ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಬ್ಯಾಂಕ್‌ನ ಸೇವೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೊಳಲ್ಕೆರೆ ತಾಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷರಾದ ಎಂ.ಕೆ.ರುದ್ರಪ್ಪ ಹೇಳಿದರು.ಪಟ್ಟಣದಲ್ಲಿ ಪಿ.ಎಲ್‌ಡಿ ಬ್ಯಾಂಕ್ ಸಂಭಾಗಣದಲ್ಲಿ ಆಯೋಜಿಸಲಾಗಿದ್ದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನರು ಬ್ಯಾಂಕ್‌ನ ಸೇವೆಗಳಾದ ಕೃಷಿಸಾಲ, ಕುರಿಸಾಲ, ದ್ವಿಚಕ್ರ ವಾಹನ ಸಾಲ, ರೈತರಿಗೆ ಟ್ರಾಕ್ಟರ್ ಸಾಲ ಮುಂತಾದವುಗಳನ್ನು ಪಡೆದುಕೊಂಡು ಅದನ್ನು ಸಕಾಲಕ್ಕೆ ಸರಿಯಾಗಿ ಪಾವತಿಸದೇ ಬ್ಯಾಂಕ್‌ನ ಸೇವೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಇದು ಆತಂಕಕಾರಿಯಾಗಿದ್ದು ಇದನ್ನು ಪೂರ್ಣವಾಗಿ ಕಟ್ಟಿದಲ್ಲಿ ಹೊಸಬರಿಗೆ ಅನುಕೂಲವಾಗುತ್ತದೆ ಆದ್ದರಿಂದ ಎಲ್ಲರೂ ತಪ್ಪದೇ ಸಾಲ ಮರುಪಾವತಿ ಮಾಡಿಕೊಳ್ಳಲು ಗ್ರಾಹಕರಿಗೆ ಸೂಕ್ತ ತಿಳುವಳಿಕೆ ನೀಡಬೇಕು ಎಂದರು.
ನಿರ್ದೇಶಕರಾದ ಕೆ.ಸಿ.ರಮೇಶ್, ಕೆ.ಎಂ.ಶಿವಕುಮಾರ್ ಹಾಗೂ ಮಾರುತೇಶ್, ಶರತ್ ಕುಮಾರ್ ಮಾತನಾಡಿದರು.ಬ್ಯಾಂಕ್‌ನ ಉಪಾಧ್ಯಕ್ಷ ನರಸಿಂಹಪ್ಪ ಜಿ.ಎಂ.ಹಾಲಪ್ಪ, ತಿಪ್ಪೇರುದ್ರಪ್ಪ, ಎನ್.ರಾಜಪ್ಪ, ಸಾವಿತ್ರಮ್ಮ, ಬಿ.ಆರ್.ಗೌಡ, ಜಿ.ಬಿ.ಸುಬಾನ್, ಶಂಕರಪ್ಪ, ಎಂ.ರಾಜಪ್ಪ, ಸುಧಮ್ಮ, ಮಾಳಿಗಪ್ಪ, ವ್ಯವಸ್ಥಾಪಕ ರಾಘವೇಂದ್ರ ರೆಡ್ಡಿ, ಎಸ್.ಉಮೇಶ್, ಸಿದ್ದೇಶ್, ಎನ್ .ಅಶಾ ಇತರರು ಉಪಸ್ಥಿತರಿದ್ದರು.