55 ಸಾವಿರ ಹೆಕ್ಚೇರ್‌ ನಲ್ಲಿ ಅರಣ್ಯ-ಕಂದಾಯ ಭೂಮಿ ಗಡಿ ಗುರುತಿಗೆ ಟಾಸ್ಕ್ ಪೋಸ್‌ ರ್ ರಚನೆ: ಟಿ.ಡಿ.ರಾಜೇಗೌಡ

| Published : Nov 18 2025, 12:15 AM IST

55 ಸಾವಿರ ಹೆಕ್ಚೇರ್‌ ನಲ್ಲಿ ಅರಣ್ಯ-ಕಂದಾಯ ಭೂಮಿ ಗಡಿ ಗುರುತಿಗೆ ಟಾಸ್ಕ್ ಪೋಸ್‌ ರ್ ರಚನೆ: ಟಿ.ಡಿ.ರಾಜೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರಈ ಹಿಂದೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಜಿಲ್ಲೆಯ 5 ತಾಲೂಕುಗಳ 55 ಸಾವಿರ ಹೆಕ್ಟೇರ್ ಜಾಗವನ್ನು ಅರಣ್ಯ ಎಂದು ಘೋಷಣೆ ಮಾಡಿದ್ದು ಅದನ್ನು ಮತ್ತೆ ಸರ್ವೆ ಮಾಡಿ ಕಂದಾಯ ಹಾಗೂ ಅರಣ್ಯ ಜಮೀನನ್ನು ಗುರುತಿಸಲು ಸರ್ಕಾರ ಟಾಸ್ಕ್ ಪೋರ್ಸ ಸಮಿತಿ ರಚಿಸಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಈ ಹಿಂದೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಜಿಲ್ಲೆಯ 5 ತಾಲೂಕುಗಳ 55 ಸಾವಿರ ಹೆಕ್ಟೇರ್ ಜಾಗವನ್ನು ಅರಣ್ಯ ಎಂದು ಘೋಷಣೆ ಮಾಡಿದ್ದು ಅದನ್ನು ಮತ್ತೆ ಸರ್ವೆ ಮಾಡಿ ಕಂದಾಯ ಹಾಗೂ ಅರಣ್ಯ ಜಮೀನನ್ನು ಗುರುತಿಸಲು ಸರ್ಕಾರ ಟಾಸ್ಕ್ ಪೋರ್ಸ ಸಮಿತಿ ರಚಿಸಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಸೋಮವಾರ ತಾಲೂಕಿನ ಅಳಲಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 2016-2018 ರ ವರೆಗೆ ಟಾಸ್ಕ್ ಪೋರ್ಸ್ ಸಮಿತಿ 55 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶದ ಜನವಸತಿ ಪ್ರದೇಶ ಗುರುತಿಸಿ 10 ಸಾವಿರ ಹೆಕ್ಟೇರ್ ಪ್ರದೇಶವನ್ನು ಕಡಿತಗೊಳಿಸಿತ್ತು. 2018 ರ ನಂತರ ಟಾಸ್ಕ್ ಪೋರ್ಸ ಸಮಿತಿ ರದ್ದಾಗಿತ್ತು. ಅರಣ್ಯ ಹಾಗೂ ಕಂದಾಯ ಇಲಾಖೆ ತಪ್ಪಿನಿಂದಾಗಿ 55 ಸಾವಿರ ಹೆಕ್ಚೇರ್ ಪ್ರದೇಶದಲ್ಲಿ ವಾಸ ಮಾಡುತ್ತಿದ್ದ ಜನರಿಗೆ 94 ಸಿ ಅಡಿ ಹಕ್ಕು ಪತ್ರ ನೀಡಲು ಸಾದ್ಯವಾಗಿಲ್ಲ. ಬದುಕಿಗಾಗಿ ಒತ್ತುವರಿ ಮಾಡಿಕೊಂಡವರು ಫಾರಂ ನಂ. 53,57 ರಲ್ಲಿ ಅರ್ಜಿ ಸಲ್ಲಿಸಿದ್ದರೂ ಸಾಗುವಳಿ ಚೀಟಿ ನೀಡಲು ಸಹ ಸಾದ್ಯವಾಗಿರಲಿಲ್ಲ. ಇದರಲ್ಲಿ ಕಂದಾಯ ಹಾಗೂ ಅರಣ್ಯದ ಗಡಿ ಗುರುತನ್ನು ಸರಿಯಾದ ರೀತಿಯಲ್ಲಿ ಸರ್ವೆ ಮಾಡಬೇಕು. ಈ ಹಿಂದೆ ಇದ್ದ ಜಂಟಿ ಮೋಜಣಿ ತಂಡಗಳು, ಜಿಲ್ಲಾ ಮಟ್ಟದ ಮೇಲ್ವೀಚಾರಣಾ ಸಮಿತಿ ಹಾಗೂ ಟಾಸ್ಕ್ ಪೋರ್ಸ ಕಾಲಾವಧಿ ಯನ್ನು 2026ರ ಜುಲೈ 31ರವರೆಗೆ ವಿಸ್ತರಿಸಲಾಗಿದೆ.

ಈ ಹಿಂದೆ ಅವೈಜ್ಞಾನಿಕವಾಗಿ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿತ್ತು. ನಾನು ಹೋರಾಟ ಮಾಡಿ ಟಾರ್ಸ್ ಪೋರ್ಸ್ ಸಮಿತಿ ರಚಿಸಿಕೊಂಡು ಬಂದಿದ್ದೇನೆ. ಸರ್ಕಾರಿ ಕಟ್ಟಡ, ರಸ್ತೆ, ಗುಂಪು ಮನೆಗಳು, ರೈತರ ಒತ್ತುವರಿ ಜಮೀನು ಬಿಟ್ಟು ಜಂಟಿ ಸರ್ವೆ ನಡೆಸಿ ಕಂದಾಯ ಭೂಮಿ ಗುರುತು ಮಾಡಿದ ನಂತರ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸುತ್ತೇವೆ. ನಂತರ ಅರ್ಜಿ ನೀಡಿದವರಿಗೆ ಹಕ್ಕು ಪತ್ರ ನೀಡಲಾಗುವುದು ಎಂದು ಭರವಸೆ ನೀಡಿದರು.

ರಸ್ತೆ ಗುಂಡಿ ಮುಚ್ಚಲು ಪ್ರಾರಂಭ: ಮಳೆಗಾಲ ಮುಗಿದಿರುವುದರಿಂದ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪ್ರಾರಂಭವಾಗಿದೆ. ವಿಶೇಷ ಅನುದಾನ ಬಿಡುಗಡೆಯಾಗಿದೆ.ಅಗತ್ಯವಿರುವ ಕಡೆ ರಸ್ತೆ ಮರು ಡಾಂಬರೀಕರಣ ಮಾಡಲಾಗುವುದು. ರಸ್ತೆಯಲ್ಲಿ ಬರುವ ಜಂಗಲ್ ಕ್ಲಿಯರ್ ಮಾಡಲಾಗುವುದು. ಎಲ್ಲಾ ಕಡೆ ಚರಂಡಿ ದುರಸ್ತಿ ಮಾಡುತ್ತೇವೆ. ರಸ್ತೆಗಳ ಬಗ್ಗೆ ಸಾರ್ವಜನಿಕರು ನಿಗಾ ವಹಿಸಬೇಕು. ಕಳಪೆ ಕಾಮಗಾರಿ ಮಾಡದರೆ ತಕ್ಷಣ ನನ್ನ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.

ಈ ಸಂದರ್ಬದಲ್ಲಿ ಶಿವಮೊಗ್ಗ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಮುಖಂಡರಾದ ಎಸ್.ಡಿ. ರಾಜೇಂದ್ರ,ಚೆರಿಯನ್, ಪ್ರಶಾಂತಶೆಟ್ಟಿ, ಲೋಕೇಶ್ ಇದ್ದರು.