ಗ್ಯಾರಂಟಿ ಯೋಜನೆಗಳ ಲೋಪದೋಷ ಸರಿಪಡಿಸಬೇಕು

| Published : Jan 12 2025, 01:19 AM IST

ಸಾರಾಂಶ

ತಾಲೂಕಿನಲ್ಲಿ 513 ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಿಂದ, 479 ಕುಟುಂಬಗಳು ಗೃಹ ಜ್ಯೋತಿ ಹಾಗೂ 80 ಮಂದಿ ವಿದ್ಯಾವಂತ ನಿರುದ್ಯೋಗಿ ಯುವಕರು ಯುವ ನಿಧಿ ಯೋಜನೆಗಳಿಂದ ವಂಚಿತರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಟಿ. ನರಸೀಪುರಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿನ ಲೋಪದೋಷಗಳನ್ನು ತಾಲೂಕು ಮಟ್ಟದ ಅಧಿಕಾರಿಗಳು ಸರಿಪಡಿಸಬೇಕು ಎಂದು ಸಮಿತಿ ಅಧ್ಯಕ್ಷ ಬಿ. ಮಹದೇವಪ್ರಭು ಸೂಚಿಸಿದರು.ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರದ ಗೃಹಲಕ್ಷ್ಮಿ, ಶಕ್ತಿ ಯೋಜನೆ, ಯುವನಿಧಿ, ಅನ್ನಭಾಗ್ಯ ಹಾಗೂ ಗೃಹ ಜ್ಯೋತಿ ಗ್ಯಾರಂಟಿ ಯೋಜನೆಗಳ ಉಪಯೋಗ ಮತ್ತು ತೊಂದರೆಗಳ ಬಗ್ಗೆಯೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ತಾಲೂಕಿನಲ್ಲಿ 513 ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಿಂದ, 479 ಕುಟುಂಬಗಳು ಗೃಹ ಜ್ಯೋತಿ ಹಾಗೂ 80 ಮಂದಿ ವಿದ್ಯಾವಂತ ನಿರುದ್ಯೋಗಿ ಯುವಕರು ಯುವ ನಿಧಿ ಯೋಜನೆಗಳಿಂದ ವಂಚಿತರಾಗಿದ್ದಾರೆ. ವಂಚಿತರನ್ನು ಪಟ್ಟಿ ಮಾಡಿ ಅವರೆಲ್ಲರೂ ಮುಂದಿನ ಸಭೆಯೊಳಗೆ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಬೇಕು. ಆ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿ ಸರ್ಕಾರದ ಯೋಜನೆಗಳು ಕಟ್ಟ ಕಡೆಯ ವ್ಯಕ್ತಿಗೂ ತಲುಪಬೇಕು ಅಧಿಕಾರಿಗಳಿಗೆ ತಾಕಿತು ಮಾಡಿದರು.ಸಭೆಯಲ್ಲಿ ಯುವ ನಿಧಿ ನೋಂದಣಿಯ ಪೋಸ್ಟರ್ ಗಳನ್ನ ಬಿಡುಗಡೆ ಮಾಡಲಾಯಿತು. ಕಾರ್ಯನಿರ್ವಾಹಕ ಅಧಿಕಾರಿ ಪಿ.ಎಸ್. ಅನಂತರಾಜು, ಯೋಜನಾಧಿಕಾರಿ ರಂಗಸ್ವಾಮಿ, ಸೆಸ್ಕ್ ಎಇಇ ಕೆ.ವಿ. ವೀರೇಶ್, ಸಿಡಿಪಿಓ ಗೋವಿಂದರಾಜು, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕಿ ಡಿ.ಎಂ. ರಾಣಿ, ಶಕ್ತಿ ಯೋಜನೆಯ ಕಾರ್ಯಕ್ರಮ ಅಧಿಕಾರಿ ಸೌಮ್ಯ, ಸದಾನಂದ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾದ ಅಭಿಷೇಕ್, ಸಲೀಂ ಅಹಮದ್, ಸಿ. ಕೃಷ್ಣ, ಡಿ.ಎಂ. ಪರಶಿವಮೂರ್ತಿ, ಎಸ್. ಮಂಜುನಾಥ್, ಸಿದ್ದಶೆಟ್ಟಿ, ಮಹದೇವಸ್ವಾಮಿ, ಗುರುಶ್ರೀ ರಂಗಸ್ವಾಮಿ, ಪ್ರತಾಪ್, ಗವಿ, ಮೊಹಮ್ಮದ್ ಸಲ್ಮಾನ್, ಅಧಿಕಾರಿಗಳು ಇದ್ದರು.