ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡಲಗಿ
ಮೂಡಲಗಿಯಲ್ಲಿ ಎರಡು ದಿನಗಳ ಕಾಲ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮೇಳನದಲ್ಲಿನ ಚಿಂತಕರ ಚಿಂತನೆಗಳನ್ನು ಎಲ್ಲ ಶಿಕ್ಷಕರು ತರಗತಿಗಳಿಗೆ ತೆಗೆದುಕೊಂಡು ಹೋಗಿ ನಮ್ಮ ನಾಡಿನ ಶ್ರೇಷ್ಠತೆಯನ್ನು ಮಕ್ಕಳಿಗೆ ತಿಳಿಸಬೇಕೆಂದು ಮೂಡಲಗಿ ಬಿಇಒ ಅಜೀತ ಮನ್ನಿಕೇರಿ ಹೇಳಿದರು.ಪಟ್ಟಣದ ಆರ್.ಡಿ.ಎಸ್ ಕಾಲೇಜು ಆವರಣದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಸಮಾರೋಪ ನುಡಿಗಳ್ನಾಡಿದ ಅವರು, ಸಮ್ಮೇಳನದಿಂದ ಪ್ರೊ.ಚಂದ್ರಶೇಖರ ಅಕ್ಕಿ ಅವರು ಮೂಡಲಗಿ ಭಾಗವನ್ನು ಪದ್ಮ ಪಾವನ ಮಾಡಿದ್ದಾರೆ. ಆಳಾಗಿ ದುಡ್ಡಿದ್ದರೆ ಅಕ್ಕಿ ಸರ್ ಗೆ ಸಿಕ್ಕಂತೆ ಭಾಗ್ಯ ಸಿಗುತ್ತದೆ, ಇತಿಹಾಸದಲ್ಲಿ ಅರಸೋತ್ತಿಗೆ ಬರುವುದು ಬಹಳ ಕಡಿಮೆ ಎಂದ ಅವರು ಪಟ್ಟಣದ ಹಾಗೂ ತಾಲೂಕಿನ ಪೂಜ್ಯರ ಸಹಕಾರದೊಂದಿಗೆ ಸಾಹಿತ್ಯ ಪರಿಷತ್ತಿನ ಸಹಕಾರದೊಂದಿಗೆ ಅತ್ಯುತ್ತಮವಾದ ಸಮ್ಮೇಳನ ಜರುಗುವುದಕ್ಕೆ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಹಾಗೂ ಕನ್ನಡಾಭಿಮಾನಿಗಳು ಮುತುವರ್ಜಿ ವಹಿಸಿದ್ದಕ್ಕಾಗಿ ಅಭಿನಂದಿಸಿದರು.
ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ.ಚಂದ್ರಶೇಖರ ಅಕ್ಕಿ ಮಾತನಾಡಿ, ಮೂಡಲಗಿ ತಾಲೂಕಿನಲ್ಲಿ ಕಲ್ಲೋಳಿಯಲ್ಲಿ ನಡೆದ ಗೋಕಾಕ ತಾಲೂಕು 3ನೇ ಸಾಹಿತ್ಯ ಸಮ್ಮೇಳನ ಮತ್ತು ಮೂಡಲಗಿಯಲ್ಲಿ ಜರುಗಿದ ಜಿಲ್ಲಾ ಸಮ್ಮೇಳನಾಧ್ಯಕ್ಷ ಆಗಿರುವುದು ನನ್ನ ಸೌಭಾಗ್ಯ ಎಂದರು.ಈ ಸಂದರ್ಭದಲ್ಲಿ ಮುನ್ಯಾಳ- ಬಾಗೋಜಿಕೊಪ್ಪದ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಕ.ಸಾ.ಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ವಿಧಾನಪರಿ?ತ ಸದಸ್ಯ ಹಣಮಂತ ನಿರಾಣಿ, ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲ್ಕರ, ನಿವೃತ್ತ ಪ್ರಾಚಾರ್ಯ ಎಸ್.ಎಂ. ಕಮದಾಳ, ಬಿ.ವಾಯ್.ಶಿವಾಪೂರ, ವಿ.ಎಸ್. ಹಂಚಿನಾಳ, ಆರ್.ಎಸ್. ಅಳಗುಂಡಿ, ಎಸ್.ಆಯ್. ಭಾಗೋಜಿ, ಭಾರತಿ ಮದಭಾವಿ ಹಾಗೂ ಅನೇಕ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮುನ್ಯಾಳ- ಬಾಗೋಜಿಕೊಪ್ಪದ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಕ.ಸಾ.ಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ವಿಧಾನಪರಿ?ತ ಸದಸ್ಯ ಹಣಮಂತ ನಿರಾಣಿ, ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲ್ಕರ, ನಿವೃತ್ತ ಪ್ರಾಚಾರ್ಯ ಎಸ್.ಎಂ. ಕಮದಾಳ, ಬಿ.ವಾಯ್.ಶಿವಾಪೂರ, ವಿ.ಎಸ್. ಹಂಚಿನಾಳ, ಆರ್.ಎಸ್. ಅಳಗುಂಡಿ, ಎಸ್.ಆಯ್. ಭಾಗೋಜಿ, ಭಾರತಿ ಮದಭಾವಿ ಹಾಗೂ ಅನೇಕ ಉಪಸ್ಥಿತರಿದ್ದರು.ಮುಂದಿನ ಪೀಳಿಗೆ ಕಲೆ ಉಳಿಸಬೇಕೆಂದರೆ ಜನಪದ ಕಲೆಗಳಿಂದ ಮಾತ್ರ, ಸರಕಾರ ರಾಜ್ಯಮಟ್ಟದ ಜನಪದ ಕಲಾರಂಗ ತರಬೇತಿ ಶಾಲೆಯನ್ನು ಬಾಗಲಕೋಟೆ ಅಥವಾ ಬೆಳಗಾವಿ ಜಿಲ್ಲೆಯಲ್ಲಿ ಪ್ರಾರಭಿಸಬೇಕು.ಪ್ರೊ.ಚಂದ್ರಶೇಖರ ಅಕ್ಕಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ.