ಸಾರಾಂಶ
ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಬೆಳೆಸಲು ಮುಂದಾಗಬೇಕು ಎಂದು ರೋಟರಿ ಟಾಯ್ಸ್ ಸಿಟಿ ಶಾಖೆಯ ಅಧ್ಯಕ್ಷ ರಾಜೇಶ್ ಹೇಳಿದರು.
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಬೆಳೆಸಲು ಮುಂದಾಗಬೇಕು ಎಂದು ರೋಟರಿ ಟಾಯ್ಸ್ ಸಿಟಿ ಶಾಖೆಯ ಅಧ್ಯಕ್ಷ ರಾಜೇಶ್ ಹೇಳಿದರು.ತಾಲೂಕಿನ ಲಾಳಘಟ್ಟ ಗ್ರಾಮದ ಶರಣ ಚನ್ನಪ್ಪ ಸ್ವಾಮಿ ಪ್ರೌಢಶಾಲೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕ್ರೀಡಾ ಸಾಮಗ್ರಿ ವಿತರಿಸಿ ಮಾತನಾಡಿದರು.
ನಮ್ಮ ಕ್ಲಬ್‌ನ ಸಾಮಾಜಿಕ ಸೇವೆಯ ಕಾರ್ಯಕ್ರಮದಡಿ ಈ ಕ್ರೀಡೋಪಕರಣ ವಿತರಿಸಲಾಗಿದೆ. ಸಂಸ್ಥೆಯಿಂದ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಕಾರ್ಯಯೋಜನೆ ರೂಪಿಸಲಾಗಿದೆ. ಮಕ್ಕಳು ಮುಂದಿನ ದಿನ ಉತ್ತಮ ಕ್ರೀಡಾಪಟುವಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.ರೋಟರಿ ಕಾರ್ಯದರ್ಶಿ ಯೋಗೇಶ್ ಚಕ್ಕೆರೆ ಮಾತನಾಡಿ, ಗ್ರಾಮೀಣ ಭಾಗದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದುವ ಮಕ್ಕಳು ಪ್ರತಿಭಾವಂತರಾಗಿದ್ದು, ಅವರಿಗೆ ಪ್ರೋತ್ಸಾಹ ಮತ್ತು ಸಹಕಾರ ನೀಡಿದರೆ ಉತ್ತಮ ಸಾಧನೆ ಮಾಡುತ್ತಾರೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಗೋವಿಂದರಾವ್ ಕ್ರೀಡಾ ಸಾಮಗ್ರಿ ಸ್ವೀಕರಿಸಿದರು. ಫುಟ್ಬಾಲ್, ವಾಲಿಬಾಲ್, ಕ್ರಿಕೆಟ್ ಕಿಟ್, ಸ್ಕಿಪ್ಪಿಂಗ್ ರೋಪ್, ಟೆನಿಸ್ ಬಾಲ್, ಟೆನ್ನಿಕ್ವಾಯಿಟ್, ಶಟಲ್ ಬ್ಯಾಟ್, ಕೇರಂ ಬೋರ್ಡ್ ನೀಡಲಾಯಿತು. ನಿವೃತ್ತ ಸೈನಿಕ ಜಯರಾಮ್ ಗೌಡರನ್ನು ಸನ್ಮಾನಿಸಲಾಯಿತು.ಮುಖ್ಯ ಶಿಕ್ಷಕ ವಿಷ್ಣು ಪೈ, ಸಮಾಜ ಸೇವಕ ಅಕ್ಕೂರು ಚಿನ್ನಗಿರಿಗೌಡ, ಸಂಸ್ಥಾಪಕ ಕಾರ್ಯದರ್ಶಿ ಗುರುಸ್ವಾಮಿ, ಕ್ಲಬ್ ಅಡ್ವೈಸರ್ ಬಿ.ಎಂ. ನಾಗೇಶ್, ಪದಾಧಿಕಾರಿಗಳಾದ ಬೈ ಶ್ರೀನಿವಾಸ್, ನಿತಿನ್, ಅಪ್ಪಾಜಿ ಗೌಡ, ರಘು, ರಾಮಚಂದ್ರು, ಯದುಗಿರಿಗೌಡ, ಶಿಕ್ಷಕರಾದ ಪಾರ್ಥ, ಸತೀಶ್, ಬೋಸಯ್ಯ, ಅನಿತಾ, ಕುಸುಮಾ, ವಿಶಾಲಾಕ್ಷಿ ಇದ್ದರು.