ಮೆಣಸಿನಕಾಯಿ ಬೆಳೆ ಉಳಿಸಲು ಟ್ಯಾಂಕರ್‌ ಮೊರೆ

| Published : Oct 19 2023, 12:45 AM IST

ಮೆಣಸಿನಕಾಯಿ ಬೆಳೆ ಉಳಿಸಲು ಟ್ಯಾಂಕರ್‌ ಮೊರೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರತಾಲೂಕಿನಾದ್ಯಂತ ಮುಂಗಾರು ಮಳೆಗಳು ಕೈಕೊಟ್ಟ ಹಿನ್ನೆಲೆ ಅಳಿದು ಉಳಿದ ಮೆಣಸಿನಕಾಯಿ ಬೆಳೆ ಉಳಿಸಿಕೊಳ್ಳಲು ರೈತರು ಟ್ಯಾಂಕರ್ ನೀರಿಗೆ ಮೊರೆಹೋಗಿದ್ದಾರೆ.ಸಮೀಪದ ಮಂಜಲಾಪೂರ ಗ್ರಾಮದ ಮಂಜುನಾಥ ನರೇಗಲ್ಲ ಸಹೋದರರು ತಮ್ಮ 8 ಎಕರೆ ಹೊಲದಲ್ಲಿ ಮೆಣಸಿನಕಾಯಿ ಬಿತ್ತನೆ ಮಾಡಿದ್ದರು. ಆಗಾಗ ಬಿದ್ದ ಅಲ್ಪ ಸ್ವಲ್ಪ ಮುಂಗಾರು ಮಳೆಯಲ್ಲಿಯೇ ಸೊಗಸಾಗಿ ಬೆಳೆದಿದ್ದ ಮೆಣಸಿನಕಾಯಿ ಬೆಳೆಗಳು ಕಳೆದ 2 ತಿಂಗಳಿಂದ ಮಳೆ ಇಲ್ಲದೆ ಒಣಗಿ ಹೋಗುವ ಹಂತಕ್ಕೆ ಬಂದಿದ್ದರಿಂದ ಟ್ಯಾಂಕರ್ ಮೂಲಕ ನೀರು ತಂದು ಬೆಳೆ ಉಳಿಸಿಕೊಳ್ಳುವ ಹರಸಾಹಸ ಪಡುವಂತಾಗಿದೆ.
ಭೀಕರ ಬರಕ್ಕೆ ಒಣಗಿದ ಮೆಣಸಿನಕಾಯಿ ಬೆಳೆ ಅಶೋಕ ಸೊರಟೂರ ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಮುಂಗಾರು ಮಳೆಗಳು ಕೈಕೊಟ್ಟ ಹಿನ್ನೆಲೆ ಅಳಿದು ಉಳಿದ ಮೆಣಸಿನಕಾಯಿ ಬೆಳೆ ಉಳಿಸಿಕೊಳ್ಳಲು ರೈತರು ಟ್ಯಾಂಕರ್ ನೀರಿಗೆ ಮೊರೆಹೋಗಿದ್ದಾರೆ. ಸಮೀಪದ ಮಂಜಲಾಪೂರ ಗ್ರಾಮದ ಮಂಜುನಾಥ ನರೇಗಲ್ಲ ಸಹೋದರರು ತಮ್ಮ 8 ಎಕರೆ ಹೊಲದಲ್ಲಿ ಮೆಣಸಿನಕಾಯಿ ಬಿತ್ತನೆ ಮಾಡಿದ್ದರು. ಆಗಾಗ ಬಿದ್ದ ಅಲ್ಪ ಸ್ವಲ್ಪ ಮುಂಗಾರು ಮಳೆಯಲ್ಲಿಯೇ ಸೊಗಸಾಗಿ ಬೆಳೆದಿದ್ದ ಮೆಣಸಿನಕಾಯಿ ಬೆಳೆಗಳು ಕಳೆದ 2 ತಿಂಗಳಿಂದ ಮಳೆ ಇಲ್ಲದೆ ಒಣಗಿ ಹೋಗುವ ಹಂತಕ್ಕೆ ಬಂದಿದ್ದರಿಂದ ಟ್ಯಾಂಕರ್ ಮೂಲಕ ನೀರು ತಂದು ಬೆಳೆ ಉಳಿಸಿಕೊಳ್ಳುವ ಹರಸಾಹಸ ಪಡುವಂತಾಗಿದೆ. ಗ್ರಾಮದ ಪಕ್ಕದಲ್ಲಿನ ಕೆರೆಯ ನೀರನ್ನು 2 ಕಿಮಿ ದೂರದ ಹೊಲಕ್ಕೆ ತಂದು ಟ್ರ್ಯಾಕ್ಟ್‌ರ್‌ನಲ್ಲಿ ಪಂಪ್‌ಸೆಟ್‌ ಜೋಡಿಸಿ ಸ್ಪಿಂಕ್ಲರ್ ಪೈಪ್‌ಗಳ ಮೂಲಕ ಮೆಣಸಿನಕಾಯಿ ಬೆಳೆಗೆ ಹಾಯಿಸುವುದು ಸಾಹಸದ ಕಾರ್ಯವಾಗಿದೆ. ಟ್ರ್ಯಾಕ್ಟ್‌ರ್‌ನ್ನು ದಿನ ಬಾಡಿಗೆ ಆಧಾರದಲ್ಲಿ ತಂದು 7-8 ಎಕರೆ ಮೆಣಸಿನಕಾಯಿ ಬೆಳೆಗೆ ಹಾಯಿಸಲು ಸುಮಾರು ₹50-60ಸಾವಿರ ಖರ್ಚಾಗುತ್ತದೆ. ಅಲ್ಲದೆ ಈಗಾಗಲೆ ಸುಮಾರು ₹1,50 ಲಕ್ಷ ಖರ್ಚು ಮಾಡಿ ಬೀಜ ಗೊಬ್ಬರ ಹಾಕಿ ಬೆಳೆಸಲಾಗಿದ್ದು, ಮಳೆ ಇಲ್ಲದೆ ಒಣಗಿ ಹೋಗುತ್ತಿರುವ ಬೆಳೆ ನೋಡಿ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಾಗದೆ ದೇವರು ಮಾಡಿದ್ದು ಆಗಲಿ ಎಂದು ನೀರು ಹಾಯಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎನ್ನುತ್ತಾರೆ ರೈತ ಮಂಜುನಾಥ ನರೇಗಲ್ಲ. ಲಕ್ಷ್ಮೇಶ್ವರ ತಾಲೂಕಿನಲ್ಲಿ ಸುಮಾರು 4500 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬಿತ್ತನೆ ಮಾಡಲಾಗಿದ್ದು, ಮಳೆ ಇಲ್ಲದೆ ಬೆಳೆಗಳು ಒಣಗಿ ಹೋಗುತ್ತಿರುವುದು ರೈತರಿಗೆ ನುಂಗಲಾರದ ತುತ್ತಾಗಿದೆ. ತಾಲೂಕಿನ ರಾಮಗೇರಿ, ಶಿಗ್ಲಿ, ಗೋವನಾಳ, ಬಸಾಪೂರ, ಮಾಡಳ್ಳಿ, ಯಳವತ್ತಿ, ಗೊಜನೂರ, ಯತ್ತಿನಹಳ್ಳಿ, ಬಟ್ಟೂರ, ಪು.ಬಡ್ನಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮೆಣಸಿನಕಾಯಿ ಬೆಳೆಯುತ್ತಾರೆ. ಈ ವರ್ಷ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಮಳೆಗಳು ಕೈಕೊಟ್ಟಿದ್ದರಿಂದ ಬೆಳೆ ಕಣ್ಣ ಮುಂದೆ ಒಣಗಿ ಹೋಗುವುದನ್ನು ನೋಡಲು ಆಗದೆ ಕೊನೆಯ ಪ್ರಯತ್ನ ಎನ್ನುವುದಾಗಿ ಟ್ಯಾಂಕರ್ ಮೂಲಕ ನೀರು ತಂದು ಹಾಯಿಸುವ ಕಾರ್ಯ ಮಾಡುತ್ತಿದ್ದೇವೆ. ಖರ್ಚು ಎಷ್ಟೇ ಆದರೂ ರೈತರು ತಮ್ಮ ಬೆಳೆ ಉಳಿಸಿಕೊಳ್ಳುವ ಪ್ರಯತ್ನ ಮಾತ್ರ ಬಿಡುವುದಿಲ್ಲ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ, ಪ್ರತಿನಿತ್ಯ 2 ಟ್ಯಾಂಕರ್‌ಗಳ ಮೂಲಕ ಒಂದರಿಂದ ಎರಡು ಎಕರೆ ಬೆಳೆಗೆ ನೀರು ಹಾಯಿಸಲು ಸಾಧ್ಯವಾಗುತ್ತಿದೆ, 7-8 ಎಕರೆ ಹೊಲಕ್ಕೆ ನೀರು ಹಾಯಿಸಲು ಸುಮಾರು ₹50 ಸಾವಿರಕ್ಕಿಂತ ಹೆಚ್ಚು ಖರ್ಚಾಗುತ್ತದೆ ಮಂಜುನಾಥ ನರೇಗಲ್ಲ, ರೈತ