ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ: ಬಿ.ಶಿವಶಂಕರ್‌

| Published : Mar 07 2024, 01:47 AM IST

ಸಾರಾಂಶ

ದೇಶದ ಭವಿಷ್ಯದ ರೂವಾರಿಗಳಾಗಿರುವ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠವಾದುದು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ. ಶಿವಶಂಕರ್‌ ಹೇಳಿದರು.

ಶೃಂಗೇರಿ: ದೇಶದ ಭವಿಷ್ಯದ ರೂವಾರಿಗಳಾಗಿರುವ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠವಾದುದು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ. ಶಿವಶಂಕರ್‌ ಹೇಳಿದರು.

ತಾಲೂಕಿನ ಕೆಳಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವರ್ಗಾವಣೆಗೊಂಡ ಶಿಕ್ಷಕ ಬಿ.ಆರ್‌ ಸತ್ಯ ನಾರಾಯಣರವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದ್ದರೆ, ವಿದ್ಯಾರ್ಥಿಗಳ ಭವಿಷ್ಯ ಶಿಕ್ಷಕರ ಕೈಯಲ್ಲಿದೆ. ಶಿಕ್ಷಕರು ವಿದ್ಯಾರ್ಥಿಗಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸುತ್ತಾರೆ.

ಸತ್ಯನಾರಾಯಣರವರು ಕೇವಲ ಶಿಕ್ಷರಲ್ಲದೇ ಚಿತ್ರಕಲೆಯಲ್ಲಿಯೂ ಪರಿಣಿತರಾಗಿದ್ದು ಬಹುಮುಖ ಪ್ರತಿಭೆ ಕಲಾವಿದರಾಗಿದ್ದಾರೆ. ಈ ಶಾಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ಶಾಲೆ ಪ್ರಗತಿಗೆ ಶ್ರಮಿಸಿದ್ದಾರೆ. ಇವರ ಕೊಡುಗೆ ಅನುಪಮವಾಗಿದೆ ಎಂದರು.

ಅಕ್ಷರ ದಾಸೋಹ ಸಮಿತಿ ಮಂಜುನಾಥ ನಾಯಕ್‌, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಿತಾ, ಶಿಕ್ಷಕರಾದ ದಿನೇಶ್, ಪವಿತ್ರ, ಸುಶೀಲ ಮತ್ತಿತರರು ಇದ್ದರು.6 ಶ್ರೀ ಚಿತ್ರ 1-

ಶೃಂಗೇರಿ ಕೆಳಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಬಿ.ಶಿವಶಂಕರ್‌ ಮಾತನಾಡಿದರು.ಕೃಷ್ಣಪ್ಪ,ಸುಶಿಲ,ದಿನೇಶ್‌ ಮತ್ತಿತರರು ಇದ್ದರು.