ಸಾರಾಂಶ
ತಾಲೂಕು ಮೇಲ್ಕುಂಟೆ ಗ್ರಾಮದ ಶ್ರೀ ಬಾಲಕೃಷ್ಣ ದೇವಸ್ಥಾನಕ್ಕೆ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತಹಸೀಲ್ದಾರ್ ಡಾ. ದತ್ತಾತ್ರೇಯ ಜೆ.ಗಾದ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಶಿರಾ: ತಾಲೂಕು ಮೇಲ್ಕುಂಟೆ ಗ್ರಾಮದ ಶ್ರೀ ಬಾಲಕೃಷ್ಣ ದೇವಸ್ಥಾನಕ್ಕೆ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತಹಸೀಲ್ದಾರ್ ಡಾ. ದತ್ತಾತ್ರೇಯ ಜೆ.ಗಾದ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಶ್ರೀ ಬಾಲಕೃಷ್ಣ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ವಿಶೇಷ ಅಲಂಕಾರ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು. ತಿರುಮಲ ತಿರುಪತಿಯ ದೇವಸ್ಥಾನದ ನೇರ ಸಂಪರ್ಕ ಹೊಂದಿರುವ ಮೇಲ್ಕುಂಟೆಯ ಬಾಲಕೃಷ್ಣ ದೇವಾಲಯಕ್ಕೆ ಪ್ರತಿವರ್ಷ ತಿರುಮಲ ತಿರುಪತಿ ದೇವಸ್ಥಾನದ ಸಾಲಿಗ್ರಾಮ ಆಗಮಿಸುತ್ತದೆ. ಈ ವೇಳೆ ವರ್ಷಕ್ಕೊಮ್ಮೆ ಪೂಜೆ ಸಲ್ಲಿಸುವುದು ವಾಡಿಕೆ. ನಗರಸಭೆ ಆಯುಕ್ತ ರುದ್ರೇಶ್, ಸದಸ್ಯರಾದ ಅಜಯ್ ಕುಮಾರ್ ಎಸ್.ಎನ್, ಎಂ.ಸಿ ರಾಘವೇಂದ್ರ ಗೌಡ, ಬರಗೂರು ಬಾಲಕೃಷ್ಣೇಗೌಡ ಹಾಜರಿದ್ದರು.