ಸಾರಾಂಶ
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ವಿಶ್ವಕರ್ಮ ಜನಾಂಗದವರಿಗಾಗಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭಾನುವಾರ ತಾಲೂಕು ವಿಶ್ವಕರ್ಮ ಯುವ ಬ್ರಿಗೇಡ್ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಮುದಾಯ ಭವನ ನಿರ್ಮಾಣಕ್ಕೆ ಈಗಾಗಲೇ ಒಂದು ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ. ತಾಲೂಕಿನ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮಗಳಲ್ಲಿಯೂ ಕೂಡ ವಿಶ್ವಕರ್ಮ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಲಾಗುತ್ತಿದೆ. ಜನಾಂಗದ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯೆ ಪಡೆದು ಮುಂದೆ ಬರಬೇಕು ಎಂದರು.ವಿಶ್ವಕರ್ಮ ಸಮಾಜದವರು ಇತರ ಸಮಾಜದ ಜನರಿಗಾಗಿ ದುಡಿಯುವ ಸಮುದಾಯವಾಗಿದೆ. ರಾಜ್ಯದಲ್ಲಿ ಬದಲಾವಣೆ ಆಗಬೇಕಾಗಿದೆ. ರಾಜಕೀಯದಲ್ಲಿಯೂ ಗುರುತಿಸಿಕೊಂಡಿದೆ. ಮುಂದಿನ ಸಾಲಿನಲ್ಲಿ ನಿಮ್ಮದೇ ಭವನದಲ್ಲಿ ವಿಶ್ವಕರ್ಮ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲಾಗುವುದು. ಇದಕ್ಕೆ ಸಮಾಜದ ಎಲ್ಲಾ ಮುಖಂಡರು ಯುವ ಬ್ರಿಗೇಡನ ಯುವಕರು ನಮ್ಮೊಡನೆ ಕೈಜೋಡಿಸಬೇಕು ಎಂದು ಅವರು ತಿಳಿಸಿದರು.
ಜಂಟಿ ಆಯುಕ್ತ ಮಾಳಿಗಾಚಾರ್ ಮಾತನಾಡಿ, ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ವಿಶ್ವಕರ್ಮ ಸಮಾಜದ ಮಕ್ಕಳು ವೈದ್ಯಕೀಯ ಎಂಜಿನಿಯರಿಂಗ್ ಪದವಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆದುಕೊಳ್ಳಲು ನಮ್ಮ ವಿಶ್ವ ಗ್ಲೋಬಲ್ ಫೌಂಡೇಶನ್ ವತಿಯಿಂದ 40 ಲಕ್ಷ ರೂ. ಮೀಸಲಿಟಿದ್ದು, ಇಂತಹ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸಕ್ಕೆ ತಕ್ಕಂತೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದರು.ಇವುಗಳನ್ನು ಸರ್ವರೂ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಮಕ್ಕಳು ಓದಿನತ್ತ ಹೆಚ್ಚಿನ ಗಮನ ಹರಿಸಬೇಕು. ನಾವು ನಮ್ಮತನವನ್ನು ಉಳಿಸಿಕೊಂಡು ಬೆಳೆಸಿಕೊಂಡು ಮುಂದೆ ಬರಬೇಕು. ಮನೆಯಲ್ಲಿನ ಹಿರಿಯರು ಪೋಷಕರು ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದು ಅವರು ತಿಳಿಸಿದರು.
ನಿವೃತ್ತ ಚುನಾವಣೆ ಆಯುಕ್ತ ಪಿ.ಎನ್. ಶ್ರೀನಿವಾಸ್ ಆಚಾರಿ ಮಾತನಾಡಿ, ನಮ್ಮನ್ನ ಬೇರೆಯವರು ಗೌರಿಸಬೇಕಾದರೆ ಗೌರವ ಲಭಿಸಬೇಕಾದರೆ ನಾವು ವಿದ್ಯಾವಂತರಾದಾಗ ಮಾತ್ರ ಸಾಧ್ಯ. ಉತ್ತಮ ಶಿಕ್ಷಣ ಹೊಂದಿದರೆ ಹುದ್ದೆಗಳು ಹುಡುಕಿಕೊಂಡು ಬರುತ್ತದೆ. ನಾವುಗಳು ರಾಜಕೀಯದಲ್ಲಿ ಗುರುತಿಸಿಕೊಳ್ಳಬೇಕು. ರಾಜ್ಯದಲ್ಲಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ್ದರೂ ಇಬ್ಬರು ಶಾಸಕರನ್ನು ವಿಧಾನಸಭೆಗೆ ಆಯ್ಕೆ ಮಾಡಿ ಕಳಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದರು.ಮುಂದಿನ ದಿನಗಳಲ್ಲಿ ನಮ್ಮ ಆಹಾರ ಕೇಳಲು, ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕೆ ರಾಜಕೀಯ ನಾಯಕರು ಬೇಕು ಎಂದು ಹೇಳಿದರು.
ಈ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದು ವಿದ್ಯಾರ್ಥಿಗಳನ್ನು ವಿಶ್ವಕರ್ಮ ಯುವ ಬ್ರಿಗೇಡ್ ವತಿಯಿಂದ ಸನ್ಮಾನಿಸಲಾಯಿತು.ಈ ವೇಳೆ ಉನ್ನತ ಹುದ್ದೆಯನ್ನು ಹೊಂದಿರುವ ಜನಾಂಗದ ಹಿರಿಯರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿಶ್ವಕರ್ಮ ಯುವ ಬ್ರಿಗೇಡ್ ನ ತಾಲೂಕು ಅಧ್ಯಕ್ಷ ನಿಂಗರಾಜ್ ಆಚಾರ್, ಪಬ್ಲಿಕ್ ಟಿವಿ ಪ್ರಧಾನ ನಿರೂಪಕ ಅರುಣ್ ಸಿ. ಬಡಿಗೇರ್, ಹುಬ್ಬಳ್ಳಿ ಧಾರವಾಡ ಮೇಯರ್‌ರಾಮಪ್ಪ ಕೃಷ್ಣಪ್ಪ ಬಡಿಗೇರ್, ಸಹಾಯಕ ಆಯುಕ್ತ ವಿನಾಯಕಾಚಾರ್, ವಿಶ್ವಕರ್ಮ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎನ್. ನಂದಕುಮಾರ್, ಪಬ್ಲಿಕ್ ವಾಯ್ಸ್ ಟಿವಿ ಮುಖ್ಯಸ್ಥ ರಾಜು ಕಾರ್ಯ, ತಿರುಮಲಾಚಾರ್, ಗಣೇಶ್, ಪೊಲೀಸ್ ಇನ್‌ಸ್ಪೆಕ್ಟರ್ ಮಹೇಶ್, ಬಡವರ ವೆಂಕಟೇಶ್, ಪುರಸಭಾ ಸದಸ್ಯ ರಾಜು ವಿಶ್ವಕರ್ಮ, ನಿವೃತ್ತಿ ಎಂಜಿನಿಯರ್ ನಾಗರಾಜಾ ಚಾರ್, ಬ್ರಿಗೇಡ್ ಸಮಿತಿ ಸದಸ್ಯರಾದ ವಿನೋದ್ ಕುಮಾರ್, ವಸಂತ್ ಕುಮಾರ್, ಕಿರಣ್, ದಾಸಾಚಾರಿ, ಲೋಕೇಶ್, ಸಿದ್ದಪ್ಪಾಜಿ, ಪ್ರದೀಪ್ ಕುಮಾರ್, ರವಿ ಕುಮಾರ್, ಗೋವಿಂದರಾಜ್, ವಿನಯ್ ಕುಮಾರ್, ನಾಗೇಶ್, ಶೇಖರ್, ನಾಗೇಂದ್ರ, ಜನಾರ್ಧನ್, ಚಂದನ್, ವೆಂಕಟೇಶ್, ಮಂಜುಳಾ, ಗೋವಿಂದಾಚಾರ್, ಕೃಷ್ಣ, ಸೋಮಾಚಾರ್ ಸೇರಿದಂತೆ ಅನೇಕರು ಇದ್ದರು.
---------------------