ಹೊಸ ಅಂಗಣ ಪ್ರಕಟಣಾಲಯದ ವತಿಯಿಂದ ಜರಗಿದ ಸಮಾರಂಭದಲ್ಲಿ ಸಂಪಾದಕ ಹರಿಶ್ಚಂದ್ರ ಪಿ. ಸಾಲ್ಯಾನ್ ಅವರ ‘ಮೂಲ್ಕಿಯ ಕೀರ್ತಿಶೇಷ ಸಾಧಕರು’ ಕೃತಿ ಬಿಡುಗಡೆ ಸಮಾರಂಭ ಮೂಲ್ಕಿಯಲ್ಲಿ ನೆರವೇರಿತು.
ಮೂಲ್ಕಿ: ಸ್ವಾತಂತ್ರ್ಯ ಹೋರಾಟಗಾರ ಕಾರ್ನಾಡ್ ಸದಾಶಿವ ರಾಯರು, ವಿಜಯ ಬ್ಯಾಂಕ್ ಸ್ಥಾಪಕ ಮೂಲ್ಕಿ ಸುಂದರರಾಮ್ ಶೆಟ್ಟಿ ಅವರಂಹತಹ ಹಲವಾರು ಸಾಧಕರಿಗೆ ಜನ್ಮ ನೀಡಿದ ಮೂಲ್ಕಿಯ ಕೀರ್ತಿ ಶೇಷ ಸಾಧಕರ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಕೃತಿಯ ಮೂಲಕ ಪರಿಚಯಿಸುವ ಉತ್ತಮ ಕಾರ್ಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಹೇಳಿದ್ದಾರೆ.ಮೂಲ್ಕಿ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಹೊಸ ಅಂಗಣ ಪ್ರಕಟಣಾಲಯದ ವತಿಯಿಂದ ಜರಗಿದ ಸಮಾರಂಭದಲ್ಲಿ ಸಂಪಾದಕ ಹರಿಶ್ಚಂದ್ರ ಪಿ. ಸಾಲ್ಯಾನ್ ಅವರ ‘ಮೂಲ್ಕಿಯ ಕೀರ್ತಿಶೇಷ ಸಾಧಕರು’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು ಮಾತನಾಡಿದರು.
ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಸಮೃದ್ಧಿ ಹೊಂದಿರುವ ಮೂಲ್ಕಿಯ ಮಹನೀಯರು ದೇಶಕ್ಕೆ ನೀಡಿದ ಕೊಡುಗೆ ಅಪಾರವಾಗಿ ಎಂದರು.ಅಧ್ಯಕ್ಷತೆ ವಹಿಸಿದ್ದ ಕ.ಸಾ.ಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು ಮಾತನಾಡಿ, ಮೂಲ್ಕಿಯ ಹಿರಿಯ ಮಹಾನ್ ಸಾಧಕರು ಮೂಲ್ಕಿಯ ಹೆಸರನ್ನು ದೇಶದ ಉದ್ದಗಲಕ್ಕೆ ಪಸರಿಸಿದ್ದು ಅವರ ಸಾಧನೆ ತಿಳಿಸುವ ಕಾರ್ಯ ಕೃತಿಯ ಮೂಲಕ ಆಗಿದೆಯೆಂದು ಹೇಳಿದರು.ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕ ಭಾಸ್ಕರ್ ಬಂಗೇರ ಅವರನ್ನು ಪತ್ನಿ ಪುಷ್ಪಲತಾ ಜೊತೆ ಗೌರವಿಸಲಾಯಿತು.ದ.ಕ. ಜಿಲ್ಲಾ ಕ.ಸಾ.ಪಂ. ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮೂಲ್ಕಿಯ ಖ್ಯಾತ ವ್ಯೆದ್ಯ ಡಾ.ಅರುಣ್ ಕುಡ್ಡ, ಧನಂಜಯ ಅಂಚನ್ ಕೆ ಎಸ್ ರಾವ್ ನಗರ ಭಾಗವಹಿಸಿದ್ದರು.ಸಮಾಜ ಸೇವಕ ಕೆ ಎಂ ಕೋಟ್ಯಾನ್ ಕೃತಿ ಪರಿಚಯ ಮಾಡಿದರು. ಹೊಸ ಅಂಗಣ ಮಾಸ ಪತ್ರಿಕೆಯ ಸಂಪಾದಕ ಹರಿಶ್ಚಂದ್ರ ಪಿ. ಸಾಲ್ಯಾನ್, ವಾಸು ಪೂಜಾರಿ ಚಿತ್ರಾಪು ಮತ್ತಿತರರು ಇದ್ದರು.ಶಿವರಾಂ ಜಿ ಅಮೀನ್ ಸ್ವಾಗತಿಸಿದರು. ದಿನೇಶ್ ಶೆಟ್ಟಿ ವಂದಿಸಿದರು. ದಿನೇಶ್ ಕೋಲ್ನಾಡ್ ನಿರೂಪಿಸಿದರು.