ಪಟ್ಟದ್ದೇವರಿಗೆ ನೀಡಿದ ಪ್ರಶಸ್ತಿ ಇಡೀ ರಾಜ್ಯಕ್ಕೆ ಹೆಮ್ಮೆ

| Published : Jul 28 2024, 02:07 AM IST

ಪಟ್ಟದ್ದೇವರಿಗೆ ನೀಡಿದ ಪ್ರಶಸ್ತಿ ಇಡೀ ರಾಜ್ಯಕ್ಕೆ ಹೆಮ್ಮೆ
Share this Article
  • FB
  • TW
  • Linkdin
  • Email

ಸಾರಾಂಶ

The award given to Pattadevar is the pride of the entire state

ಬೀದರ್‌ ವಿವಿ ಕುಲಪತಿ ಪ್ರೊ. ಬಿಎಸ್‌ ಬಿರಾದಾರರಿಂದ ನಾಡೋಜ ಡಾ. ಪಟ್ಟದ್ದೇವರಿಗೆ ಮಾಗನೂರ ಬಸಪ್ಪ ಪ್ರಶಸ್ತಿ ಪ್ರದಾನ ಕನ್ನಡಪ್ರಭ ವಾರ್ತೆ ಬೀದರ್‌

ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರಿಗೆ ನೀಡಿದ ಮಾಗನೂರ ಬಸಪ್ಪ ಪ್ರಶಸ್ತಿ ಜಿಲ್ಲೆಗೆ ಅಲ್ಲ ಇಡೀ ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಅಲ್ಲದೇ ಪ್ರಶಸ್ತಿಗೆ ಗೌರವ ಬಂದಂತಾಗಿದೆ ಎಂದು ಬೀದರ್‌ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಎಸ್‌.ಬಿ. ಬಿರಾದಾರ ನುಡಿದರು.

ಅವರು ಇಲ್ಲಿನ ಪೂಜ್ಯ ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಶನಿವಾರ ದಾವಣಗೆರೆಯ ಕನ್ನಡ ಸಾಹಿತ್ಯ ಪರಿಷತ್ತು ಮಾಗನೂರು ಬಸಪ್ಪ ಪ್ರತಿಷ್ಠಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಬೀದರ್‌ ಸಹಯೋಗದೊಂದಿಗೆ 2023ನೇ ಸಾಲಿನ ''''''''''''''''ಶರಣ ಮಾಗನೂರು ಬಸಪ್ಪ ಪ್ರಶಸ್ತಿ'''''''''''''''' ಪ್ರದಾನ ಮಾಡಿ ಮಾತನಾಡಿದ ಅವರು, ಬೆವರು ಸುರಿಸಿದ ಹಣದಲ್ಲಿ ಪ್ರಶಸ್ತಿ ನೀಡಿದ್ದು ಪ್ರಶಂಸನೀಯವಾಗಿದೆ. ಪ್ರಶಸ್ತಿಗೆ ಬೆಲೆ ಬಂದಿದೆ. ಡಾ. ಪಟ್ಟದ್ದೇವರು ಸಮಾಜಕ್ಕೆ ತಿಳಿಹೇಳಲು ತಲ್ಲೀನರಾಗಿ ಬಸವತತ್ವ ಸಿದ್ಧಾಂತದ ಬಗ್ಗೆ ಜನರಿಗೆ ಪರಿಚಯಿಸುವರು ಎಂದರು.

ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಡಾ. ಗೀತಾ ಈಶ್ವರ ಖಂಡ್ರೆ ಸಮಾರಂಭ ಉದ್ಘಾಟಿಸಿದರು.

ಹುಲಸೂರಿನ ಗುರು ಬಸವೇಶ್ವರ ಸಂಸ್ಥಾನ ಮಠದ ಡಾ ಶಿವಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನು ಮಾಡಿದ ಕಾರ್ಯ 20ನೇ ಶತಮಾನದಲ್ಲಿ ಭಾಲ್ಕಿಯ ಲಿಂ. ಡಾ. ಚನ್ನಬಸವ ಪಟ್ಟದ್ದೇವರು ಮಾಡಿದ್ದಾರೆ ಯಾವ ಜಗದ್ಗುರುಗಳು ಕೂಡ ಇಂತಹ ಕೆಲಸ ಮಾಡಿಲ್ಲ ಎಂದರು.

ಬಸವ ಸೇವಾ ಪ್ರತಿಷ್ಠಾನ ಬೀದರಿನ ಡಾ. ಗಂಗಾಂಬಿಕಾ ಅಕ್ಕ ಸಮ್ಮುಖ ವಹಿಸಿ ಮಾತನಾಡಿ, ಡಾ. ಬಸವಲಿಂಗ ಪಟ್ಟದ್ದೇವರು ಎಂದರೆ ತಾಯಿ ಸಂಸ್ಕೃತಿ ಇದ್ದಂತೆ ಇವರೊಬ್ಬ ಜೀವಂತ ಮೂರ್ತಿ ಇದ್ದಾರೆ. ಯಾರ ಬಳಿಯು ಸನ್ಮಾನ ಮಾಡಿಕೊಂಡವರಲ್ಲ ಎಂದ ಅವರು ಬಸವ ತತ್ವ ಇದ್ದಲ್ಲಿ ಸಮಾನತೆಯ ಭಾವ ಬರುತ್ತದೆ. ಪೂಜ್ಯರು ಮಠದ ಗುರುಗಳಲ್ಲದೇ ಮನದ ಗುರುಗಳು ಕೂಡ ಆಗಿದ್ದಾರೆ ಎಂದು ನುಡಿದರು.

ಕರ್ನಾಟಕ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ. ಬಸವರಾಜ ಬಲ್ಲೂರ ಅಭಿನಂದನಾ ನುಡಿಗಳನ್ನಾಡಿದರು. ದಾವಣಗೆರೆ ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ. ಎಚ್‌.ಎಸ್‌ ಮಂಜುನಾಥ ಕುರ್ಕಿ ಮಾಗನೂರ ಬಸಪ್ಪನವರ ವ್ಯಕ್ತಿತ್ವ ಕುರಿತು ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶಟ್ಟಿ ಆಶಯ ನುಡಿಗಳನ್ನಾಡಿದರು.

ಮಾಗನೂರ ಬಸಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಎಂ.ಬಿ. ಸಂಗಮೇಶ್ವರ ಗೌಡರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಮುಖ್ಯ ಅತಿಥಿಗಳಾಗಿ ದಾವಣಗೆರೆ ಕ.ಸಾ.ಪ ಅಧ್ಯಕ್ಷ ವ್ಹಿ. ವಾಮದೇವಪ್ಪ, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಬಿ.ಜಿ ಶೆಟಕಾರ, ಬಸವಕೇಂದ್ರದ ಜಿಲ್ಲಾಧ್ಯಕ್ಷ ಶರಣಪ್ಪ ಮಿಠಾರೆ, ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ್‌ ಗಾದಗಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಜಾಗತಿಕ ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ, ಡಾ. ಚನ್ನಬಸವ ಪಟ್ಟದ್ದೇವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಯರಾಜ ಖಂಡ್ರೆ, ಬಸವರಾಜ ಬುಳ್ಳಾ, ಶ್ರೀಕಾಂತ ಸ್ವಾಮಿ, ಶಿವಶಂಕರ ಟೋಕರೆ ಹಾಗೂ ಎಂಎಸ್‌ ಮನೋಹರ ಭಾಗವಹಿಸಿದ್ದರು.