........ಟಿಎಪಿಸಿಎಂಎಸ್ ಚುನಾವಣೆ: ಬಿಜೆಪಿ ಮೈತ್ರಿಕೂಟ ಗೆಲುವು

| Published : Jan 09 2024, 02:00 AM IST

ಸಾರಾಂಶ

ಕೋಲಾರ ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಹಕಾರ ಸಮಿತಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಜಾತ್ಯತೀತ ಜನತಾದಳ ಮತ್ತು ಬಿಜೆಪಿ ಮೈತ್ರಿಕೂಟವು ಜಯ ಸಾಧಿಸಿದೆ.

ಕಾಂಗ್ರೆಸ್‌ಗೆ ಭಾರಿ ಮುಖಭಂಗ । ಮಾಜಿ ಶಾಸಕ ಶ್ರೀನಿವಾಸಗೌಡಗೆ ಜಯ

ಬಿಜೆಪಿ-ಜೆಡಿಎಸ್‌ ಮೈತ್ರಿ, ಕಾಂಗ್ರೆಸ್‌ಗೆ ಸೋಲು, ಶ್ರೀನಿವಾಸಗೌಡ ಗೆಲುವು, ಕೋಲಾರ

ಕೋಲಾರ ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಹಕಾರ ಸಮಿತಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಜಾತ್ಯತೀತ ಜನತಾದಳ ಮತ್ತು ಬಿಜೆಪಿ ಮೈತ್ರಿಕೂಟವು ಜಯ ಸಾಧಿಸಿದೆ.ಕನ್ನಡಪ್ರಭ ವಾರ್ತೆ ಕೋಲಾರ

ಲೋಕಸಭಾ ಚುನಾವಣೆಗೆ ಮುನ್ನ ರಾಜಕೀಯ ತಾಲೀಮು ಎಂದೇ ಭಾವಿಸಲಾಗಿದ್ದ ಕೋಲಾರ ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಹಕಾರ ಸಮಿತಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಜಾತ್ಯತೀತ ಜನತಾದಳ ಮತ್ತು ಬಿಜೆಪಿ ಮೈತ್ರಿಕೂಟವು ಜಯ ಸಾಧಿಸಿದೆ.

ಟಿಎಪಿಸಿಎಂಎಸ್ ಮೇಲೆ ಕಾಂಗ್ರೆಸ್ ಪಕ್ಷದ ಹಿಡಿತ ಸಾಧಿಸಲು ಕಳೆದ ೧೦-೧೫ ದಿನಗಳಿಂದ ಕಸರತ್ತು ನಡೆಸಿದ್ದ ಶಾಸಕ ಕೊತ್ತೂರು ಮಂಜುನಾಥ್ ಮತ್ತು ಎಂಎಲ್‌ಸಿ ಎಂ.ಎಲ್.ಅನಿಲ್‌ಕುಮಾರ್ ಮುಖಭಂಗ ಅನುಭವಿಸಿದ್ದಾರೆ.

ಶ್ರೀನಿವಾಸಗೌಡ ಗೆಲುವು

ಕಳೆದ ೪೦ ವರ್ಷದಿಂದ ಅವಿರೋಧ ಆಯ್ಕೆಯಾಗುತ್ತಿದ್ದ ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸುವಂತಾಗಿ ೧೨ ಮತ ಪಡೆದು ಜಯ ಸಾಧಿಸಿದ್ದಾರೆ.

ಟಿಎಪಿಸಿಎಂಎಸ್‌ನ ೧೪ ಸ್ಥಾನಗಳ ಪೈಕಿ ಮೊದಲು ಮೂವರು ಅವಿರೋಧ ಆಯ್ಕೆಯಾಗಿದ್ದು ಭಾನುವಾರ ಉಳಿದ ೧೧ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿ ವರ್ಗದ ಎಲ್ಲ ೭ ಸ್ಥಾನಗಳನ್ನೂ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಗೆದ್ದುಕೊಂಡಿದೆ. ಈ ವಿಭಾಗದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಎಲ್ಲ 7 ಅಭ್ಯರ್ಥಿಗಳೂ ಪರಾಭವಗೊಂಡಿದ್ದಾರೆ.

ಎ ವರ್ಗದ ಸೊಸೈಟಿಗಳ ಕ್ಷೇತ್ರದ ೪ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮಾಜಿ ಸಚಿವ ಶ್ರೀನಿವಾಸಗೌಡ ಹಾಗೂ ಇತರ ಮೂವರು ಜಯ ಸಾಧಿಸಿದ್ದಾರೆ.

ಇದಕ್ಕೂ ಮೊದಲು ಮೂರು ಸ್ಥಾನಗಳಿಗೆ ನಡೆದಿದ್ದ ಅವಿರೋಧ ಆಯ್ಕೆಯಲ್ಲಿ ಇಬ್ಬರು ಮೈತ್ರಿಕೂಟ ಮತ್ತು ಒಬ್ಬ ಕಾಂಗ್ರೆಸ್‌ ಅಭ್ಯರ್ಥಿ ಚುನಾಯಿತರಾಗಿದ್ದಾರೆ. ಹೀಗಾಗಿ ಮೈತ್ರಿಕೂಟಕ್ಕೆ ೯ ಮತ್ತು ಕಾಂಗ್ರೆಸ್‌ಗೆ ೫ ಸ್ಥಾನಗಳು ದಕ್ಕಿವೆ.

ಅವಿರೋಧ ಆಯ್ಕೆಯಾದವರುಬಿ ವರ್ಗದ ಸಂಸ್ಥೆಗಳ ಮತಕ್ಷೇತ್ರದಲ್ಲಿ ಬಿಸಿ-ಬಿಯಿಂದ ನಿರ್ಗಮಿತ ಅಧ್ಯಕ್ಷ ಕಾಂಗ್ರೆಸ್‌ನ ನಾಗನಾಳ ಸೋಮಣ್ಣ, ಬಿಸಿ-ಎದಿಂದ ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ತಂಬಿಹಳ್ಳಿ ಮುನಿಯಪ್ಪ ಮತ್ತು ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರಕ್ಕೆ ಬೆಳಮಾರನಹಳ್ಳಿ ಕೆ.ವಿ.ಸುರೇಶ್ ಅವಿರೋಧ ಆಯ್ಕೆಯಾಗಿದ್ದಾರೆ.

ಎ ವರ್ಗದ ಸಹಕಾರ ಸಂಸ್ಥೆಗಳಿಂದ ಅಣ್ಣಿಹಳ್ಳಿ ಸೊಸೈಟಿಯ ಮಾಜಿ ಸಚಿವ ಕೆ.ಶ್ರೀನಿವಾಸಗೌಡ ೧೨ ಮತ ಹಾಗೂ ಸುಗಟೂರು ಸೊಸೈಟಿ ಅಧ್ಯಕ್ಷ ಅಂಕತಟ್ಟಿಹಳ್ಳಿ ಎ.ಸಿ.ಭಾಸ್ಕರಬಾಬು, ನರಸಾಪುರ ಸೊಸೈಟಿ ಅಧ್ಯಕ್ಷ ಖಾಜಿಕಲ್ಲಹಳ್ಳಿ ಕೆ.ಎಂ.ಮುನಿರಾಜು ಮತ್ತು ಬೆಗ್ಲಿ ಸೊಸೈಟಿಯ ಶ್ರೀನಿವಾಸಪ್ಪ ತಲಾ ೮ ಮತ ಗಳಿಸಿ ಆಯ್ಕೆಯಾಗಿದ್ದಾರೆ. ಇವರೆಲ್ಲರೂ ಕಾಂಗ್ರೆಸ್ ಅಭ್ಯರ್ಥಿಗಳು. ಬಿ ವರ್ಗದಲ್ಲಿ ಮೈತ್ರಿಯ ಮೇಲುಗೈಬಿ ವರ್ಗದ ಮತಕ್ಷೇತ್ರದ ೭ ಸ್ಥಾನಗಳಿಗೆ ಒಟ್ಟು ೧೫ ಮಂದಿ ಸ್ಪರ್ಧಿಸಿದ್ದು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟದ ೭ ಮಂದಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಎಲ್ಲ ಸ್ಥಾನಗಳಲ್ಲೂ ಪರಾಭವಗೊಂಡಿದೆ. ಇದೇ ವಿಭಾಗದ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಎಂ.ಈರಪ್ಪ ೫೧೧, ಡಿ.ಎನ್.ದೇವರಾಜ ೩೩, ಎಲ್.ಆರ್.ರಾಜಣ್ಣ ೭೫೪ ಮತ ಪಡೆದಿದ್ದಾರೆ.ಈ ವಿಭಾಗದಲ್ಲಿ ಜಯಗಳಿಸಿದವರೆಂದರೆ ವಡಗೂರು ರಾಮು, ವಿ.ಎನ್.ರಘುನಾಥ, ಎನ್.ಮುನಿರಾಜ, ಮುನಿಶಾಮಿರೆಡ್ಡಿ, ಶಿಲ್ಪ ಮಂಜುನಾಥ್, ಸುನಂದಮ್ಮ ಮತ್ತು ಎಲ್.ಆರ್.ರಾಜಣ್ಣ,

ಡಿಸಿಸಿ ಬ್ಯಾಂಕ್‌ಗೆ ಸಂಸದರ ಭೇಟಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟದ ಜಯಬೇರಿಯ ಸುದ್ದಿ ತಿಳಿಯುತ್ತಿದ್ದಂತೆ ಭಾನುವಾರ ರಾತ್ರಿ ೯ ಗಂಟೆ ವೇಳೆಗೆ ಸಂಸತ್ ಸದಸ್ಯ ಎಸ್.ಮುನಿಸ್ವಾಮಿ ಇದೇ ಮೊದಲ ಬಾರಿಗೆ ಡಿಸಿಸಿ ಬ್ಯಾಂಕ್ ಒಳಗೆ ಕಾಲಿರಿಸಿದರು. ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಅವರೊಂದಿಗೆ ವಿಜಯೋತ್ಸವದ ಫೋಟೋ ಸೆಷನ್‌ಗಾಗಿ ಮುನಿಸ್ವಾಮಿ ಡಿಸಿಸಿ ಬ್ಯಾಂಕ್‌ಗೆ ಬಂದರು.

೮ಕೆಎಲ್‌ಆರ್-೫.......ಕೋಲಾರ ಟಿಎಪಿಸಿಎಂಎಸ್‌ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ, ಜೆಡಿಎಸ್‌ ಮೈತ್ರಿಕೂಟದ ವಿಜಯಿಗಳ ಜತೆಗೆ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಸಂಸದ ಮುನಿಸ್ವಾಮಿ, ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ವಿಜಯೋತ್ಸವ ಆಚರಿಸಿದರು.