ಮಾರ್ನಾಡು ಹೊಯಿಪಾಲ ದೈವಗಳ ವಾರ್ಷಿಕ ಉತ್ಸವ ನಾಳೆಯಿಂದ

| Published : Mar 14 2025, 12:31 AM IST

ಸಾರಾಂಶ

ಮಾರ್ನಾಡು ಶ್ರೀ ಕ್ಷೇತ್ರ ಹೊಯಿಪಾಲಬೆಟ್ಟ ಶ್ರೀ ಧರ್ಮರಸು, ಶ್ರೀ ಕೊಡಮಣಿತಾಯ ಮತ್ತು ಶ್ರೀ ಬ್ರಹ್ಮ ಬೈದರ್ಕಳ ದೈವಗಳ ವಾರ್ಷಿಕ ನೇಮೋತ್ಸವವು ಶನಿವಾರದಿಂದ ಮಾ. 18ರ ವರೆಗೆ ಗ್ರಾಮ ಪುರೋಹಿತ ವೇ.ಮೂ. ಅನಂತ ಪದ್ಮನಾಭ ಅಸ್ರಣ್ಣರ ನೇತೃತ್ವದಲ್ಲಿ ಜರಗಲಿದೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಮಾರ್ನಾಡು ಶ್ರೀ ಕ್ಷೇತ್ರ ಹೊಯಿಪಾಲಬೆಟ್ಟ ಶ್ರೀ ಧರ್ಮರಸು, ಶ್ರೀ ಕೊಡಮಣಿತಾಯ ಮತ್ತು ಶ್ರೀ ಬ್ರಹ್ಮ ಬೈದರ್ಕಳ ದೈವಗಳ ವಾರ್ಷಿಕ ನೇಮೋತ್ಸವವು ಶನಿವಾರದಿಂದ ಮಾ. 18ರ ವರೆಗೆ ಗ್ರಾಮ ಪುರೋಹಿತ ವೇ.ಮೂ. ಅನಂತ ಪದ್ಮನಾಭ ಅಸ್ರಣ್ಣರ ನೇತೃತ್ವದಲ್ಲಿ ಜರಗಲಿದೆ.ಈ ಕುರಿತು ಮಾಹಿತಿ ನೀಡಿರುವ ಧರ್ಮದರ್ಶಿ ಮತ್ತು ಅನುವಂಶಿಕ ಆಡಳಿತ ಮೊಕ್ತೇಸರ ಬೆಳಿಯೂರುಗುತ್ತು ರಾಜೇಶ್ ಬಲ್ಲಾಳ್ ಯಾನೆ ರಾಜೇಶ್ ಕೊಟ್ಟಾರಿ, ಶುಕ್ರವಾರ ಬೆಳಗ್ಗೆ ಗಂಟೆ 11ಕ್ಕೆ ಶ್ರೀ ವರ್ಧಮಾನ ಸ್ವಾಮಿಗೆ ಕ್ಷೀರಾಭಿಷೇಕ, ಶ್ರೀ ಪದ್ಮಾವತೀ ದೇವಿಗೆ ಹೂವಿನ ಪೂಜೆ, ಹೊಯಿಪಾಲಬೆಟ್ಟದಲ್ಲಿ ಶ್ರೀ ಕುಂಭಕಂಠಿನಿಗೆ ಹೂವಿನ ಪೂಜೆ ನಡೆಯಲಿದೆ.

ಶನಿವಾರ ಬೆಳಗ್ಗೆ 9ಕ್ಕೆ ಬೆಳಿಯೂರುಗುತ್ತು ಮತ್ತು ಪೊಸಲಾಯಿ ತಾವಿನಿಂದ ಭಂಡಾರಗಳ ಆಗಮನ. ಧ್ವಜಾರೋಹಣ, ಬಲಿ, ಮಧ್ಯಾಹ್ನ ಅನ್ನಸಂತರ್ಪಣೆ ರಾತ್ರಿ ಧರ್ಮರಸು ದೈವದ ನೇಮ, ತುಳು ಯಕ್ಷಗಾನ ಜರಗಲಿದೆ.

16ರಂದು ಬೆಳಿಗ್ಗೆ ಗಂಟೆ 10.30ಕ್ಕೆ ಶ್ರೀ ಕುಂಭಕಂಠಿನಿ ದೈವಕ್ಕೆ ಪಂಚಪರ್ವ, ದೈವದರ್ಶನ ಅಭಯವಾಕ್ಯ, ಮಧ್ಯಾಹ್ನ ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ರಾತ್ರಿ ಗಂಟೆ 8ರಿಂದ ಚೆಂಡು, ಅಂಬೋಡಿ, ಸೂಟೆದಾರ, ಬಲಿ, ಶ್ರೀ ಕುಂಭಕಂಠಿನಿ ದೈವದ ಗಗ್ಗರ ಸೇವೆ, 17ರಂದು ಸಂಜೆ ಗಂಟೆ 7.30ರಿಂದ ಹೊಯ್ಸಳ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ, ಧಾರ್ಮಿಕ ಸಭೆ, ಶ್ರೀ ಬ್ರಹ್ಮಬೈದರ್ಕಳ ನೇಮ, ಬಲಿ, ಉತ್ಸವ ನಡೆಯಲಿದೆ.

18ರಂದು ಪೂರ್ವಾಹ್ನ ಗಂಟೆ 6ಕ್ಕೆ ಮಾಯಂದಾಲೆ ನೇಮ, ಅವರೋಹಣ, ಸಂಪ್ರೋಕ್ಷಣೆ, ಶ್ರೀ ದೈವಗಳ ಭಂಡಾರ ನಿರ್ಗಮನ ಜರಗಲಿದೆ ಎಂದು ಅವರು ತಿಳಿಸಿದ್ದಾರೆ.