ನಾಲತವಾಡ: ತಹಸೀಲ್ದಾರ್‌ರ ಮಾನವೀಯತೆಯಿಂದ ಅಪಘಾತಕ್ಕೊಳಗಾದ ಯುವಕ ಪ್ರಾಣಾಪಾಯದಿಂದ ಪಾರು

| Published : Dec 19 2024, 01:33 AM IST / Updated: Dec 19 2024, 11:03 AM IST

ನಾಲತವಾಡ: ತಹಸೀಲ್ದಾರ್‌ರ ಮಾನವೀಯತೆಯಿಂದ ಅಪಘಾತಕ್ಕೊಳಗಾದ ಯುವಕ ಪ್ರಾಣಾಪಾಯದಿಂದ ಪಾರು
Share this Article
  • FB
  • TW
  • Linkdin
  • Email

ಸಾರಾಂಶ

 ತಹಸೀಲ್ದಾರ್‌ರ ಮಾನವೀಯತೆಯಿಂದ ಅಪಘಾತಕ್ಕೊಳಗಾದ ಯುವಕನೊಬ್ಬ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಗಳವಾರ ಪಟ್ಟಣದ ಹೊರ ವಲಯದ ನಾರಾಯಣಪುರ-ಮುದ್ದೇಬಿಹಾಳ ಮುಖ್ಯ ರಸ್ತೆಯಲ್ಲಿ ಸಂಭವಿಸಿದೆ.

 ನಾಲತವಾಡ: ತಹಸೀಲ್ದಾರ್‌ರ ಮಾನವೀಯತೆಯಿಂದ ಅಪಘಾತಕ್ಕೊಳಗಾದ ಯುವಕನೊಬ್ಬ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಗಳವಾರ ಪಟ್ಟಣದ ಹೊರ ವಲಯದ ನಾರಾಯಣಪುರ-ಮುದ್ದೇಬಿಹಾಳ ಮುಖ್ಯ ರಸ್ತೆಯಲ್ಲಿ ಸಂಭವಿಸಿದೆ.

ಯಾದಗಿರ ಜಿಲ್ಲೆಯ ನಾರಾಯಣಪೂರ ಗ್ರಾಮದ ಯುವಕ ಮಂಗಳವಾರ ಸಂಜೆ ಪಟ್ಟಣದ ಹೊರ ವಲಯದಲ್ಲಿ ನಾರಾಯಣಪುರ-ಮುದ್ದೇಬಿಹಾಳ ಮುಖ್ಯ ರಸ್ತೆಯಲ್ಲಿ ಗ್ರಾಮಕ್ಕೆ ತೆರಳುವ ವೇಳೆ ಬೈಕ್‌ ನಿಯಂತ್ರಣ ತಪ್ಪಿದ್ದರಿಂದ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ತೀವ್ರ ಗಾಯಗೊಂಡು ನರಳಾಡುತಿದ್ದಾಗ ಅದೇ ಮಾರ್ಗದಲ್ಲಿ ಮುದ್ದೇಬಿಹಾಳದ ಕಡೆ ಹೊರಟಿದ್ದ ಮುದ್ದೇಬಿಹಾಳ ತಹಸೀಲ್ದಾರ್‌ ಬಲರಾಮ ಕಟ್ಟಿಮನಿ ಅವರು ಯುವಕನ ಪರಿಸ್ಥಿತಿ ಕಂಡು ಕೂಡಲೆ ಗಾಯಾಳುವನ್ನು ತಮ್ಮ ವಾಹನದಲ್ಲಿ ಹಾಕಿ ನಾಲತವಾಡದ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ. 

ಅಲ್ಲಿ, ಸಕಾಲಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ, ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆಗೆ ಕರೆದೊಯ್ಯಲಾಗಿದೆ. ತಹಸೀಲ್ದಾರ್‌ರ ಈ ಮಾನವೀಯ ಕಾರ್ಯ ಪ್ರಾಣ ಉಳಿಯಲು ಕಾರಣವಾಗಿದೆ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.ತಹಸೀಲ್ದಾರ್‌ ಸಾಹೇಬರು ಸಕಾಲಕ್ಕೆ ಆಸ್ಪತ್ರೆಗೆ ಸೇರಿಸಿ ತಕ್ಷಣ ಚಿಕಿತ್ಸೆ ಚಿಕಿದ್ದರಿಂದಾಗಿ ಯುವಕ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವೈದ್ಯರು ತಿಳಿಸಿದರು. ಮಾನವೀಯ ನಡೆ ತೋರಿದ ತಹಸೀಲ್ದಾರ್‌ ಬಲರಾಮ ಕಟ್ಟಿಮನಿ ಅವರಿಗೆ ಆಭಾರಿಯಾಗಿದ್ದೇವೆ. ಅವರಿಗೆ ನಾವು ಕೃತಜ್ಞತೆ ಸಲ್ಲಿಸುವುದಾಗಿ. ಅಪಘಾತಕ್ಕೆ ಒಳಗಾಗಿದ್ದ ಯುವಕನ ಸ್ನೇಹಿತ ಅರುಣ ಕುಮಾರ ಧನ್ಯವಾದ ತಿಳಿಸಿದರು.