ಇತ್ತೀಚಿಗೆ ಕೃಷಿ ಹೊಂಡಗಳಲ್ಲಿ ಕೆರೆ ಕುಂಟೆಗಳಲ್ಲಿ ಮಕ್ಕಳು ಈಜಾಡಲು ಹೋಗಿ ಸಾವನ್ನುಪ್ಪಿರುವ ಪ್ರಕರಣಗಳು ಕಣ್ಣ ಮುಂದೆಯೇ ಇವೆ.

ಬಂಗಾರಪೇಟೆ: ಕೆರೆ ಕುಂಟೆ ಕೃಷಿ ಹೊಂಡಾಗಳಲ್ಲಿ ಮಕ್ಕಳು ಈಜಾಡದಂತೆ ಪೊಷಕರು ಜಾಗೃತಿ ವಹಿಸುವ ಜೊತೆಗೆ ಸಂಬಂಧಪಟ್ಟ ಇಲಾಖೆಯವರು ಕರಪತ್ರದ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಿ ಆಗುವ ಅನಾವುತಗಳಿಂದ ಯುವಕರ ಪ್ರಾಣವನ್ನು ರಕ್ಷಣೆ ಮಾಡಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಜಲಮೂಲಗಳ ಬಳಿ ಕಡ್ಡಾಯವಾಗಿ ಹೆಚ್ಚರಿಕೆಯ ನಾಮಫಲಕಗಳು ಆಳವಡಿಸಿ ಬೇಸಿಗೆಯ ರಜೆಯಲ್ಲಿರುವ ಮಕ್ಕಳ ಭವಿಷ್ಯ ಉಳಿಯಲ್ಲಿ ಎಂದು ಸಂಬಂಧಪಟ್ಟ ಇಲಾಖೆಗಳಿಗೆ ಸಲಹೆ ನೀಡುವ ಜೊತೆಗೆ ಇತ್ತೀಚಿಗೆ ಕೃಷಿ ಹೊಂಡಗಳಲ್ಲಿ ಕೆರೆ ಕುಂಟೆಗಳಲ್ಲಿ ಮಕ್ಕಳು ಈಜಾಡಲು ಹೋಗಿ ಸಾವನ್ನುಪ್ಪಿರುವ ಪ್ರಕರಣಗಳು ಕಣ್ಣ ಮುಂದೆಯೇ ಇವೆ. ರೈತರಿಗೆ ವರದಾನವಾಬೇಕಾದ ಕೆಲವು ಕೃಷಿ ಹೊಂಡಗಳಿಗೆ ಬೇಲಿ ಆಳವಡಿಸದೇ ನಿರ್ಲಕ್ಯ ಮಾಡಿರುವುದರಿಂದ ಬಾಳಿ ಬದಕಬೇಕಾದ ಯುವಕರು ಜಲ ಸಮಾಧಿಯಾಗುತ್ತಿದ್ದಾರೆ. ಈ ಸಮಸ್ಯೆಯನ್ನು ಗಂಭಿರವಾಗಿ ಸಂಬಂಧಪಟ್ಟ ಇಲಾಖೆಗಳು ಎಚ್ಚರವಹಿಸುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಮಕ್ಕಳು ಗುಂಪು ಕಟ್ಟಿಕೊಂಡು ಯಾರಿಗೂ ತಿಳಿಸದೇ ಕೆರೆ ಕುಂಟೆಗಳ ಕೃಷಿ ಹೊಂಡಗಳ ಈಜಲು ಹೋಗಿ ಅದರಲ್ಲಿರುವ ಪಾಚಿ ಕಟ್ಟಿದ ಹೂಳು ಅರಿವಿಲ್ಲದೇ ಈಜಲು ಹೋಗಿ ಮೇಲೆ ಬರಲಾಗದೇ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದು, ರಜೆಯ ಮಜಾ ಕಣ್ಣೀರಿನ ಕಡಲಾಗಿ ಪರಿಣಮಿಸುತ್ತಿದ್ದೆ ಇದಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಬೇಕು ಎಂದರು.

ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ತಾ.ಅಧ್ಯಕ್ಷ ಅಪ್ಪೋಜಿರಾವ್‌ ಮುನಿಕೃಷ್ಣ ವಿಶ್ವ ಮುನಿರಾಜು, ಚಾಂದ್‌ ಪಾಷ ಕಿರಣ್‌, ಚಲಪತಿ, ಮಂಜುನಾಥ, ಗಿರೀಶ್‌ ಶೈಲಜ ರತ್ನಮ್ಮ ಗೌರಮ್ಮ ಚೌಡಮ್ಮ ಇದ್ದರು.