ಸಾರಾಂಶ
ಎಲ್ಲಾ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಅವರು ತಮ್ಮ ಬುದ್ಧಿವಂತಿಕೆ ಮತ್ತು ಜ್ಞಾನವನ್ನು ಯುವ ಪೀಳಿಗೆಗೆ ರವಾನಿಸಿದ್ದಾರೆ, ಇಂದು ನಾವು ವಾಸಿಸುವ ಜಗತ್ತನ್ನು ರೂಪಿಸಲು ಕಾರಣರಾಗಿರುತ್ತಾರೆ. ಹಿರಿಯರ ಬುದ್ಧಿವಂತಿಕೆ, ಜ್ಞಾನವನ್ನು ಬಳಸಿಕೊಳ್ಳಬೇಕು
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಸಮಾಜಕ್ಕೆ ಹಿರಿಯರ ಕೊಡುಗೆಗಳ ಅರಿವು ಮೂಡಿಸಲು ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲಿ ವಿಶ್ವ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಗುತ್ತದೆ ಎಂ. ಚಂದ್ರಶೇಖರ್ ತಿಳಿಸಿದರು ಪಟ್ಟಣದ ಯೂನಿಯನ್ ಬ್ಯಾಂಕ್ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಹಿರಿಯ ನಾಗರಿಕ ಎಂದರೆ ಅರವತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸನ್ನು ತಲುಪಿದ ವ್ಯಕ್ತಿ. ವಿಶೇಷವಾಗಿ ನಿವೃತ್ತಿ ಹೊಂದಿದವರು. ವಯಸ್ಸಾದ ವ್ಯಕ್ತಿಗಳ ಬುದ್ಧಿವಂತಿಕೆ, ಜ್ಞಾನ ಮತ್ತು ಸಾಧನೆಗಳನ್ನು ಗುರುತಿಸಲು ಹಾಗೂ ಎದುರಿಸುತ್ತಿರುವ ಸಮಸ್ಯೆಗಳ ಪರಿಹರಿಸಲು ಈ ದಿನವನ್ನು ಆಚರಿಸಲಾಗುತ್ತದೆ ಎಂದರು.ಹಿರಿಯರ ಕೊಡುಗೆ ಗೌರವಿಸಿ
ವಿಶ್ವ ಹಿರಿಯ ನಾಗರಿಕರ ದಿನದ ಮಹತ್ವ ಸಮಾಜಕ್ಕೆ ಹಿರಿಯ ನಾಗರಿಕರ ಕೊಡುಗೆಗಳನ್ನು ಗೌರವಿಸುವ ದಿನವಾಗಿದೆ. ಹಿರಿಯ ನಾಗರಿಕರು ಕುಟುಂಬಗಳನ್ನು ಬೆಳೆಸುವುದು ಮತ್ತು ವ್ಯವಹಾರಗಳನ್ನು ನಿರ್ಮಿಸುವುದರಿಂದ ಹಿಡಿದು ಮಿಲಿಟರಿ ಮತ್ತು ಪ್ರಮುಖ ಸರ್ಕಾರಗಳಲ್ಲಿ ಸೇವೆ ಸಲ್ಲಿಸುವವರೆಗೆ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಅವರು ತಮ್ಮ ಬುದ್ಧಿವಂತಿಕೆ ಮತ್ತು ಜ್ಞಾನವನ್ನು ಯುವ ಪೀಳಿಗೆಗೆ ರವಾನಿಸಿದ್ದಾರೆ, ಇಂದು ನಾವು ವಾಸಿಸುವ ಜಗತ್ತನ್ನು ರೂಪಿಸಲು ಕಾರಣರಾಗಿರುತ್ತಾರೆ ಎಂದರು. ಪದಾಧಿಕಾರಿಗಳಿಗೆ ಅಭಿನಂದನೆಈ ಸಂದರ್ಭದಲ್ಲಿ ಗೌರಿಬಿದನೂರಿನ ಕೆ.ಇ.ಬಿ ಪಿಂಚಿಣಿದಾರರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾಗಿರುವ ಸಂಘದ ಪದಾಧಿಕಾರಗಳಾದ ಆರ್. ವೀರಣ್ಣ,ಭೀಮಾರೆಡ್ಡಿ, ಚಂದ್ರಶೇಖರ್ ಬಿ. ಸಿ, ರಾಮರೆಡ್ಡಿ, ಸಿ.ಅರ್. ಕೃಷ್ಣಪ್ಪ, ಬಿ ಸಿ ಶ್ರೀನಿವಾಸಯ್ಯ, ಕಾಂತರಾಜು, ಚಿಕ್ಕಪ್ಪಯ್ಯ ಕೃಷ್ಣೇಗೌಡ, ನಗೀನ್ ತಾಜ್, ಹನುಮಂತು,ಬಸವರಾಜು ರವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಬ್ಯಾಂಕ್ ಪ್ರಬಂಧಕರಾದ ಗಂಗಾಧರಪ್ಪ ಮತ್ತು ಗ್ರಾಹಕರಾದ ಡಾ. ಕೆ.ವಿ.ಪ್ರಕಾಶ್ ಬ್ಯಾಂಕ್ ಅಧಿಕಾರಿಗಳಾದ ಅನಿಲ್, ಕಿರಣ್, ಅನಿತಾ, ವಸಂತಮ್ಮ,ಮಹೇಶ್,ಶಂಕರ್ ಮತ್ತು ಬ್ಯಾಂಕ್ ಗ್ರಾಹಕರು ಉಪಸ್ಥಿತರಿದ್ದರು.