ಟಾಟಾ ಎಸಿ ಡಿಕ್ಕಿ: ಪಾದಯಾತ್ರಿಯ ಸಾವು, ಮಗು ಗಾಯ

| Published : Aug 11 2024, 01:35 AM IST

ಸಾರಾಂಶ

Tata AC collision: Pedestrian killed, child injured

ಮುದಗಲ್: ಛತ್ತರ ಟೋಲ್ ಗೇಟ್ ಹತ್ತಿರ ಟಾಟಾ ಎಸಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಮುದಗಲ್ಲ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತುರುವಾಗ ಆಸ್ಪತ್ರೆಯಲ್ಲಿ ಮಹಿಳೆ ಸಾವನ್ನಪ್ಪಿದ್ದು, ಮಗುವಿಗೆ ತೀವ್ರತರಹದ ಗಾಯಗೊಂಡ ಘಟನೆ ಶನಿವಾರ ಬೆಳಿಗ್ಗೆ ಮುದಗಲ್ಲ ಪೊಲೀಸ್‌ ಠಾಣಾಯಲ್ಲಿ ನಡೆದಿದೆ.ವ್ಯಾಸನಂದಿಹಾಳದ ಭಾಗ್ಯ ಹನುಮಪ್ಪ (35) ಮೃತಪಟ್ಟ ದುರ್ದೈವಿ. ಮೃತಳು, ಮಗಳಾದ ಅಕ್ಷತಾ ಹನುಮಪ್ಪ (10) ಅವಳೊಂದಿಗೆ ಛತ್ತರ ಆಂಜನೇಯ ದೇವಸ್ಥಾನಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿರುವಾಗ, ಛತ್ತರ ರೋಡ ತಾಂಡಾದ ಹತ್ತಿರವಿರುವ ಟೋಲ್ ಗೇಟ್ ಬಳಿ ಮುದಗಲ್ಲ ಕಡೆಯಿಂದ ಬಂದ ಟಾಟಾ ಎಸಿ ನಂ. ಕೆಎ05 ಎಜಿ4429 ಹಿಂದಿನಿಂದ ಮಹಿಳೆಗೆ ಗುದ್ದಿರುವದರಿಂದ ಸ್ಥಳದಲ್ಲಿಯೇ ಮಹಿಳೆ ಮತ್ತು ಮಗುವಿಗೆ ತೀವ್ರ ತರದ ಗಾಯಗಳಾಗಿವೆ. ಕೂಡಲೇ ಗಾಯಗೊಂಡವರನ್ನು ಮುದಗಲ್ಲ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತರುವುದರಲ್ಲಿಯೇ ಆಸ್ಪತ್ರೆಯಲ್ಲಿ ಭಾಗ್ಯ ಕೊನೆಯುಸಿರೆಳೆದಿದ್ದಾಳೆ. ಮಗು ಅಕ್ಷತಾಳನ್ನು ಹೆಚ್ಚಿನ ಚಿಕಿತ್ಸೆಗೆ ರಾಯಚೂರಿಗೆ ಕಳಿಸಲಾಗಿದೆ. ಅಪರಾಧ ವಿಭಾಗದ ಪಿಎಸ್ಐ ಛತ್ರಪ್ಪ ರಾಠೋಡ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಟಾ ಎಸಿ ಚಾಲಕ ವೆಂಕಟಜಗನ್ನಾಥನನ್ನು ಬಂಧಿಸಿದ್ದಾರೆ.

-----------ಫೋಟೊ: ( 10ಮುದಗಲ್ಲ01 ) ಅಪಘಾತಕ್ಕೊಳಗಾದ ಟಾಟಾ ಎಸಿ ಹಾಗೂ ಮೃತಪಟ್ಟ ಮಹಿಳೆ.