ಕನ್ನಡ ಸಾಹಿತ್ಯ ಸಂಸ್ಕೃತಿ ಸೇವೆಯಲ್ಲಿ ತೊಡಗಿಕೊಂಡಿರುವವರು ಮೂಡುಬಿದಿರೆ ಹೋಬಳಿಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ , ಶಿಕ್ಷಕ ಡಾ. ರಾಮಕೃಷ್ಣ ಶೀರೂರು. ಇತ್ತೀಚಿನ ವರ್ಷಗಳಲ್ಲಿ ನಾಡಿನೆಲ್ಲೆಡೆಯ 35ಕ್ಕೂ ಅಧಿಕ ಪ್ರಶಸ್ತಿ, ಗೌರವಗಳು ಇವರನ್ನೇ ಹುಡುಕಿ ಬರುತ್ತಿರುವುದು ವಿಶೇಷ.
ಗಣೇಶ್ ಕಾಮತ್
ಪ್ರಶಸ್ತಿಗಳ ಬೆನ್ನುಬಿದ್ದು ಪ್ರಚಾರ ಬಯಸುವ ಅನೇಕರನ್ನು ಕಾಣಬಹುದು. ಆದರೆ ಪ್ರಶಸ್ತಿಗಳೇ ಬೆನ್ನಟ್ಟಿಕೊಂಡು ಬಂದು ಪ್ರಚಾರ ಕೊಟ್ಟರೆ ಹೇಗಿರಬೇಡ? ಹೌದು. ಕಳೆದ ಕೆಲವೇ ವರ್ಷಗಳಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿ, ಸಂಘಟನಾ ಕಾರ್ಯಕ್ಕೆ ನಾಡಿನ ಮೂಲೆ ಮೂಲೆಗಳಿಂದ ಅನೇಕ ಪ್ರಶಸ್ತಿಗಳು ಇಲ್ಲೊಬ್ಬಶಿಕ್ಷಕರನ್ನು ಅರಸಿಕೊಂಡು ಬರುತ್ತಿವೆ.ತನ್ನ ಪಾಡಿಗೆ ತಾನಿದ್ದು ಕನ್ನಡ ಸಾಹಿತ್ಯ ಸಂಸ್ಕೃತಿ ಸೇವೆಯಲ್ಲಿ ತೊಡಗಿಕೊಂಡಿರುವವರು ಮೂಡುಬಿದಿರೆ ಹೋಬಳಿಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ , ಶಿಕ್ಷಕ ಡಾ. ರಾಮಕೃಷ್ಣ ಶೀರೂರು. ಇತ್ತೀಚಿನ ವರ್ಷಗಳಲ್ಲಿ ನಾಡಿನೆಲ್ಲೆಡೆಯ 35ಕ್ಕೂ ಅಧಿಕ ಪ್ರಶಸ್ತಿ, ಗೌರವಗಳು ಇವರನ್ನೇ ಹುಡುಕಿ ಬರುತ್ತಿರುವುದು ವಿಶೇಷ. ಕಳೆದ ಮೂರೂರುವರೆ ದಶಕಗಳಿಂದ ಮೂಡುಬಿದಿರೆಯ ಹೋಲಿ ರೋಸರಿ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿದ್ದಾರೆ. ಮೂಲತ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶೀರೂರು ಮೇಲ್ಪಂಗ್ತಿಯ ಶಾನುಭೋಗರ ಮನೆತನಕ್ಕೆ ಸೇರಿದ ರಾಮಕೃಷ್ಣರು ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷರಾಗಿಯೂ ಸಕ್ರಿಯರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು ಇದರ ರಾಜ್ಯ ಸಂಚಾಲಕ. ಕರ್ನಾಟಕ ಜಾನಪದ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕದ ಉಪಾಧ್ಯಕ್ಷರು.
ಅಖಿಲ ಭಾರತ ಸಾಹಿತ್ಯಪರಿಷತ್ ಮೂಡುಬಿದಿರೆ ತಾಲೂಕು, ಹವ್ಯಕ ಸಭಾದಲ್ಲಿ ಕಾರ್ಯದರ್ಶಿ, ಶಾಲಾ ರಕ್ಷಕ ಶಿಕ್ಷಕ ಸಂಘದಲ್ಲೂ ಪ್ರಧಾನ ಕಾರ್ಯದರ್ಶಿ ಹೀಗೆ ವಿವಿಧ ಸಂಘ ಸಂಸ್ಥೆಗಳಲ್ಲೂ ಸಕ್ರಿಯರು.2002ರಲ್ಲಿ ಮೂಡುಬಿದಿರೆಯಲ್ಲಿ ಸಾಹಿತ್ಯ ಸೌರಭ ಸಾಹಿತ್ಯ ಸಂಘಟನೆ ಸ್ಥಾಪಿಸಿ ಮೂಡುಬಿದಿರೆ ತಾಲೂಕಿನ ಎಲ್ಲ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರತಿ ತಿಂಗಳೂ ಸಾಹಿತ್ಯ ಸಂಗೀತ ಸಂಸ್ಕೃತಿಯ ಸಾಹಿತ್ಯ ಚಿಂತನ ಮತ್ತು ಸಂಸ್ಕೃತಿ ಚಿಂತನ ಕಾರ್ಯಕ್ರಮಗಳನ್ನು ನಡೆಸಿದವರು ಶೀರೂರು. ಯಕ್ಷ ಸೌರಭ, ಕೀರ್ತನ ಸೌರಭ, ನೃತ್ಯ ಸೌರಭ, ರಂಗ ಸೌರಭ, ಸಂಗೀತ ಸೌರಭ ಹೀಗೆ ಹಲವು ಅಂಗ ಸಂಸ್ಥೆಗಳ ಮೂಲಕ ಹದಿಹರೆಯದ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ವಾತಾವರಣ ನಿರ್ಮಿಸಿದವರು.
ಶೀರೂರು ಪ್ರಶಸ್ತಿಗಳ ತೇರು..!ರಾಮಕೃಷ್ಣರನ್ನುಅರಸಿಕೊಂಡು ಬರುತ್ತಿರುವ ಪ್ರಶಸ್ತಿಗಳ ತೇರು ದೊಡ್ಡದು. 2003ರಲ್ಲಿ ಸಿರಿಗನ್ನಡ ಜಿಲ್ಲಾ ಶಿಕ್ಷಕ ಪ್ರಶಸ್ತಿ, 2004ರಲ್ಲಿ ಸಾಂಗತ್ಯ ರಾಜ್ಯೋತ್ಸವ ಪ್ರಶಸ್ತಿ ಗೌರವ., ಕನ್ನಡ ರತ್ನ ಪ್ರಶಸ್ತಿ- 2005, ಅಖಿಲ ಕರ್ನಾಟಕ ಕನ್ನಡ ಜಾಗೃತ ಬಳಗ ದಕ್ಷಿಣ ಕನ್ನಡ ಜಿಲ್ಲೆ ಇದರ ದಶಮಾನೋತ್ಸವ ಪ್ರಶಸ್ತಿ, ರೋಟರಿ ಮಿಡ್ ಟೌನ್ ಮೂಡುಬಿದಿರೆಯವರ ರಾಷ್ಟ್ರ ನಿರ್ಮಾಪಕ ಪ್ರಶಸ್ತಿ, ನೇಪಾಳದ ಏಷ್ಯನ್ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್.
ಮೂಡುಬಿದಿರೆ ಕೋ ಆಪರೇಟಿವ್ ಬ್ಯಾಂಕ್ ಗೌರವ, ಕರ್ನಾಟಕ ರಾಜ್ಯ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಮೂಡುಬಿದಿರೆ ತಾಲೂಕು ಘಟಕದ ರಾಜ್ಯೋತ್ಸವ ಪುರಸ್ಕಾರ, ಮೂಡುಬಿದಿರೆಯ ಟೆಂಪಲ್ ಟೌನ್ ರೋಟರಿ ಕ್ಲಬ್ - ರಾಷ್ಟ್ರ ನಿರ್ಮಾಪಕ ನೇಷನ್ ಬಿಲ್ಡರ್ ಪ್ರಶಸ್ತಿ, ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ನಿಂದ ಶಿಕ್ಷಣ ಶಿಲ್ಪಿ ಪ್ರಶಸ್ತಿ , ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ವತಿಯಿಂದ ಕವಿ ಕಾವ್ಯ ಸನ್ಮಾನ ಪುರಸ್ಕಾರ , ನ್ಯಾಶನಲ್ ಐಕಾನ್ ಅವಾರ್ಡ್ (ರಾಷ್ಟ್ರೀಯ ಶಿಕ್ಷಣ ರತ್ನ ಪ್ರಶಸ್ತಿ), ಕೆ.ಎನ್. ಶಿರಾಡಿಪಾಲ್ ಶತಮಾನೋತ್ಸವ ಗೌರವ ಪುರಸ್ಕಾರ, ಮೂಡುಬಿದಿರೆ ಸಮಾಜ ಮಂದಿರ ಸಭಾ ದಸರಾ ಉತ್ಸವ ಪುರಸ್ಕಾರ ಶೀರೂರು ಅವರಿಗೆ ಲಭಿಸಿದೆ.ಕರ್ನಾಟಕ ಸಾಹಿತ್ಯ ಸೌರಭ ಗೌರವ, ಸುವರ್ಣ ಕರ್ನಾಟಕ ಕಣ್ಮಣಿ ರಾಜ್ಯ ಪ್ರಶಸ್ತಿ, ಕಲಾಕುಂಚ ದಾವಣಗೆರೆ ಇವರಿಂದ ಸುವರ್ಣ ಕರ್ನಾಟಕ ಕಣ್ಮಣಿ ರಾಜ್ಯ ಪ್ರಶಸ್ತಿ, ಸುಮಂಗಲಿ ಸೇವಾ ಟ್ರಸ್ಟ್ ಶ್ರೀರಂಗಪಟ್ಟಣ ಮಂಡ್ಯ ಇವರಿಂದ ಕರ್ನಾಟಕ ಪ್ರಜಾಭೂಷಣ ಪ್ರಶಸ್ತಿ, ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ವಿಜಯನಗರ ಇವರಿಂದ ಶ್ರೀ ಸಿದ್ದರಾಮೇಶ್ವರ ಪ್ರಶಸ್ತಿ, ಕರ್ನಾಟಕ ರಾಜ್ಯ ಅಕ್ಷರ ದೀಪ ಫೌಂಡೇಶನ್ ಉತ್ತರ ಕನ್ನಡ ಜಿಲ್ಲಾ ಘಟಕದಿಂದ ದ್ರೋಣಾಚಾರ್ಯ ರಾಷ್ಟ್ರೀಯ ಪ್ರಶಸ್ತಿ ಪ್ರಶಸ್ತಿ ಲಭಿಸಿದೆ. ಎಚ್.ಕೆ. ಮಂಜುನಾಥ ಒಡನಾಡಿಗಳ ಬಳಗ ಬೆಂಗಳೂರು ಇವರು ಸಹ ಶಿಕ್ಷಕ ಸಂಘಟನೆಗಾಗಿ ನಾಯಕ ರತ್ನ ರಾಜ್ಯ ಪ್ರಶಸ್ತಿ, ಸ್ನೇಹಜೀವಿ ಫೌಂಡೇಶನ್ ಮಹಾರಾಷ್ಟ್ರ ಮತ್ತು ಅಕ್ಷರ ದೀಪ ಫೌಂಡೇಶನ್ ಕರ್ನಾಟಕ ಇವರ ಸ್ವಾಮಿ ವಿವೇಕಾನಂದ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಸಾಲಿಗ್ರಾಮ ಗಣೇಶ್ ಶೆಣೈಅವರ ಕಲಾ ಕುಂಚ ದಾವಣಗೆರೆ ಇವರಿಂದ ಕರ್ನಾಟಕ ಮುಕುಟಮಣಿ ರಾಜ್ಯ ಪ್ರಶಸ್ತಿ , ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಪುತ್ತೂರು ದಕ್ಷಿಣ ಕನ್ನಡ ಇವರಿಂದ ಕರ್ನಾಟಕ ಕಲಾಭೂಷಣ ರಾಜ್ಯ ಪ್ರಶಸ್ತಿ , ಸಾಲಿಗ್ರಾಮ ಶ್ರೀಮತಿ ಸರಸ್ವತಿ ದಾಸಪರ್ಶಣೆ ಪ್ರತಿಷ್ಠಾನ ದಾವಣಗೆರೆ ಇವರಿಂದ ಸರಸ್ವತಿ ಸಾಧಕ ಸಿರಿ ರಾಷ್ಟ್ರಪ್ರಶಸ್ತಿ , ಕರ್ನಾಟಕ ಶಿಕ್ಷಣ ಜ್ಞಾನ ಸಂಘಟನೆಯವರ ಜ್ಞಾನ ಸಿಂಧು ರಾಜ್ಯ ಪ್ರಶಸ್ತಿ, ಕರ್ನಾಟಕ ರಾಜ್ಯ ಬರಹಗಾರರು ವೇದಿಕೆ ಹೂವಿನ ಹಡಗಲಿ ಬೆಂಗಳೂರು ಇವರ ಶಿಕ್ಷಣ ಸೌರಭ ರಾಷ್ಟ್ರ ಪ್ರಶಸ್ತಿ , ವಿ.ವಿ. ಹಿರೇಮಠ ಪ್ರತಿಷ್ಠಾನ ಗದಗ ಇವರಿಂದ ಪುಟ್ಟರಾಜ ಸಾಹಿತ್ಯ ಸದ್ಭಾವನಾ ಪ್ರಶಸ್ತಿ, ಹುಬ್ಬಳ್ಳಿಯ ಉಮಾಶಂಕರ ಪ್ರತಿಷ್ಠಾನದವರ ಸ್ವರ್ಣ ಸಿರಿ ರಾಜ್ಯ ಪ್ರಶಸ್ತಿ, ಅಕ್ಷರ ದೀಪ ಪ್ರತಿಷ್ಠಾನದಿಂದ ಕಾಯಕ ಯೋಗಿ ರಾಷ್ಟ್ರ ಪ್ರಶಸ್ತಿ, ಮಹಾಕವಿ ಕುಮಾರವ್ಯಾಸ ರಾಷ್ಟ್ರ ಪ್ರಶಸ್ತಿ , ಮಹಾಕವಿ ರನ್ನ ಪ್ರತಿಷ್ಠಾನ ಫೌಂಡೇಶನ್ ವೀರ ರಾಣಿ ಕಿತ್ತೂರು ಚೆನ್ನಮ್ಮ ಸಾಂಸ್ಕೃತಿಕ ಕಲಾಸಂಘ ಮುಧೋಳ. ಬಾಗಲಕೋಟೆ ಜಿಲ್ಲೆ ಇವರ ಮಹಾಕವಿ ರನ್ನ ಪ್ರಶಸ್ತಿ, ಕರ್ನಾಟಕ ರಾಜ್ಯ ಜನ ಸಿರಿ ಪ್ರತಿಷ್ಠಾನ ಬೆಂಗಳೂರು ಇವರಿಂದ ಜನಸಿರಿ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಗೌರವ, ಕರ್ನಾಟಕ ರಾಜ್ಯ ಜನ ಸೇವಾ ಪ್ರತಿಷ್ಠಾನ ಬೆಂಗಳೂರು ಇವರಿಂದ ಜನಸಿರಿ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಶ್ರೀ ಸರ್ವೇ ಆರ್ಟ್ ಮತ್ತು ಕಲ್ಚರಲ್ ಟ್ರಸ್ಟ್ ಬೆಂಗಳೂರು ಅವರ ಭಾರತ ಭೂಷಣ ರಾಷ್ಟ್ರ ಪ್ರಶಸ್ತಿ , ಕರ್ನಾಟಕ ರಾಜ್ಯ ಅಕ್ಷರ ದೀಪ ಪ್ರತಿಷ್ಠಾನ ಗದಗ ಇವರಿಂದ ಕನಕಶ್ರೀ ರಾಷ್ಟ್ರ ಪ್ರಶಸ್ತಿ, ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆ ದಾವಣಗೆರೆ ಇವರಿಂದ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಕರ್ನಾಟಕ ಸಿರಿಗನ್ನಡ ಸಿರಿ ರಾಜ್ಯ ಪ್ರಶಸ್ತಿ ಲಭಿಸಿದೆ.
ಇದೀಗ ದಾವಣಗೆರೆಯ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ಸರಸ್ವತಿ ಕನ್ನಡರತ್ನ ರಾಜ್ಯ ಪ್ರಶಸ್ತಿಗೆ ಡಾ. ರಾ. ಶಿರೂರು ಆಯ್ಕೆಯಾಗಿದ್ದಾರೆ. ಏಪ್ರಿಲ್ 19ರಂದು ದಾವಣಗೆರೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.