ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಬೊಮ್ಮನ ಹಳ್ಳಿ ಸಂಭ್ರಮದಲ್ಲಿ ಜನಸಾಗರ

| Published : Sep 22 2024, 01:50 AM IST / Updated: Sep 22 2024, 09:46 AM IST

ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಬೊಮ್ಮನ ಹಳ್ಳಿ ಸಂಭ್ರಮದಲ್ಲಿ ಜನಸಾಗರ
Share this Article
  • FB
  • TW
  • Linkdin
  • Email

ಸಾರಾಂಶ

ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಆಯೋಜಿಸಿರುವ ಬೊಮ್ಮನಹಳ್ಳಿ ಸಂಭ್ರಮದಲ್ಲಿ ಎರಡನೇ ದಿನವೂ ಜನರು ಆಗಮಿಸಿ ಸಂಭ್ರಮಿಸಿದರು. ಫ್ಯಾಷನ್ ಶೋ, ಸಂಗೀತ ಕಾರ್ಯಕ್ರಮಗಳು, ಮತ್ತು ವೈವಿಧ್ಯಮಯ ಆಹಾರ ಮಳಿಗೆಗಳು ಜನರನ್ನು ಆಕರ್ಷಿಸಿದವು.  

ಬೆಂಗಳೂರು : ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌‘ ಹಾಗೂ ‘ಕನ್ನಡಪ್ರಭ’ ಬಿಳೇಕಹಳ್ಳಿಯ ವಿಜಯಬ್ಯಾಂಕ್‌ ಲೇಔಟ್‌ ಆಟದ ಮೈದಾನದಲ್ಲಿ ಆಯೋಜಿಸಿರುವ ಬೆಂಗಳೂರಿನ ಅತಿದೊಡ್ಡ ‘ಫುಡ್‌, ಫನ್‌ ಆ್ಯಂಡ್‌ ಫ್ಯಾಷನ್‌ ಫೆಸ್ಟಿವಲ್‌ ‘ಬೊಮ್ಮನಹಳ್ಳಿ ಸಂಭ್ರಮ’ದ ಎರಡನೇ ದಿನವೂ ಜನರು ಆಗಮಿಸಿ ಸಂಭ್ರಮಿಸಿದರು.

ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಐಟಿ-ಬಿಟಿ ಕಂಪನಿಗಳ ಟೆಕ್ಕಿಗಳು, ಶಾಲಾ-ಕಾಲೇಜುಗಳ ಮಕ್ಕಳು, ಗೃಹಿಣಿಯರು ಸೇರಿದಂತೆ ಎಲ್ಲ ವಯೋಮಾನದವರು ಆಗಮಿಸಿ ತಮಗೆ ಇಷ್ಟವಾದ ಉಡುಪುಗಳು, ಅಲಂಕಾರಿಕ ವಸ್ತುಗಳು, ಗೃಹೋಪಯೋಗಿ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಖಾದ್ಯಪ್ರಿಯರು ಆಹಾರದ ಮಳಿಗೆಗಳಿಗೆ ಲಗ್ಗೆ ಹಾಕಿ ವೈವಿಧ್ಯಮವಾದ ಖಾದ್ಯಗಳನ್ನು ಚಪ್ಪರಿಸಿದರು.

ಶನಿವಾರ ಬೆಳಗ್ಗೆ 11ಕ್ಕೆ ಮುದ್ದುಮಗು ಮತ್ತು ಮಕ್ಕಳ ವೇಷಭೂಷಣ ಸ್ಪರ್ಧೆ, ಮಹಿಳೆಯರಿಗೆ ಮೊದಲ ಸುತ್ತಿನ ಅಡುಗೆ ಸ್ಪರ್ಧೆ ನಡೆಯಿತು. ಓಪನ್‌ಸ್ಟೇಜ್‌ ಮತ್ತು ಗಾಯನ ಗಮನ ಸೆಳೆದರೆ, ಸಂಜೆ ನಡೆದ ಬೊಂಬಾಟ್‌ ಜೋಡಿ, ಕಿಡ್ಸ್‌ ಮತ್ತು ಫ್ಯಾಮಿಲಿ ಫ್ಯಾಷನ್‌ಶೋ ಯಶಸ್ವಿಯಾಯಿತು. ಸಾಂಪ್ರದಾಯಿಕ ಉಡುಗೆ ತೊಡುಗೆಯಲ್ಲಿ ಸ್ಪರ್ಧಾಳುಗಳು ವೀಕ್ಷಕರ ಮನಸೂರೆಗೊಳ್ಳುವಂತೆ ಮಾಡಿದರು. ವೇದಿಕೆ ಕಾರ್ಯಕ್ರಮದಲ್ಲಿ ಬೊಮ್ಮನಹಳ್ಳಿಯ ಸಾಧಕರನ್ನು ಸನ್ಮಾನಿಸಲಾಯಿತು. ರಾತ್ರಿ ನಡೆದ ಇಂಡಿಯನ್‌ ಫೋಕ್‌ ಮ್ಯೂಸಿಕ್‌ ಬ್ಯಾಂಡ್‌ ‘ಜಂಬೆ ಝಲಕ್‌’ ಬಾಲು ಮತ್ತು ತಂಡವರ ಸಾಂಸ್ಕೃತಿಕ ಕಾರ್ಯಕ್ರಮ ಮನರಂಜನೆಯ ರಸದೌತಣ ಉಣಬಡಿಸಿತು.

ಇಂದಿನ ಕಾರ್ಯಕ್ರಮ

ಮೂರು ದಿನಗಳ ಬೊಮ್ಮಹಳ್ಳಿ ಸಂಭ್ರಮಕ್ಕೆ ಭಾನುವಾರ ಕಡೆಯ ದಿನವಾಗಿದೆ. ಭಾನುವಾರ ಬೆಳಗ್ಗೆ 11ಕ್ಕೆ ಮುದ್ದು ಮಗು ಮತ್ತು ವೇಷಭೂಷಣ-ಮಕ್ಕಳಿಗೆ, ಮಧ್ಯಾಹ್ನ 12ಕ್ಕೆ ಬೆಂಕಿರಹಿತ ಅಡುಗೆ(ಮಕ್ಕಳಿಗೆ), 2.30ಕ್ಕೆ ಅಡುಗೆ ಮಹಾರಾಣಿ (ಮಹಿಳೆಯರಿಗೆ) ಫಿನಾಲೆ, ಸಂಜೆ 4ಕ್ಕೆ ಚಿತ್ರಕಲಾ ಸ್ಪರ್ಧೆ(ಥೀಮ್‌-ದಸರಾ ಸೆಲೆಬ್ರೆಷನ್‌), 5ಕ್ಕೆ ಓಪನ್‌ ಸ್ಟೇಜ್‌ ಮತ್ತು ಗಾಯನ, 7ಕ್ಕೆ ಬಹುಮಾನ ವಿತರಣೆ ಮತ್ತು ಬೊಮ್ಮನಹಳ್ಳಿ ಸಾಧಕರಿಗೆ ಸನ್ಮಾನ. ರಾತ್ರಿ 8ಕ್ಕೆ ಸಂಗೀತ ಸಂಜೆ-ಡ್ಯೂಯಲ್‌ ವಾಯ್ಸ್‌ ಸಿಂಗ್‌ ಮಂಜು ಹಾಸನ ಮತ್ತು ಚಲನಚಿತ್ರ ಕಲಾವಿದ ಲೋಕೇಶ್‌-ವೈಷ್ಣವಿ ಮೆಲೋಡಿಸ್‌ ತಂಡದವರಿಂದ. 9ಕ್ಕೆ ನೃತ್ಯ ಮತ್ತು ಮನೋರಂಜಾ ಕಾರ್ಯಕ್ರಮ.