ಪರಿಣಾಮಕಾರಿ ಕಲಿಕೆಗೆ ಶಿಕ್ಷಕರಿಗೆ ಸೂಕ್ತ ತರಬೇತಿ ಅಗತ್ಯ: ಮಹೇಶ್

| Published : Jun 15 2024, 01:01 AM IST

ಪರಿಣಾಮಕಾರಿ ಕಲಿಕೆಗೆ ಶಿಕ್ಷಕರಿಗೆ ಸೂಕ್ತ ತರಬೇತಿ ಅಗತ್ಯ: ಮಹೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಶಾಲಾ, ಕಾಲೇಜುಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ನ ಧ್ಯೆಯೋದ್ದೇಶಗಳ ಪರಿಣಾಮಕಾರಿ ಕಲಿಕೆಗೆ ಶಿಕ್ಷಕರಿಗೆ ಸೂಕ್ತ ತರಬೇತಿ ಅಗತ್ಯ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ರಾಜ್ಯ ಉಪಾಧ್ಯಕ್ಷ ಎ.ಎನ್. ಮಹೇಶ್ ಹೇಳಿದರು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ 2 ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಶಾಲಾ, ಕಾಲೇಜುಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ನ ಧ್ಯೆಯೋದ್ದೇಶಗಳ ಪರಿಣಾಮಕಾರಿ ಕಲಿಕೆಗೆ ಶಿಕ್ಷಕರಿಗೆ ಸೂಕ್ತ ತರಬೇತಿ ಅಗತ್ಯ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ರಾಜ್ಯ ಉಪಾಧ್ಯಕ್ಷ ಎ.ಎನ್. ಮಹೇಶ್ ಹೇಳಿದರು.

ನಗರದ ಸ್ಕೌಟ್ಸ್ ಭವನದಲ್ಲಿ ಶಿಕ್ಷಣ ಇಲಾಖೆ, ಜಿಪಂ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಸಹಯೋಗದಲ್ಲಿ ಗಿಲ್-ವಿಲ್ ವೃಕ್ಷಮಣಿದಾರರ ಸಮಾಗಮ ಹಾಗೂ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.ಯುವ ಸಮುದಾಯದ ವ್ಯಕ್ತಿತ್ವ ವಿಕಸನದೊಂದಿಗೆ ಸವಾಂಗೀಣ ಏಳಿಗೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಶ್ರಮಿಸುತ್ತಿದೆ. ಶಾಲೆಗಳಲ್ಲಿ ಶಿಕ್ಷಕರಿಗೆ ಈ ಬಗ್ಗೆ ತರಬೇತಿ ನೀಡಿದೆ ಆದಾಗ್ಯೂ ಪರಿಣಾಮಕಾರಿ ಹಾಗೂ ಗುಣಮಟ್ಟದ ಶಿಕ್ಷಣದ ಮೂಲಕ ಅನುಷ್ಠಾನಕ್ಕೆ ಗಿಲ್ ವಿಲ್ ವೃಕ್ಷಮಣಿದಾರರ ನೆರವು ಅಗತ್ಯ ಎಂದು ಹೇಳಿದರು.ಮಕ್ಕಳನ್ನು ದೈಹಿಕ, ಬೌದ್ಧಿಕ ಹಾಗೂ ಸಾಮಾಜಿಕವಾಗಿ ಪರಿಪೂರ್ಣರಾಗಿಸಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸೇವೆಗಳಲ್ಲಿ ಗುರುತಿಸಿಕೊಳ್ಳುವಂತೆ ಮಾಡಬೇಕು. ಜಾಗತಿಕವಾಗಿ ಉತ್ತಮ ಪ್ರಜೆಗಳಾಗಿ ರೂಪಿಸಿ ದೇಶಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.ಬಹುತೇಕ ಶಾಲೆಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಮೂಲ ತರಬೇತಿ ಹಾಗೂ ಧ್ಯೆಯೋದ್ದೇಶಗಳು ಪರಿಣಾಮ ಕಾರಿಯಾಗಿ ಅನುಷ್ಠಾನವಾಗಿಲ್ಲ. ಈ ನಿಟ್ಟಿನಲ್ಲಿ ಶಾಲೆ ಕಾಲೇಜುಗಳಲ್ಲಿ ತರಬೇತಿ ಪಡೆದ ಶಿಕ್ಷಕರಿಗೆ ಗಿಲ್- ವಿಲ್ ವೃಕ್ಷಮಣಿದಾರರು ಹೆಚ್ಚಿನ ಮಾಹಿತಿಯೊಂದಿಗೆ ತರಬೇತುಗೊಳಿಸಬೇಕು ಎಂದು ಸಲಹೆ ನೀಡಿದರು.ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್‌. ಷಡಕ್ಷರಿ ಮಾತನಾಡಿ, ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ. ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿಯಲ್ಲಿ ವೃಕ್ಷ ಮಣಿದಾರರ ತರಬೇತಿ ಉತ್ತಮ ಪದವಿ ಯಾಗಿದೆ. ಈ ತರಬೇತಿ ಪಡೆದ ಶಿಕ್ಷಕರು ರಾಷ್ಟ್ರಪತಿ ಹಾಗೂ ರಾಜ್ಯ ಪುರಸ್ಕಾರ ಪಡೆದ ಮಕ್ಕಳಿಗೆ ತರಬೇತಿ ನೀಡುವ ಮೂಲಕ ಮೌಲ್ಯಯುತ ವ್ಯಕ್ತಿಗಳಾಗಿ ರೂಪಿಸುವ ಹೊಣೆಗಾರಿಕೆ ಇರುತ್ತದೆ ಎಂದರು. ಶಾಲಾ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಈ ವೃಕ್ಷಮಣಿದಾರರ ಜವಾಬ್ದಾರಿಗಳು ಮತ್ತು ಅವರ ಕರ್ತವ್ಯ ಗಳು ಹೆಚ್ಚು. ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಆಯುಕ್ತ ಟಿ.ಕೆ.ಫಣಿರಾಜ್, ಡಿ.ಎಸ್.ಮಮತಾ, ತರಬೇತಿ ಆಯುಕ್ತರಾದ ಸಿ.ಸಂಧ್ಯಾರಾಣಿ, ಎಂ.ವಿ.ಪ್ರತಿಮಾ, ಕಾರ್ಯದರ್ಶಿ ನೀಲಕಂಠಚಾರ್, ಸಹಾಯಕ ಜಿಲ್ಲಾ ಆಯುಕ್ತ ಸಿದ್ದೇಗೌಡ, ಸಂಘಟನಾ ಆಯುಕ್ತ ಕಿರಣ್‌ಕುಮಾರ್, ನಿಹಾಲ್ ಇದ್ದರು.

14 ಕೆಸಿಕೆಎಂ 4ಚಿಕ್ಕಮಗಳೂರಿನ ಸ್ಕೌಟ್ಸ್ ಭವನದಲ್ಲಿ ಶುಕ್ರವಾರ ನಡೆದ ಗಿಲ್- ವಿಲ್ ವೃಕ್ಷಮಣಿದಾರರ ಸಮಾಗಮ ಕಾರ್ಯಕ್ರಮ ಹಾಗೂ ತರಬೇತಿ ಕಾರ್ಯಾಗಾರವನ್ನು ಎ.ಎನ್‌.ಮಹೇಶ್‌ ಉದ್ಘಾಟಿಸಿದರು. ಎಂ.ಎನ್‌. ಷಡಕ್ಷರಿ, ಫಣಿರಾಜ್, ಕಿರಣ್‌ಕುಮಾರ್‌, ಸಂಧ್ಯಾರಾಣಿ, ಪ್ರತಿಮಾ ಇದ್ದರು.