ಸಾರಾಂಶ
ಭಾರತೀಯ ಸಂಪ್ರದಾಯ, ಸಂಸ್ಕೃತಿ ಮತ್ತು ಕಲೆ ಅಳಿಯದೇ ಉಳಿಯುವಲ್ಲಿ ಮಹತ್ತರವಾದ ಮೈಲಿಗಲ್ಲುಗಳು ಎಂದರೆ ಕರ್ನಾಟಕದಲ್ಲಿ ನಿರ್ಮಿಸಿರುವ ಪ್ರಮುಖ ದೇವಾಲಯಗಳಾದ ಬೇಲೂರು, ಹಳೇಬೀಡು, ಸೋಮನಾಥಪುರ ದೇವಾಲಯಗಳ ನಿರ್ಮಾಣದಲ್ಲಿ ಪ್ರಮುಖರಾದ ಅಮರಶಿಲ್ಪಿ ಜಕಣಾಚಾರಿ. ಇಲ್ಲಿನ ವಾಸ್ತು ಶಿಲ್ಪಗಳು ದೇಶ ಮಾತ್ರವಲ್ಲದೇ ವಿಶ್ವ ಮಾನ್ಯತೆ ಪಡೆದಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಭಾರತೀಯ ಸಂಪ್ರದಾಯದಂತೆ ದೇಶದ ವಿವಿದೆಡೆ ನಿರ್ಮಿಸಿರುವ ದೇವಾಲಯಗಳು ಅಮರಶಿಲ್ಪಿ ಜಕಣಾಚಾರಿಯವರನ್ನು ಕಾಲ್ಪನಿಕ ವ್ಯಕ್ತಿಯಾಗಿಸದೆ ಇಂದಿನ ಮತ್ತು ಮುಂದಿನ ಪೀಳಿಗೆಗೆ ಕೌಶಲ್ಯ ಕಲೆಯನ್ನು ತಲುಪಿಸುವ ಸಂಪರ್ಕ ಕೊಂಡಿಯಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.ಸೋಮವಾರ ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿಶ್ವ ಕರ್ಮ ಸಮುದಾಯಕ್ಕೆ ಕೇಂದ್ರ ಸರ್ಕಾರ ಪಿ.ಎಂ ಯೋಜನೆ ಜಾರಿಗೆ ತಂದಿದೆ ಎಂದರು.ಆದರ್ಶಗಳನ್ನು ಪಾಲಿಸಬೇಕು
ನಗರಸಭೆ ಅದ್ಯಕ್ಷ ಗಜೇಂದ್ರ ಮಾತನಾಡಿ, ಪ್ರತಿಯೊಬ್ಬರೂ ಶ್ರದ್ದೆ ಹಾಗೂ ನಂಬಿಕೆಯಿಂದ ಕೆಲಸ ಮಾಡಿದರೆ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂಬುದಕ್ಕೆ ಅಮರ ಶಿಲ್ಪಿ ಜಕಣಾಚಾರಿ ನಿದರ್ಶನ.ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದರು. ಸಮಾಜ ಸೇವಕ ಜಿ.ಅನಿಲ್ ಮಾತನಾಡುತ್ತಾ, ಭಾರತೀಯ ಸಂಪ್ರದಾಯ, ಸಂಸ್ಕೃತಿ ಮತ್ತು ಕಲೆ ಅಳಿಯದೇ ಉಳಿಯುವಲ್ಲಿ ಮಹತ್ತರವಾದ ಮೈಲಿಗಲ್ಲುಗಳು ಎಂದರೆ ಕರ್ನಾಟಕದಲ್ಲಿ ನಿರ್ಮಿಸಿರುವ ಪ್ರಮುಖ ದೇವಾಲಯಗಳಾದ ಬೇಲೂರು, ಹಳೇಬೀಡು, ಸೋಮನಾಥಪುರ ದೇವಾಲಯಗಳ ನಿರ್ಮಾಣದಲ್ಲಿ ಪ್ರಮುಖರಾದ ಅಮರಶಿಲ್ಪಿ ಜಕಣಾಚಾರಿ. ಇಲ್ಲಿನ ವಾಸ್ತು ಶಿಲ್ಪಗಳು ದೇಶ ಮಾತ್ರವಲ್ಲದೇ ವಿಶ್ವ ಮಾನ್ಯತೆ ಪಡೆದಿದೆ ಎಂದು ತಿಳಿಸಿದರು.ಕಾರ್ಯಕ್ರಮಕ್ಕೂ ಮುನ್ನ ಚಿಕ್ಕಬಳ್ಳಾಪುರ ನಗರದ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ಜಾನಪದ ಕಲಾತಂಡಗಳು ಹಾಗೂ ಪಲ್ಲಕ್ಕಿಗಳು ಮತ್ತು ಸ್ತಬ್ದ ಚಿತ್ರಗಳೊಂದಿಗೆ ಬ್ರಹತ್ ಮೆರವಣಿಗೆಯು ಬಿ.ಬಿ ರಸ್ತೆಯ ಮೂಲಕ ಅದ್ದೂರಿ ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮಾಜ ಸೇವಕ ಜಿ.ಅನಿಲ್ನ, ಗರಸಭೆ ಉಪಾಧ್ಯಕ್ಷ ನಾಗರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿ ಕುಮಾರ್, ನಗರಸಭೆ ಸದಸ್ಯ ಮಂಜುನಾಥ್ ಚಾರಿ, ದೇವಾಲಯ ಕಟ್ಟಡ ಕಾರ್ಮಿಕ ಶಿಲ್ಪಕಲಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ. ಬಿ ನಾಗರಾಜಚಾರ್ಯ, ಗೌರವಾಧ್ಯಕ್ಷ ಶಿಲ್ಪಿ ಶಂಕರಾಚಾರ್ಯ ಹಾಗೂ ಅಧಿಕಾರಿಗಳು, ಸಾರ್ವಜನಿಕರು ಇದ್ದರು.