ಸ್ಪರ್ಧಾತ್ಮಕತೆಗೆ ತಂತ್ರಜ್ಞಾನ ತಿಳುವಳಿಕೆ ಅಗತ್ಯ

| Published : Jul 31 2024, 01:08 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಂತ್ರಜ್ಞಾನ ತಿಳುವಳಿಕೆ ಅವಶ್ಯಕವಾಗಿದೆ. ತಂತ್ರಜ್ಞಾನವನ್ನು ಪಡೆದು ಬೆಳೆಯಬೇಕಾದರೆ ಭಾಷೆ ಹಾಗೂ ಸಾಹಿತ್ಯದ ಅಧ್ಯಯನ ಅಗತ್ಯವಾಗಿದೆ ಎಂದು ಬಿಎಲ್‌ಡಿಇ ಸಂಸ್ಥೆಯ ಎಸ್.ಬಿ.ಕಲಾ ಹಾಗೂ ಕೆ.ಸಿ.ಪಿ.ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರಾಬಿಯಾ ಮಿರ್ಧೆ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ವಿಜಯಪುರಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಂತ್ರಜ್ಞಾನ ತಿಳುವಳಿಕೆ ಅವಶ್ಯಕವಾಗಿದೆ. ತಂತ್ರಜ್ಞಾನವನ್ನು ಪಡೆದು ಬೆಳೆಯಬೇಕಾದರೆ ಭಾಷೆ ಹಾಗೂ ಸಾಹಿತ್ಯದ ಅಧ್ಯಯನ ಅಗತ್ಯವಾಗಿದೆ ಎಂದು ಬಿಎಲ್‌ಡಿಇ ಸಂಸ್ಥೆಯ ಎಸ್.ಬಿ.ಕಲಾ ಹಾಗೂ ಕೆ.ಸಿ.ಪಿ.ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರಾಬಿಯಾ ಮಿರ್ಧೆ ಅಭಿಪ್ರಾಯಪಟ್ಟರು.

ನಗರದ ಸಿಕ್ಯಾಬ್ ಸಂಸ್ಥೆಯ ಎ.ಆರ್.ಎಸ್ ಇನಾಮದಾರ್ ಮಹಿಳಾ ಮಹಾವಿದ್ಯಾಲಯದ ಸ್ನಾತಕ ಹಾಗೂ ಸ್ನಾತಕೋತ್ತರ ಆಂಗ್ಲ ವಿಭಾಗ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸದಲ್ಲಿ ಉಪನ್ಯಾಸಕರಾಗಿ ಅವರು ಮಾತನಾಡಿದರು. ವಿದ್ಯಾರ್ಜನೆ ಮಾಡುವವರು ಪುಸ್ತಕ ಓದುವ ಸಂಸ್ಕೃತಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ರತನ್ ಟಾಟಾ ಹಾಗೂ ಬಿಲ್‌ಗೇಟ್ಸ್‌ ಓದುವ ಹವ್ಯಾಸ ಬೆಳೆಸಿಕೊಂಡು ಜಾಗತಿಕ ಮನ್ನಣೆ ಪಡೆದಿದ್ದಾರೆ. ಓದುವುದು ಒಳ್ಳೆಯ ಅಭಿರುಚಿ, ಅದರಲ್ಲೂ ಅಂಗ್ಲ ಭಾಷೆ ಮತ್ತು ಸಾಹಿತ್ಯದ ಓದು ಜಾಗತಿಕ ನೆಲೆಯಲ್ಲಿ ಗೌರವವನ್ನು ತಂದು ಕೊಡುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪೊ.ಎಂ.ಟಿ.ಕೊಟ್ನಿಸ್ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಅಂಗ್ಲ ಭಾಷೆ ಹಾಗೂ ಜ್ಞಾನ ಅತಿ ಅವಶ್ಯಕ. ಇದನ್ನು ಕಲಿಯಲು ಸಾಕಷ್ಟು ಸೌಲಭ್ಯಗಳಿವೆ. ಅವುಗಳನ್ನು ಬಳಸಿಕೊಂಡು ಅಭ್ಯಾಸ ಮಾಡಬೇಕೆಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.

ವೇದಿಕೆಯಲ್ಲಿ ಕಲಾ ವಿಭಾಗದ ಮುಖ್ಯಸ್ಥ ಡಾ.ಎಚ್.ಕೆ.ಯಡಹಳ್ಳಿ ಉಪಸ್ಥಿತರಿದ್ದರು. ಡಾ.ಮುಸ್ತಾಕ ಇನಾಮದಾರ, ಡಾ.ಹಾಜಿರಾ ಪರವೀನ್, ಇನ್ನುಳಿದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಆಸ್ಮಾ ನಾಗರದಿನ್ನಿ ಕುರಾನ್ ಪಠಣ ಮಾಡಿದರು. ಸುಶ್ಮಿತಾ ಬಂಡೆನವರ್ ಭಗವದ್ಗೀತೆ ವಾಚಿಸಿದರು, ಪ್ರೊ.ಅಬ್ದುಲ್ ರಜಾಕ್ ಅರಳಿಮಟ್ಟಿ ಅತಿಥಿಗಳ ಪರಿಚಯಿಸಿ ಸ್ವಾಗತ ಕೋರಿದರು, ಸಲ್ಮಾ ಇನಾಮದಾರ ನಿರೂಪಿಸಿದರು. ಪ್ರೊ.ತೌಸಿಫ್ ಅಹಮದ್ ಬಾಗವಾನ ವಂದಿಸಿದರು.