ನಟ ದಿ. ವಿಷ್ಣುವರ್ಧನ್‍ ಸ್ಮಾರಕ ಧ್ವಂಸ ಖಂಡಿಸಿ ಪ್ರತಿಭಟನೆ

| Published : Aug 14 2025, 01:00 AM IST

ಸಾರಾಂಶ

ಬೆಂಗಳೂರಿನಲ್ಲಿ ನಟ ದಿ. ವಿಷ್ಣುವರ್ಧನ್ ಸ್ಮಾರಕ ಧ್ವಂಸಗೊಳಿಸಿರುವುದನ್ನು ಖಂಡಿಸಿ ಕರ್ನಾಟಕ ಸೇನಾಪಡೆ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಚಾಮರಾಜನಗರ: ಬೆಂಗಳೂರಿನಲ್ಲಿ ನಟ ದಿ. ವಿಷ್ಣುವರ್ಧನ್ ಸ್ಮಾರಕ ಧ್ವಂಸಗೊಳಿಸಿರುವುದನ್ನು ಖಂಡಿಸಿ ಕರ್ನಾಟಕ ಸೇನಾಪಡೆ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಮಾತನಾಡಿ, ನಟ ವಿಷ್ಣುವರ್ಧನ್ ರಾಜ್ಯ ಕಂಡಂತಹ ಅತ್ಯಂತ ಶ್ರೇಷ್ಠ ನಟ. ಡಾ.ರಾಜ್ ಕುಮಾರ್ ನಂತರದಲ್ಲಿ ಕನ್ನಡ ಚಿತ್ರರಂಗವನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ದಕ್ಷಿಣ ಭಾರತದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು. ಯಾವುದೇ ಸರ್ಕಾರಗಳು ಪ್ರಶಸ್ತಿ ನೀಡಲಿಲ್ಲ. ಧ್ವಂಸವಾಗಿರುವ ಸ್ಥಳದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಬೇಕು ಎಂದು ಒತ್ತಾಯಿಸಿದರು. ಶ್ರೀನಿವಾಸಗೌಡ, ಸಿ.ಎಂ ನರಸಿಂಹಮೂರ್ತಿ, ಮಹದೇವನಾಯಕ, ಪಣ್ಯದಹುಂಡಿ ರಾಜು, ಮುತ್ತುರಾಜು, ಡ್ಯಾನ್ಸ್ ಬಸವರಾಜು, ಆಟೋ ಲಿಂಗರಾಜು, ರವಿಚಂದ್ರಪ್ರಸಾದ್ , ಸುಬ್ಬಯ್ಯ, ಅಜಯ್, ರಾಚಪ್ಪ, ಆಟೋ ಬಸವರಾಜು, ವಿಷ್ಣುವರ್ಧನ್ ಅಭಿಮಾನಿ ಬಳಗದ ಸ್ವಾಮಿ, ಅಮಚವಾಡಿ ರಾಜು, ಗಿರಿಪ್ರಸಾದ್, ರಾಜೇಂದ್ರ, ಪ್ರಭುಸ್ವಾಮಿ, ಶಿವು, ಸಂಜು, ಚಾ.ಸಿ.ಸಿದ್ದರಾಜು, ಮನು, ನಂದು, ಸುದೀಪ್ ಶೆಟ್ಟಿ, ಶಿವರಾಜ್, ಮುತ್ತಿಗೆ ಗೋವಿಂದರಾಜ, ಶಿವು ಇದ್ದರು.