ಕಲ್ಪತರು ಪ್ರಥಮ ದರ್ಜೆ, ಪಿಯು ಕಾಲೇಜು, ಪಲ್ಲಾಗಟ್ಟಿ ಅಡವಪ್ಪ ಕಾಲೇಜುಗಳಿಂದ ಕಲ್ಪವೈಭವ
ಕನ್ನಡಪ್ರಭ ವಾರ್ತೆ ತಿಪಟೂರುಕಲ್ಪತರು ವಿದ್ಯಾಸಂಸ್ಥೆಯ ವತಿಯಿಂದ ಆಯೋಜಿಸಲಾಗಿರುವ ಕಲ್ಪವೈಭವ ಕಾರ್ಯಕ್ರಮ ಬಹಳ ಅದ್ಧೂರಿಯಾಗಿದ್ದು ಯಾವುದೇ ಚಾನಲ್‌ನ ಸಿನಿ ಕಾರ್ಯಕ್ರಮಗಳಿಗಿಂತ ಕಡಿಮೆ ಇಲ್ಲದಂತೆ ಆಯೋಜಿಸಿರುವುದು ವಿದ್ಯಾರ್ಥಿಗಳ ಹಾಗೂ ನೋಡುಗರ ಕಣ್ಣಿಗೆ ಹಬ್ಬದ ವಾತಾವರಣ ಮೂಡಿಸಿದೆ ಎಂದು ಕಿರುತೆರೆ ಹಾಗೂ ರಂಗಭೂಮಿ ಕಲಾವಿದ ಶ್ರೀನಾಥ್ ವಸಿಷ್ಠ ಹೇಳಿದರು.ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಕಲ್ಪತರು ಪ್ರಥಮ ದರ್ಜೆ ಕಾಲೇಜು, ಪಲ್ಲಾಗಟ್ಟಿ ಅಡವಪ್ಪ ಕಾಲೇಜು ಮತ್ತು ಕಲ್ಪತರು ಪದವಿಪೂರ್ವ ಕಾಲೇಜು ಸಂಯುಕ್ತವಾಗಿ ಆಯೋಜಿಸಿದ್ದ ಕಲ್ಪವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗುರು-ಶಿಷ್ಯರ ಸಂಬಂಧ ಅವಿನಾಭಾವವಾದುದು. ಗುರುಗಳು ತಮ್ಮ ಕೆಲಸವನ್ನು ಮಾತ್ರ ಮಾಡುವುದಿಲ್ಲ. ಒಬ್ಬ ಮಾರ್ಗದರ್ಶಿಯಾಗಿ ವಿದ್ಯಾರ್ಥಿಯನ್ನು ಸತ್ಪಜೆ ಮಾಡಲು ಶ್ರಮ ಹಾಕುತ್ತಾರೆ ಎಂದರು.
ಒಂದು ಮಗು ಮಾಂಟೆಸ್ಸರಿಯಿಂದ ತನ್ನ ವಿದ್ಯಾಬ್ಯಾಸ ಪ್ರಾರಂಭಿಸಿ ಪ್ರಯಮರಿ, ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು, ಪದವಿ ಮುಗಿಸುವಷ್ಟರಲ್ಲಿ ಸುಮಾರು ೫೦ಕ್ಕೂ ಹೆಚ್ಚು ಶಿಕ್ಷಕರಿಂದ ಪಾಠ ಕಲಿತು ಬೆಳೆಯುತ್ತದೆ. ವಿದ್ಯಾರ್ಥಿ ಕಲಿತು ದೊಡ್ಡವನಾದ ಮೇಲೆ ಸಮಾಜ ಸೇವೆ ಮಾಡಲಿ, ದೇಶಕ್ಕೆ ಉತ್ತಮ ಪ್ರಜೆಯಾಗಲಿ ಎಂಬ ಬಯಕೆ, ತುಡಿತ ಎಲ್ಲ ಶಿಕ್ಷಕರಲ್ಲಿರುತ್ತದೆ. ವಿದ್ಯಾರ್ಥಿಗಳಿಗೆ ಯಾವುದೇ ಸಂದರ್ಭದಲ್ಲೂ ತಪ್ಪುದಾರಿ ತುಳಿಯಲು ಯಾವುದೇ ಶಿಕ್ಷಕರು ಹೇಳಿಕೊಡುವುದಿಲ್ಲ. ಇದನ್ನು ಅನುಸರಿಸುವುದು ವಿದ್ಯಾರ್ಥಿಗಳ ಕೈಯಲ್ಲಿದೆ ಎಂದು ತಿಳಿಸಿದರು.ಸಂಸ್ಥೆಯ ಕಾರ್ಯದರ್ಶಿ ಎಚ್.ಜಿ.ಸುಧಾಕರ್ ಮಾತನಾಡಿ, ಕಲ್ಪತರು ವಿದ್ಯಾಸಂಸ್ಥೆಯ ಮೂರೂ ಕಾಲೇಜುಗಳು ತಾಯಿ ಬೇರು ಇದ್ದಂತೆ. ಮೂರೂ ಕಾಲೇಜು ಸೇರಿ ಒಂದೇ ಕಾರ್ಯಕ್ರಮ ಮಾಡುತ್ತಿರುವುದು ಇದೇ ಮೊದಲು. ಎಲ್ಲ ವಿದ್ಯಾರ್ಥಿಗಳೂ ಪೋಷಕರು ಒಂದೆಡೆ ಸೇರಿ ಅದ್ದೂರಿಯಾಗಿ ಆಚರಿಸಲು ನಿರ್ಣಯ ಮಾಡಲಾಗಿದೆ ಎಂದರು.ರ‍್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ, ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಗೆದ್ದು ಬಹುಮಾನ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪಲ್ಲಾಗಟ್ಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಜಯಕುಮಾರಿ ಸ್ವಾಗತಿಸಿದರು. ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಸೋಮಶೇಖರ್ ವಾರ್ಷಿಕ ವರದಿ ಓದಿದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಜಿ.ವಿ.ಮೋಹನ್‌ಕುಮಾರ್, ಸಂಸ್ಥೆಯ ಉಪಾಧ್ಯಕ್ಷರಾದ ಜಿ.ಪಿ.ದೀಪಕ್, ಬಾಗೇಪಲ್ಲಿ ನಟರಾಜು, ಟಿ.ಎಸ್.ಬಸವರಾಜು. ಕಾರ್ಯದರ್ಶಿಗಳಾದ ಜಿ.ಎಸ್.ಉಮಾಶಂಕರ್, ಎಂ.ಆರ್.ಸಂಗಮೇಶ್, ಟಿ.ಯು.ಜಗದೀಶಮೂರ್ತಿ, ಪಿಯು ಕಾಲೇಜು ಪ್ರಾಂಶುಪಾಲ ಗುಂಡಪ್ಪ ಇದ್ದರು. ಪೊಟೋ ೪-ಟಿಪಿಟಿ೪ರಲ್ಲಿ ತಿಪಟೂರಿನ ಕಲ್ಪತರು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಲ್ಪವೈಭವ ಕಾರ್ಯಕ್ರಮವನ್ನು ಖ್ಯಾತ ಕಿರುತೆರೆ ಹಾಗೂ ರಂಗಭೂಮಿ ಕಲಾವಿದ ಶ್ರೀನಾಥ್ ವಸಿಷ್ಠ ಉದ್ಘಾಟಿಸಿದರು.