ಸಾರಾಂಶ
ತಂದ್ ಬೆಂದು ಕಾರ್ಯಕ್ರಮ ಜಾರಿಗೆ ತರಲು ಮೊದಲ ಮಹಾಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಪೊನ್ನಂಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಮಹಾಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಪೊನ್ನಂಪೇಟೆ ಕೊಡವ ಸಮಾಜದ ಅಂಗ ಸಂಸ್ಥೆಯಾದ ಪೊಮ್ಮಕ್ಕಡ ಕೂಟದಿಂದ ಕೊಡವ ಜನಾಂಗದಲ್ಲಿ ವಧುವರ ಅನ್ವೇಷಣೆ ‘ತಂದ್ -ಬೆಂದು’ ಕಾರ್ಯಕ್ರಮ ಜಾರಿಗೆ ತರಲು ಮೊದಲ ಮಹಾಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ಕೂಟದ ಅಧ್ಯಕ್ಷೆ ಕೊಣಿಯಂಡ ಕಾವ್ಯ ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.ಕೂಟದ ನಿರ್ದೇಶಕಿ ಚೊಟ್ಟೆಕಾಳಪಂಡ ಆಶಾ ಪ್ರಕಾಶ್ ಪ್ರಾರ್ಥಿಸಿ, ಕೂಟದ ಅಧ್ಯಕ್ಷೆ ಕಾವ್ಯ ಸೋಮಯ್ಯ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು. ಉಪಾಧ್ಯಕ್ಷೆ ಮೀದೇರಿರ ಕವಿತಾ ರಾಮು ಕೂಟದ ನೀತಿ ನಿಬಂಧನೆ ಮಂಡಿಸಿದರು. ಆಡಳಿತ ಮಂಡಳಿ ವರದಿಯನ್ನು ಗೌರವ ಕಾರ್ಯದರ್ಶಿ, ಬಲ್ಲಡಿಚಂಡ ಕಸ್ತೂರಿ ಸೋಮಯ್ಯ, ಲೆಕ್ಕಪತ್ರವನ್ನು ನಿರ್ದೇಶಕಿ ಗುಮ್ಮಟ್ಟಿರ ಗಂಗಮ್ಮ ಮಂಡಿಸಿದರು.
ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷರಾದ ಕಾಳಿಮಾಡ ಮೋಟಯ್ಯ ಉಪಸ್ಥಿತಿಯಲ್ಲಿ ನಡೆದ ಈ ಮಹಾಸಭೆಯಲ್ಲಿ ಅವರು ಮಾತನಾಡಿ ಮಹಿಳೆಯರು ಅಡುಗೆ ಮನೆಗೆ ಮಾತ್ರ ಸೀಮಿತವಾಗಿರದೆ ಸಮಾಜದ ಮುಖ್ಯ ವಾಹಿನಿಗೆ ಬಂದು ತಾವೇ ಬೆಳೆದು ಕೂಟವನ್ನು ಬೆಳೆಸಿ ಸಮಾಜದ ಶಕ್ತಿಯಾಗಿ ಇರಬೇಕು ಎಂದು ಕಿವಿಮಾತು ಹೇಳಿದರು. ಅಲ್ಲದೆ ಕೊಡವ ಭಾಷೆ, ಕಲೆ, ಸಂಸ್ಕೃತಿಯನ್ನು ಬೆಳೆಸಿ ಪೋಷಿಸಬೇಕು ಎಂದು ಕರೆ ನೀಡಿದರು.ಕೂಟದ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಿ ಕೂಟದ ವತಿಯಿಂದ ‘ತಂದ್ ಬೆಂದು’ ವಿಭಾಗವನ್ನು ಪ್ರಾರಂಭಿಸಲು ಮಹಾಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ನೀಡಲಾಯಿತು. ವೇದಿಕೆಯಲ್ಲಿ ಕೊಡವ ಸಮಾಜದ ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಬೋಜಮ್ಮ, ನಿರ್ದೇಶಕಿ ಮೂಕಳೆರ ಕಾವ್ಯಮಧು, ಕೂಟದ ಖಜಾಂಚಿ ವಾಣಿ ಸಂಜು, ಜಂಟಿ ಕಾರ್ಯದರ್ಶಿ ಮುಕಳೆರ ಆಶಾ ಪೂಣಚ್ಚ, ನಿರ್ದೇಶಕಿಯರಾದ ಪ್ರೊ. ಇಟ್ಟಿರ ಕಮಲಾಕ್ಷಿ ಬಿದ್ದಪ್ಪ, ಕೊಟ್ಟಂಗಡ ವಿಜು ದೇವಯ್ಯ, ಬಲ್ಯಮೀ ದೇರಿರ ಆಶಾ ಶಂಕರ್ ಹಾಜರಿದ್ದರು. ಮನೆಯಪಂಡ ಪಾರ್ವತಿ ವಂದಿಸಿದರು.