ನುಡಿದಂತೆ ನಡೆದ ಕಾಂಗ್ರೆಸ್‌ ಸರ್ಕಾರ

| Published : Feb 08 2024, 01:35 AM IST

ಸಾರಾಂಶ

ಚುನಾವಣೆ ಪೂರ್ವದಲ್ಲಿ ಜನರಿಗೆ ಘೋಷಿಸಿದ 5 ಗ್ಯಾರಂಟಿಗಳನ್ನು ಕೇವಲ 7 ತಿಂಗಳಲ್ಲಿಯೇ ಪ್ರಾಮಾಣಿಕವಾಗಿ ಜನರಿಗೆ ಪೂರೈಹಿಸಿದ್ದು, ಕೊಟ್ಟ ಮಾತಿನಂತೆ ನುಡಿದಂತೆ ನಡೆದ ನಮ್ಮ ಕಾಂಗ್ರೆಸ್ನ ಸಿದ್ದರಾಮಯ್ಯನವರ ಸರ್ಕಾರವಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಕನ್ನಡಪ್ರಭ ವಾರ್ತೆ ಹುನಗುಂದ

ಚುನಾವಣೆ ಪೂರ್ವದಲ್ಲಿ ಜನರಿಗೆ ಘೋಷಿಸಿದ 5 ಗ್ಯಾರಂಟಿಗಳನ್ನು ಕೇವಲ 7 ತಿಂಗಳಲ್ಲಿಯೇ ಪ್ರಾಮಾಣಿಕವಾಗಿ ಜನರಿಗೆ ಪೂರೈಹಿಸಿದ್ದು, ಕೊಟ್ಟ ಮಾತಿನಂತೆ ನುಡಿದಂತೆ ನಡೆದ ನಮ್ಮ ಕಾಂಗ್ರೆಸ್‌ನ ಸಿದ್ದರಾಮಯ್ಯನವರ ಸರ್ಕಾರವಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಪಟ್ಟಣದ ಬಸವಮಂಟದಲ್ಲಿ ತಾಲೂಕಾಡಳಿತ, ಪುರಸಭೆ ಕಾರ್ಯಾಲಯ ವಿವಿಧ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಬಾರಿ ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರೇ ಮನೆಯ ಯಜಮಾನಿ ಮನೆಯ ಶಕ್ತಿ ತುಂಬವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೈಗೊಂಡಿದ್ದಾರೆ. ಮಹಿಳೆಯರನ್ನು ಅಬಲೆ ಅಲ್ಲ ಸಬಲೆ ಎಂಬುವುದು ಈ 4 ಗ್ಯಾರಂಟಿ ಯೋಜನೆಯು ಮಹಿಳೆಯರ ಪರವಾಗಿದೆ ಎಂದರು.

ನಮ್ಮ ಸರ್ಕಾರ ಬಡವರ, ನೇಕಾರರ, ರೈತರ, ಹಿಂದುಳಿದ ವರ್ಗ ಅಲ್ಪಸಂಖಾಯತ ಪರವಾದ ಸರ್ಕಾರವಾಗಿದೆ. ದೇಶದಲ್ಲಿ ಇಂತಹ ಯೋಜನೆ ಯಾವ ರಾಜ್ಯದಲ್ಲಿ ಇಲ್ಲ. ಹಿಂದೆ ಅನೇಕ ಸರ್ಕಾರವನ್ನು ನೋಡಿದ್ದು ಯಾವ ಸರ್ಕಾರವು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಆದರೆ ಕೊಟ್ಟ ಮಾತಿನಂತೆ ನಡೆದ ಸರ್ಕಾರ ಕಾಂಗ್ರೆಸ್ ಸರ್ಕಾರವಾಗಿದೆ. ಚುನಾವಣೆಯ ಪೂರ್ವದಲ್ಲಿ ನೀಡಿದ ಭರವಸೆಗಳಲ್ಲಿ 68 ಭರವಸೆಗಳಲ್ಲಿ ಈಗಾಗಲೇ ಈಡೇರಿಸಿದ್ದೇವೆ.

ಪ್ರಧಾನಮಂತ್ರಿ ಮೋದಿ ಪ್ರತಿ ವರ್ಷ 2 ಕೋಟಿ ನಿರುದ್ಯೋಗ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು. ಆದರೆ ಇದೀಗ 10 ವರ್ಷವಾದರು 20 ಕೋಟಿ ಯುವಕರಿಗೆ ಉದ್ಯೋಗ ನೀಡಬೇಕಿತ್ತು. ಆದರೆ ಇದುವರೆಗೆ ಆಗಿಲ್ಲ ಎಂದರು.

ಮುಖಂಡ ವಿಜಯಮಹಾಂತೇಶ ಗದ್ದನಕೇರಿ, ಮಹಾಂತೇಶ ಅವಾರಿ ಮಾತನಾಡಿದರು. ತಹಸೀಲ್ದಾರ್‌ ನಿಂಗಪ್ಪ ಬಿರಾದಾರ, ತಾಪ ಇಒ ಮುರಳೀಧರ ದೇಶಪಾಂಡೆ, ಸಿಡಿಪಿಒ ಅನ್ನಪೂರ್ಣ ಕುಬಕಡ್ಡಿ, ಪುರಸಭೆ ಮುಖ್ಯಾಧಿಕಾರಿ ಪಿ.ಕೆ.ಗುಡದಾರಿ, ವಿಜಯ ಮಹಾಂತೇಶ ಬ್ಯಾಂಕ್‌ ಅಧ್ಯಕ್ಷ ರವಿ ಹುಚನೂರ, ಶೇಖರಪ್ಪ ಬಾದವಾಡಗಿ, ಶಿವಾನಂದ ಕಂಠಿ, ಮುತ್ತಣ್ಣ ಕಲಗೋಡಿ, ಪುರಸಭೆ ಸದಸ್ಯರಾದ ಶರಣು ಬೆಲ್ಲದ, ಭಾಗ್ಯಶ್ರೀ ರೇವಡಿ, ಮೈನು ಧನ್ನೂರ, ಬಸವರಾಜ ಗೊಣ್ಣಗರ, ಯಲ್ಲಪ್ಪ ನಡುವಿನಮನಿ, ಗುರಲಿಂಗಪ್ಪ ಇಂಗಳಗೇರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

--

ಬಿಜೆಪಿಯವರಿಗೆ ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡುವುದೇ ಕೆಲಸವಾಗಿದೆ. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರು ಯಾವುದೇ ಜನಪರ ಯೋಜನೆ ನೀಡಿಲ್ಲ, ದೇವರ ಹೆಸರಿನಲ್ಲಿ ರಾಜಕೀಯ ಮಾಡುವುದು ಸರಿ ಅಲ್ಲ.

-ವಿಜಯಾನಂದ ಕಾಶಪ್ಪನವರ, ಶಾಸಕ ಹುನಗುಂದ