ಸಾರಾಂಶ
ಕೆ.ಎಸ್.ವಸಂತಮ್ಮ ಅಭಿಮತ । ಈಶ್ವರೀಯ ವಿದ್ಯಾಲಯದಲ್ಲಿ ಗುರುವಂದನೆ । ನಿವೃತ್ತ ಶಿಕ್ಷಕರಿಗೆ ಗೌರವ ಕನ್ನಡಪ್ರಭ ವಾರ್ತೆ ಬೀರೂರು
ಶಿಕ್ಷಕ ಸ್ವತಃ ತಾವೂ ವಿದ್ಯಾರ್ಥಿಯಾಗಿ ಜ್ಞಾನಗಳಿಕೆಯ ಹಾದಿಯಲ್ಲಿ ಸಾಗಿದಾಗ ಮಕ್ಕಳ ಭವಿಷ್ಯ ಉಜ್ವಲವಾಗಿ ಸುಶಿಕ್ಷಿತ ಸಮಾಜ ನಿರ್ಮಾಣ ಸುಲಭ ಸಾಧ್ಯ ಎಂದು ನಿವೃತ್ತ ಶಿಕ್ಷಕಿ ಕೆ.ಎಸ್.ವಸಂತಮ್ಮ ತಿಳಿಸಿದರು.ಪಟ್ಟಣದ ರಾಜಾಜಿನಗರ ಬಡಾವಣೆ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ಆವರಣದಲ್ಲಿ ನಡೆದ ಗುರುವಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜೀವನ ನಿರ್ವಹಣೆಗೆ ಹಲವು ವೃತ್ತಿಗಳು ಇದ್ದರೂ ಶಿಕ್ಷಕ ವೃತ್ತಿಯಷ್ಟು ಗೌರವ ಹಾಗೂ ಸಂತೃಪ್ತಿ ನೀಡುವ ವೃತ್ತಿ ಬೇರೆ ಇಲ್ಲ. ಈ ವೃತ್ತಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ಹೊಂದಿದವರು ನಿಜಕ್ಕೂ ಭಾಗ್ಯಶಾಲಿಗಳು ಎಂದರು.ಜಗಳೂರು ಪ್ರಜಾಪಿತ ಬ್ರಹ್ಮಕುಮಾರಿ ಕೇಂದ್ರದ ರಾಜಯೋಗಿನಿ ಭಾರತಿ ಅಕ್ಕ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಶಿಕ್ಷಕರಿಗೆ ಸಮಾಜದಲ್ಲಿ ಬಹಳ ಗೌರವದ ಸ್ಥಾನವಿದೆ. ಶಿಕ್ಷಕರು ನಿರ್ವಹಿಸುವ ಕಾರ್ಯ ಅನನ್ಯ ವಾಗಿದೆ. ರಾಧಾಕೃಷ್ಣನ್ ಬದುಕು ಸಾಧನೆ, ಹಿಂದಿನ ಶಿಕ್ಷಣ ಮತ್ತು ಬದಲಾದ ಶಿಕ್ಷಣ ವ್ಯವಸ್ಥೆಯಿಂದ ಸಮಾಜದ ಮೇಲೆ ಆಗುತ್ತಿರುವ ಪರಿಣಾಮಗಳು, ಶಿಕ್ಷಕರ ಜವಾಬ್ದಾರಿಗಳ ಕುರಿತಂತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಸ್ಥಳೀಯ ರಂಭಾಪುರಿ ಖಾಸಾಪೀಠದ ಶ್ರೀ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿ, ಮೌಲ್ಯಯುತ ಶಿಕ್ಷಣ ನೀಡುವಲ್ಲಿ ವಹಿಸದಿರುವ ಎಚ್ಚರಿಕೆ,ಇಂದಿನ ಕಲಿಕಾ ಧೋರಣೆಗಳಿಂದ ಸಾಕಷ್ಟು ಸಮಸ್ಯೆಗಳು ಎದುರಾಗಿದೆ ಎಂದರು.ನಿವೃತ್ತ ಶಿಕ್ಷಕ ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಮಲ್ಲಪ್ಪ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸುವರ್ಣ ಒಡೆಯರ್, ಬ್ರಹ್ಮಕುಮಾರಿ ಪದ್ಮಕ್ಕ ಮಾತನಾಡಿದರು. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ನಿವೃತ್ತ ಶಿಕ್ಷಕರನ್ನು ಈಶ್ವರೀಯ ಗೌರವ ನೀಡಿ ಪುರಸ್ಕರಿಸಲಾಯಿತು.
ಬ್ರಹ್ಮಕುಮಾರಿ ವಸಂತಕ್ಕ, ಶಿವಾನಿ ಅಕ್ಕ, ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಲರಾಮ, ಲಯನ್ಸ್, ಲಯನ್ಸ್ ಬ್ಲೂಸಮ್ ಪಧಾಧಿಕಾರಿಗಳು, ಗಣ್ಯರು ಇದ್ದರು.17 ಬೀರೂರು 01ಬೀರೂರು ರಾಜಾಜಿನಗರ ಬಡಾವಣೆ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ನಡೆದ ಗುರುವಂದನೆ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕಿ ಕೆ.ಎಸ್.ವಸಂತಮ್ಮ ಉದ್ಘಾಟಿಸಿದರು.