ಪತ್ರಕರ್ತರ ಬಹುದಿನಗಳ ಬೇಡಿಕೆಯಾಗಿರುವ ಪರ್ತಕರ್ತರ ಭವನ ಕಟ್ಟಡಕ್ಕೆ ೧೦ ಲಕ್ಷ ರು. ಅನುದಾನ, ನನ್ನ ತಾಯಿಯ ಸ್ಮರಣಾರ್ಥವಾಗಿ ೩ ಲಕ್ಷ ರು. ಹಣವನ್ನು ದತ್ತಿನಿಧಿ ನೀಡಲಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ ಜಗಳೂರು
ಪತ್ರಕರ್ತರ ಬಹುದಿನಗಳ ಬೇಡಿಕೆಯಾಗಿರುವ ಪರ್ತಕರ್ತರ ಭವನ ಕಟ್ಟಡಕ್ಕೆ ೧೦ ಲಕ್ಷ ರು. ಅನುದಾನ, ನನ್ನ ತಾಯಿಯ ಸ್ಮರಣಾರ್ಥವಾಗಿ ೩ ಲಕ್ಷ ರು. ಹಣವನ್ನು ದತ್ತಿನಿಧಿ ನೀಡಲಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ಭರವಸೆ ನೀಡಿದರು.ಪಟ್ಟಣದ ವಾಲ್ಮೀಕಿ ಭವನದಲ್ಲಿ ಬುಧವಾರ ಕರ್ನಾಟಕ ಕಾರ್ಯನಿರತ ಪರ್ತಕರ್ತರ ಸಂಘ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ೨೦೨೫ನೆ-೨೮ನೇ ಸಾಲಿನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಸೇವಾ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪತ್ರಿಕಾ ರಂಗವನ್ನು ನಿಲುಗನ್ನಡಿಯಾಗಿ ಸ್ವೀಕರಿಸುತ್ತೇನೆ. ಆನೆಗೆ ಅಂಕುಶ, ರಸ್ತೆಗೆ ಹಂಪ್ಸ್, ವಾಹನಗಳಿಗೆ ಬೇಕ್ ಇರುವಂತೆ ಅಧಿಕಾರಿಗಳಿಗೆ, ರಾಜಕಾರಣಿಗಳು, ಭ್ರಷ್ಟರು, ಮೋಸಗಾರರಿಗೆ ಅಂಕುಶ ಪತ್ರಿಕೆಗಳು. ಪರ್ತಕರ್ತರು ಇಲ್ಲದಿದ್ದರೆ ಸಮಾಜದಲ್ಲಿರುವ ತಪ್ಪುಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ ಎಂದರು.ಇಲ್ಲಿ ಯಾವುದೇ ಮುಲಾಜು ಬೇಡ. ಯಾವುದೇ ಅಡೆತಡೆಗಳು ಬಂದರೂ ಲೇಖನಿ ಮುಂದೆ ನಿಲ್ಲುವುದಿಲ್ಲ. ತಂದೆ-ತಾಯಿ, ಕುಟುಂಬದವರು ತಪ್ಪು ಮಾಡಿದಾಗಲೂ ನೇರವಾಗಿ ಬರೆದಾಗ ಪತ್ರಿಕೆಗೆ ಬೆಲೆ ಬರುತ್ತದೆ ಎಂದರು.
ಪತ್ರಕರ್ತರಿಗೆ ನಿವೇಶನ ಮನೆ ಇರುವುದಿಲ್ಲ:ಕೋಡಿಹಳ್ಳಿ ಶ್ರೀ ಆದಿಜಾಂಬವ ಮಹಾಸಂಸ್ಥಾನ ಮಠದ ಷಡಕ್ಷರ ಮುನಿ ದೇಶಿಕೇಂದ್ರ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಪತ್ರಕರ್ತರು ತುಂಬ ಬುದ್ದಿವಂತರು, ಬಂಡವಾಳದಾರರಲ್ಲ. ಆರ್ಥಿಕವಾಗಿ ಸಬಲತೆ ಇಲ್ಲದಿದ್ದರು ತಲೆಯಲ್ಲಿ ಜ್ಞಾನದ ಸಂಪತ್ತು ಹೊಂದಿದ್ದಾರೆ. ಅಧಿಕಾರಿಗಳು, ರಾಜಕಾರಣಿಗಳು ಒಮ್ಮೊಮ್ಮೆ ಕಣ್ಣುಮುಚ್ಚಿ ಕುಳಿತಾಗ ಅವರನ್ನು ಕಣ್ಣು ತೆರೆಸುವ ಕೆಲಸ ಮಾಡುತ್ತಾರೆ. ಸಮಾಜದಲ್ಲಿ ನಿವೇಶನ ಇಲ್ಲದವರ ಪರವಾಗಿ ವರದಿ ಮಾಡುವ ಪತ್ರಕರ್ತರಿಗೆ ನಿವೇಶನ ಮತ್ತು ಮನೆ ಇರುವುದಿಲ್ಲ ಇದು ವಿಪರ್ಯಾಸ ಎಂದರು.
ಮಾಜಿ ಶಾಸಕ ಎಚ್.ಪಿ ರಾಜೇಶ್ ಮಾತನಾಡಿ, ಪತ್ರಕರ್ತರು ಸಾಕಷ್ಟು ಅಧ್ಯಾಯನ ಮಾಡಿ ವಸ್ತುನಿಷ್ಠ ವರದಿಯನ್ನು ಬರೆಯುವ ಮೂಲಕ ಸಮಾಜ ತಿದ್ದುವ ಕೆಲಸ ಮಾಡಬೇಕಿದೆ ಎಂದರು.ಜಿಲ್ಲಾಧ್ಯಕ್ಷ ಇ.ಎಂ ಮಂಜುನಾಥ, ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯ ಸಂಚಾಲಕ ಅಕ್ಕ ಭಾರತಿ, ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ, ನಿಕಟಪೂರ್ವ ಅಧ್ಯಕ್ಷ ಜಿ.ಎಸ್ ಚಿದಾನಂದ, ಹಿರಿಯ ಪತ್ರಕರ್ತರಾದ ಡಿ.ಶ್ರೀನಿವಾಸ್, ಅಣಬೂರು ಮಠದ ಕೊಟ್ರೇಶ್, ಬಿಜೆಪಿ ಮುಖಂಡ ಬಿಸ್ತುವಳ್ಳಿ ಬಾಬು ಮಾತನಾಡಿದರು.
ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಭದ್ರಿನಾಥ್ ತಾಲೂಕು ಅಧ್ಯಕ್ಷ ಲೋಕೇಶ್.ಎಂ ಐಹೊಳೆ ಹಾಗೂ ತಂಡದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿದಿ ಬೋಧಿಸಿದರು. ನಿಕಟಪೂರ್ವ ಅಧ್ಯಕ್ಷ ಜಿ.ಎಸ್ ಚಿದಾನಂದ್ ನೂತನ ಅಧ್ಯಕ್ಷರಿಗೆ ಜಿಲ್ಲಾಧ್ಯಕ್ಷ, ಗಣ್ಯರ ಸಮ್ಮುಖದಲ್ಲಿ ಅಧಿಕಾರ ಹಸ್ತಾಂತರ ಮಾಡಿದರು.ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಭದ್ರಿನಾಥ್, ರಾಜ್ಯ ಸಮಿತಿ ಸದಸ್ಯ ಕೆ. ಚಂದ್ರಣ್ಣ, ಖಜಾಂಚಿ ವೀರೇಶ್, ತಾಲೂಕಾಧ್ಯಕ್ಷ ಲೋಕೇಶ್.ಎಂ ಐಹೊಳೆ. ಸಹಾಯಕ ಚುನಾವಣಾಧಿಕಾರಿಯಾಗಿದ್ದ ಜೈಮುನಿ, ಜಿಲ್ಲಾ ಉಪಾಧ್ಯಕ್ಷ ಬಿ.ಪಿ ಸುಭಾನ್, ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ.ಮಹೇಶ್ವರಪ್ಪ, ಕೆಪಿಸಿಸಿ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಗುತ್ತಿದುರ್ಗ ರುದ್ರೇಶ್, ಬಿಜೆಪಿ ಮಂಡಲ ಉಪಾಧ್ಯಕ್ಷ ಪೂಜಾರಿ ಸಿದ್ದಪ್ಪ, ಕೂಡ್ಲಿಗಿ ಅಧ್ಯಕ್ಷ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಜಗದೀಶ್, ಉಪಾಧ್ಯಕ್ಷ ಧನ್ಯಕುಮಾರ್, ಖಜಾಂಚಿ ಎಚ್. ಬಾಬು, ಕಾರ್ಯದರ್ಶಿಗಳಾದ ಸೋಮನಗೌಡ, ಎಂ.ಸಿ ಬಸವರಾಜ್, ಸದಸ್ಯರಾದ ಸೈಯದ್ ವಾಸೀಂ, ರಕೀಬ್, ತಿಪ್ಪೇಸ್ವಾಮಿ ಎಸ್,ಮಹಾಂತೇಶ್ ಬ್ರಹ್ಮ, ಬಿಜೆಪಿ ಜಿಲ್ಲಾಧ್ಯಕ್ಷ ಶೇಖರಪ್ಪ ಮತ್ತಿತರರು ಇದ್ದರು.