ಮಠ-ಮಂದಿರಗಳು ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಬೆಳೆಸುತ್ತವೆ: ಡಾ.ರಾಮಕೃಷ್ಣೇಗೌಡ

| Published : Nov 20 2025, 12:15 AM IST

ಮಠ-ಮಂದಿರಗಳು ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಬೆಳೆಸುತ್ತವೆ: ಡಾ.ರಾಮಕೃಷ್ಣೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕದಲ್ಲಿನ ಇರುವ ಹಲವು ಪ್ರಸಿದ್ಧ ಮಠಗಳಲ್ಲಿ ಚುಂಚನಗಿರಿ ಕ್ಷೇತ್ರವು ಸಮಾಜದ ಸುಧಾರಣೆಯಲ್ಲಿ ಸಾಕಷ್ಟು ಪ್ರಾಮುಖ್ಯತೆವಹಿಸಿ ಕೆಲಸ ಮಾಡುತ್ತಿದೆ. ಬಿಜಿಎಸ್ ಸಂಸ್ಥೆಯೂ ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಬೆಳೆಸುವ ಕೆಲಸಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಠ-ಮಂದಿರಗಳು ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿಯನ್ನು ಬೆಳೆಸುತ್ತವೆ ಎಂದು ಬಿಜಿಎಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಹೇಳಿದರು.

ತಾಲೂಕಿನ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುಜರಾತ್‌ನ ಪುರಾಣಿ ಶ್ರೀಕೀರ್ತಿನ ಪ್ರಿಯದಾಸ್ ಜಿ.ಸ್ವಾಮಿ, ಸಾಧು ಅನಂಸ್ವರೂಪದಾಸ್ ಜಿ.ಸ್ವಾಮಿ ಹಾಗೂ ಸಾಧು ಭಜನ್ ಪ್ರಿಯದಾಸ್ ಜಿ.ಸ್ವಾಮಿ ಅವರನ್ನು ಅಭಿನಂದಿಸಿ ಮಾತನಾಡಿದರು.ಗುಜರಾತ್ ರಾಜ್ಯದಿಂದ ತ್ರಿಮೂರ್ತಿ ಸಾಧುಗಳು ಶಾಲೆಗೆ ಬಂದಿರುವುದು ನಮ್ಮ ಭಾಗ್ಯ. ಸಾಧುಗಳು ಬಹಳ ಶಿಸ್ತಿನಿಂದ ಬದುಕು ನಡೆಸುತ್ತಿದ್ದಾರೆ. ಶಿಸ್ತು, ಸಂಯಮ, ಸ್ವಚ್ಛತೆಗಾಗಿ ಸಾಧುಗಳು ಮಾದರಿಯಾಗಿದ್ದಾರೆ ಎಂದರು.

ಪುರಾಣಿ ಶ್ರೀಕೀರ್ತಿನ ಪ್ರಿಯದಾಸ್ ಜಿ.ಸ್ವಾಮಿ ಮಾತನಾಡಿ, ಕರ್ನಾಟಕದಲ್ಲಿನ ಇರುವ ಹಲವು ಪ್ರಸಿದ್ಧ ಮಠಗಳಲ್ಲಿ ಚುಂಚನಗಿರಿ ಕ್ಷೇತ್ರವು ಸಮಾಜದ ಸುಧಾರಣೆಯಲ್ಲಿ ಸಾಕಷ್ಟು ಪ್ರಾಮುಖ್ಯತೆವಹಿಸಿ ಕೆಲಸ ಮಾಡುತ್ತಿದೆ. ಬಿಜಿಎಸ್ ಸಂಸ್ಥೆಯೂ ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಬೆಳೆಸುವ ಕೆಲಸಮಾಡುತ್ತಿದೆ ಎಂದರು.

ಇದೇ ವೇಳೆ ಪ್ರತಿಷ್ಠಿತ ಖಾಸಗಿ ಸುದ್ದಿ ವಾಹಿನಿಯ ನೀಡುವ ಸುವರ್ಣ ಕನ್ನಡಿಗ ಇಂಡಿಯಾ ರಾಷ್ಟ್ರೀಯ ಪ್ರಶಸ್ತಿ ಪಡೆದ ಬಿಜಿಎಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಅವರನ್ನುಅಭಿನಂದಿಸಲಾಯಿತು.ಇಂದು ಸಹಕಾರ ಸಪ್ತಾಹ ಸಮಾರೋಪ: ಎಂ.ಲಿಂಗರಾಜು

ಮಳವಳ್ಳಿ:

ಪಟ್ಟಣದ ಟಿಎಪಿಸಿಎಂಎಸ್ ಕಚೇರಿ ಆವರಣದಲ್ಲಿ ನ.20ರಂದು 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭ ಹಾಗೂ ಜಿಲ್ಲೆಯ ಉತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಲಿಂಗರಾಜು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸಹಕಾರ ಮಹಾಮಂಡಳಿ ನಿ.ಬೆಂಗಳೂರು ಜಿಲ್ಲಾ ಸಹಕಾರ ಒಕ್ಕೂಟ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ, ಸಹಕಾರ ಇಲಾಖೆ, ಟಿಎಪಿಸಿಎಂಎಸ್ ಮಳವಳ್ಳಿ ತಾಲೂಕು ಹಾಗೂ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಸಪ್ತಾಹ ನಡೆಯಲಿದೆ ಎಂದರು.

ಕಾರ್ಯಕ್ರಮವನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಉದ್ಘಾಟಿಸುವರು. ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಲಿಂಗರಾಜು ಅಧ್ಯಕ್ಷತೆ ವಹಿಸುವರು. ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಎಂ.ಪುಟ್ಟಸ್ವಾಮಿಗೌಡ ಜಾಗತಿಕ ಸ್ಪರ್ಧಾತ್ಮಕತೆಗಾಗಿ ನವನಾವೀನ್ಯತೆಯ ಸಹಕಾರಿ ವ್ಯವಹಾರದ ಮಾದರಿಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆಂದರು.

ಅತಿಥಿಗಳಾಗಿ ಜಿಲ್ಲಾ ಸಹಕಾರ ಒಕ್ಕೂಟ ವಿಶೇಷಾಧಿಕಾರಿ ಕೆ.ಅನಿತಾ, ಮನ್ಮುಲ್ ಅಧ್ಯಕ್ಷ ಯು.ಸಿ. ಶಿವಕುಮಾರ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಸಿ ಜೋಗಿಗೌಡ, ಮನ್ಮುಲ್ ನಿರ್ದೇಶಕರಾದ ಡಿ. ಕೃಷ್ಣೇಗೌಡ, ಆರ್.ಎನ್ ವಿಶ್ವಾಸ್, ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಸಿ. ದೊಡ್ಡಮಾದೇಗೌಡ ಸೇರಿದಂತೆ ಎಲ್ಲಾ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಕ ಅಧಿಕಾರಿಗಳು ನಿರ್ದೇಶಕರು ಭಾಗವಹಿಸಲಿದ್ದಾರೆಂದು ಮಾಹಿತಿ ನೀಡಿದರು.ಚಂದನ ವಾಹಿನಿಯಲ್ಲಿಂದು ಸಾಹಿತಿ ಸಜಗೌ ಸಂದರ್ಶನ

ಮಂಡ್ಯ:

ಜಿಲ್ಲಾ ಯುವ ಬರಹಗಾರರ ಬಳಗದ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಾಹಿತಿ ಮಂಗಲ ಟಿ.ಸತೀಶ್ ಜವರೇಗೌಡ (ಸಜಗೌ) ಅವರ ಜೀವನ ಮತ್ತು ಸಾಧನೆ ಕುರಿತ ಸಂದರ್ಶನವು ಕೇಂದ್ರ ಸರ್ಕಾರದ ಅಧೀನದ ದೂರದರ್ಶನದ ಚಂದನ ವಾಹಿನಿಯ ಶುಭೋದಯ ಕರ್ನಾಟಕದಲ್ಲಿ (ನ.20) ಬೆಳಗ್ಗೆ 8 ರಿಂದ 9 ಗಂಟೆವರೆಗೆ ನೇರ ಪ್ರಸಾರವಾಗಲಿದೆ. ನಿರೂಪಕಿ ಸಂಧ್ಯಾಭಟ್ ಅವರು ಸಾಹಿತಿ ಮತ್ತು ಸಂಘಟಕ ಸಜಗೌ ಅವರನ್ನು ನೇರ ಸಂದರ್ಶನ ಮಾಡಲಿದ್ದಾರೆ. ಈ ಸಂದರ್ಶನ ಮಧ್ಯಾಹ್ನ 3 ರಿಂದ 4 ಗಂಟೆವರೆಗೆ ಹಾಗೂ ರಾತ್ರಿ 11 ರಿಂದ 12 ರವರೆಗೆ ಮರು ಪ್ರಸಾರವಾಗಲಿದೆ ಎಂದು ದೂರದರ್ಶನದ ಚಂದನ ವಾಹಿನಿ ನಿರ್ದೇಶಕಿ ಎಚ್.ಎನ್.ಆರತಿ ತಿಳಿಸಿದ್ದಾರೆ.