಲು ಇಂತಹ ಕೈಗಾರಿಕಾ ಪ್ರವಾಸಗಳು ವಿದ್ಯಾರ್ಥಿಗಳಿಗೆ ಸಹಾಯಕವಾಗುತ್ತವೆ ಎಂದರು.

ಎಂಬಿಎ ವಿಭಾಗದ ಮುಖ್ಯಸ್ಥರಾದ ಪ್ರೊ. ಶಿವನಗೌಡ ಪಾಟೀಲ್, ಪ್ರಾಧ್ಯಾಪಕರಾದ ಪ್ರೊ. ನಾಗರಾಜ ಪಾಟೀಲ್, ಪ್ರೊ. ಗಂಗಾಧರ ಹೂಗಾರ, ಪ್ರೊ. ಮಾನಸ ಪೋಲಂಪಲ್ಲಿ ಕೈಗಾರಿಕಾ ಪ್ರವಾಸದಲ್ಲಿ ಭಾಗಿಯಾಗಿದ್ದರು.