ವಾಲ್ಮೀಕಿ ಜಯಂತಿ ಆಚರಣೆಗೆ ಆ ವ್ಯಕ್ತಿ ಆದರ್ಶ ಕಾರಣ

| Published : Nov 10 2024, 01:51 AM IST

ವಾಲ್ಮೀಕಿ ಜಯಂತಿ ಆಚರಣೆಗೆ ಆ ವ್ಯಕ್ತಿ ಆದರ್ಶ ಕಾರಣ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ನಿಡಗುಂದಿಆದಿಕವಿ ಮಹರ್ಷಿ ವಾಲ್ಮೀಕಿ ಅವರ ವ್ಯಕ್ತಿತ್ವ ಹಾಗೂ ಜೀವನದ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಸಾವಿರಾರು ವರ್ಷಗಳ ಹಿಂದೆ ಇದ್ದ ಒಬ್ಬ ವ್ಯಕ್ತಿಯ ಜಯಂತಿಯನ್ನು ನಾವೆಲ್ಲ ಇಂದು ಆಚರಿಸಬೇಕಾದರೆ, ಆ ವ್ಯಕ್ತಿಯ ಆದರ್ಶ ಹಾಗೂ ಮೌಲ್ಯಗಳ ಬಗ್ಗೆ ಮೊದಲು ತಿಳಿದುಕೊಳ್ಳಬೇಕು ಎಂದು ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ನಿಡಗುಂದಿ: ಆದಿಕವಿ ಮಹರ್ಷಿ ವಾಲ್ಮೀಕಿ ಅವರ ವ್ಯಕ್ತಿತ್ವ ಹಾಗೂ ಜೀವನದ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಸಾವಿರಾರು ವರ್ಷಗಳ ಹಿಂದೆ ಇದ್ದ ಒಬ್ಬ ವ್ಯಕ್ತಿಯ ಜಯಂತಿಯನ್ನು ನಾವೆಲ್ಲ ಇಂದು ಆಚರಿಸಬೇಕಾದರೆ, ಆ ವ್ಯಕ್ತಿಯ ಆದರ್ಶ ಹಾಗೂ ಮೌಲ್ಯಗಳ ಬಗ್ಗೆ ಮೊದಲು ತಿಳಿದುಕೊಳ್ಳಬೇಕು ಎಂದು ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.

ವಾಲ್ಮೀಕಿ ಭವನದಲ್ಲಿ ಶ್ರೀಗಳ ಆಶೀರ್ವಚನ ಹಾಗೂ ದಾನಿಗಳ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 12ನೇ ಶತಮಾನದಲ್ಲಿ ಬಸವಣ್ಣನ ವಚನಗಳಾಗಿರಬಹುದು, ಅಂಬೇಡ್ಕರ್ ಸಿದ್ಧಾಂತಗಳಾಗಿರಬಹುದು, ಇವೆಲ್ಲದರ ಮೂಲತತ್ವ ಶ್ರೀ ವಾಲ್ಮೀಕಿಯಲ್ಲಿ ಅಡಕವಾಗಿರುವುದನ್ನು ನಾವು ಕಾಣಬಹುದು ಎಂದರು.ಮಹರ್ಷಿ ವಾಲ್ಮೀಕಿ ಈಗಲೂ ಪ್ರಸ್ತುತವಾಗಿರುವುದು ಎರಡು ಕಾರಣಗಳಿಂದ. ಒಂದು ಅವರ ವ್ಯಕ್ತಿತ್ವ ಹಾಗೂ ಮತ್ತೊಂದು ಅವರು ಕಟ್ಟಿಕೊಟ್ಟ ರಾಮಾಯಣ ಮತ್ತು ಅದರಲ್ಲಿ ಬರುವ ರಾಮನ ವ್ಯಕ್ತಿತ್ವದಿಂದ. ಹಾಗೇಯೇ ವಾಲ್ಮೀಕಿಯೂ ಅಂತಹ ವ್ಯಕ್ತಿತ್ವಗಳಲ್ಲಿ ಮೊದಲಿಗರು ಎಂದು ತಿಳಿಸಿದರು.ರುದ್ರೇಶ್ವರ ಸಂಸ್ಥಾನ ಮಠದ ರುದ್ರಮುನಿ ಶ್ರೀಗಳು ಮಾತನಾಡಿ, ಮಹರ್ಷಿ ವಾಲ್ಮೀಕಿ ಭರತ ಖಂಡದ ಆದಿಗುರು ಎನ್ನುವುದು ಅತ್ಯಂತ ಸೂಕ್ತವಾಗಿದೆ. ಬೇಡರ ಕುಲದಲ್ಲಿ ಹುಟ್ಟಿ ಹಿಂಸಾ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿದ್ದ ಅವರು, ಅಹಿಂಸಾ ಪ್ರವೃತ್ತಿಗೆ ಬದಲಾಗಬೇಕು ಎಂಬ ಸಂಕಲ್ಪದೊಂದಿಗೆ ವರ್ಷಗಟ್ಟಲೇ ತಪಸ್ಸು ಮಾಡಿ, ವಾಲ್ಮೀಕಿಯಾಗಿ ರೂಪಗೊಂಡರು. ವಾಲ್ಮೀಕಿ ಸಮುದಾಯ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕು ಎಂದು ಕಿವಿಮಾತು ಹೇಳಿದರು.ನಿಡಗುಂದಿ ಪಟ್ಟಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ವಾಲ್ಮೀಕಿ ಸಮಾಜದಿಂದ ಹಮ್ಮಿಕೊಂಡ ವಾಲ್ಮೀಕಿ ಹಾಗೂ ಮಹಾತ್ಮರ ಸ್ತಬ್ಧ ಚಿತ್ರಗಳ ಹಾಗೂ ಅಲಂಕೃತ ಸಾರೋಟದಲ್ಲಿ ಶ್ರೀಗಳ ಮೆರವಣಿಗೆ ಅದ್ಧೂರಿಯಾಗಿ ನೆರವೇರಿತು. ನಿಡಗುಂದಿಯ ಕಮದಾಳ ಪುನರ್ವಸತಿ ಕೇಂದ್ರದಿಂದ ಅಲಂಕೃತ ಸಾರೋಟದಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀಗಳು, ರುದ್ರೇಶ್ವರ ಸಂಸ್ಥಾನ ಮಠದ ರುದ್ರಮುನಿ ಶ್ರೀಗಳು, ಹುಚ್ಚಪ್ಪ ಸ್ವಾಮಿಜಿ, ವೀರಕ್ತಮಠದ ಶಶಿಧರ ಶ್ರೀಗಳ ಭವ್ಯ ಮೆರವಣಿಗೆ ನಡೆಯಿತು.ಕಾರ್ಯಕ್ರಮದಲ್ಲಿ ಹುಚ್ಚಪ್ಪ ಸ್ವಾಮೀಜಿ, ವೀರಕ್ತಮಠದ ಶಶಿಧರ ಶ್ರೀಗಳು ಹಾಗೂ ಗಣ್ಯರು, ವಾಲ್ಮೀಕಿ ಸಮಾಜದ ಮುಖಂಡರು, ಸಮಾಜ ಬಾಂಧವರು ಇದ್ದರು.