ದೇವಾಲಯಗಳು ಆಧ್ಯಾತ್ಮಿಕ ಶಕ್ತಿ ಕೇಂದ್ರಗಳು: ಶಾಸಕ ಬಸವರಾಜ ಶಿವಣ್ಣನವರ

| Published : Jan 08 2025, 12:15 AM IST

ದೇವಾಲಯಗಳು ಆಧ್ಯಾತ್ಮಿಕ ಶಕ್ತಿ ಕೇಂದ್ರಗಳು: ಶಾಸಕ ಬಸವರಾಜ ಶಿವಣ್ಣನವರ
Share this Article
  • FB
  • TW
  • Linkdin
  • Email

ಸಾರಾಂಶ

ದೇವಾಲಯಗಳು ಆಧ್ಯಾತ್ಮಿಕ ಶಕ್ತಿ ಕೇಂದ್ರಗಳಾಗಿದ್ದು, ಧಾರ್ಮಿಕ ಭಾವನೆಗಳೊಂದಿಗೆ ಸಂಸ್ಕೃತಿ ಸಂಪ್ರದಾಯ ಉಳಿಸುವುದರ ಜೊತೆಗೆ ಶಾಂತಿ ನೆಮ್ಮದಿ ನೀಡುವ ಸ್ಥಳವನ್ನಾಗಿ ಪರಿವರ್ತನೆ ಮಾಡಬೇಕಾಗಿದೆ ಎಂದು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಬ್ಯಾಡಗಿ: ದೇವಾಲಯಗಳು ಆಧ್ಯಾತ್ಮಿಕ ಶಕ್ತಿ ಕೇಂದ್ರಗಳಾಗಿದ್ದು, ಧಾರ್ಮಿಕ ಭಾವನೆಗಳೊಂದಿಗೆ ಸಂಸ್ಕೃತಿ ಸಂಪ್ರದಾಯ ಉಳಿಸುವುದರ ಜೊತೆಗೆ ಶಾಂತಿ ನೆಮ್ಮದಿ ನೀಡುವ ಸ್ಥಳವನ್ನಾಗಿ ಪರಿವರ್ತನೆ ಮಾಡಬೇಕಾಗಿದೆ ಎಂದು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ತಾಲೂಕಿನ ಬೆಳಕೇರಿ ಗ್ರಾಮದ ಶ್ರೀ ಮೈಲಮ್ಮ ದೇವಸ್ಥಾನ ಕಟ್ಟಡದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ದೇವಸ್ಥಾನಗಳು ನಿರ್ಮಾಣವಾಗಲು ಸಾರ್ವಜನಿಕರ ಜೊತೆಗೆ ಸರ್ಕಾರಗಳು ಕೂಡ ಕೈಜೋಡಿಸಬೇಕಾಗಿದ್ದು ತನ್ಮೂಲಕ ಗ್ರಾಮದೆಲ್ಲೆಡೆ ಭಕ್ತಿಯ ವಾತಾವರಣ ನಿರ್ಮಿಸಬೇಕಾಗಿದೆ ಎಂದರು. ರಾಜ್ಯ ಸರ್ಕಾರ ಕಳೆದ ಒಂದೂವರೆ ವರ್ಷದಲ್ಲಿ ಜನಪರ ಕಾರ್ಯಕ್ರಮ ರೂಪಿಸಿ ಬಹಳಷ್ಟು ಜನ ಮನ್ನಣೆ ಗಳಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ನಮ್ಮ ಅಭಿವೃದ್ಧಿ ಕಾರ್ಯಗಳು ವಿಪಕ್ಷಗಳಿಗೆ ಕಾಣಿಸುತ್ತಿಲ್ಲ, ಇನ್ನಾದರೂ ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಟೀಕಿಸದೇ ಕೈಜೋಡಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಚಿನ್ನಪ್ಪ ಹೊಸ್ಮನಿ, ನ್ಯಾಯವಾದಿ ಎಸ್.ಬಿ. ಅಂಬ್ಲಿ, ಡಾ.ಬಿ.ಸಿ.ಗೌಡ್ರ, ಮುಖಂಡರಾದ ಸುರೇಶಗೌಡ ಪಾಟೀಲ, ಮಾಲತೇಶ ದೊಡ್ಮನಿ, ಗಾಳೆಪ್ಪ ಇಚ್ಚಂಗಿ, ಸಂತೊಷ ಬೇವಿನಮರದ, ಹನುಮಂತ ಬ್ಯಾಡಗಿ, ಪ್ರಭು ಬೇವಿನಮರದ, ಮಂಜಪ್ಪ ಹೊಸ್ಮನಿ, ಮಾಲತೇಶ ರಟ್ಟಿಹಳ್ಳಿ, ಗುರುರಾಜ ಬ್ಯಾಡಗಿ, ಶಿವಾನಂದಪ್ಪ ಪೂಜಾರ, ಚಂದ್ರು ಇಚ್ಚಂಗಿ, ಪ್ರಕಾಶ ಹೊಸ್ಮನಿ, ಉಜ್ಜಪ್ಪ ದೇವರಗುಡ್ಡ, ಶಿವಪುತ್ರಪ್ಪ ಪೂಜಾರ, ಹನುಮಂತಪ್ಪ ಮಡಿವಾಳರ, ಮಹದೇವಪ್ಪ ಕರೇಗೌಡ್ರ, ಬಾಬು ಬೆನ್ನಳ್ಳಿ, ಮಾಲತೇಶ ಗೌಡ್ರ, ಸಂಜೀವಕುಮಾರ ಬೇವಿನಮರದ ಸೇರಿದಂತೆ ಇನ್ನಿತರರಿದ್ದರು.