ಮುಧೋಳ ಕ್ಷೇತ್ರದ ಋಣ ಎಂದಿಗೂ ಮರೆಯೋದಿಲ್ಲ

| Published : Oct 05 2024, 01:47 AM IST

ಸಾರಾಂಶ

ಚಿತ್ರದುರ್ಗದ ಸಂಸದನಾದರೂ ಮುಧೋಳ ಕ್ಷೇತ್ರದ ಜೊತೆ ನನ್ನದು ಮೂರು ದಶಕಗಳ ಅನುಪಮ ಬಾಂಧವ್ಯವಿದ್ದು, ಇಲ್ಲಿಯ ಜನರ ಋಣವನ್ನು ನಾನು ಎಂದಿಗೂ ಮರೆಯೋದಿಲ್ಲ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಚಿತ್ರದುರ್ಗದ ಸಂಸದನಾದರೂ ಮುಧೋಳ ಕ್ಷೇತ್ರದ ಜೊತೆ ನನ್ನದು ಮೂರು ದಶಕಗಳ ಅನುಪಮ ಬಾಂಧವ್ಯವಿದ್ದು, ಇಲ್ಲಿಯ ಜನರ ಋಣವನ್ನು ನಾನು ಎಂದಿಗೂ ಮರೆಯೋದಿಲ್ಲ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ಮುಧೋಳ ಮತಕ್ಷೇತ್ರದ ರನ್ನ ಬೆಳಗಲಿ ಪಟ್ಟಣದ ಬಂದಲಕ್ಷ್ಮಿ ಭವನದಲ್ಲಿ ಶುಕ್ರವಾರ ಪೌರ ಸನ್ಮಾನ ಸ್ವೀಕರಿಸಿ, ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ಈಗ ಭಾಜಪ ಸದಸ್ಯತ್ವ ಅಭಿಯಾನ ಆರಂಭವಾಗಿದ್ದು, ಕೇಂದ್ರದ ಅಣತಿಯಂತೆ ಹಿಂದೆ ದೇಶಾದ್ಯಂತ ದಾಖಲೆಯ 18 ಕೋಟಿ ಸದಸ್ಯತ್ವ ನೋಂದಣಿ ಮೀರಿ ಸದಸ್ಯತ್ವ ಆಗಬೇಕಿದ್ದು, ನನಗೆ ಬಾಗಲಕೋಟೆ ಮತ್ತು ಮುಧೋಳ ಕ್ಷೇತ್ರಗಳಲ್ಲಿ ಒಟ್ಟು 50 ಸಾವಿರ ಸದಸ್ಯತ್ವದ ಹೊಣೆಗಾರಿಕೆ ನೀಡಿದ್ದಾರೆ. ಅದರಂತೆ ಮೊದಲಿನಂತೆ ಈಗಲೂ ನನಗೆ ಇಲ್ಲಿಯ ನಾಗರಿಕರು ಸಹಕರಿಸಲು ಕೋರಿದರು.ನಾಡಿನಲ್ಲಿ ಎಲ್ಲೇ ಇರಿ, ನಿಮ್ಮ ಕೆಲಸ ಕಾರ್ಯಗಳಿಂದ ನೀವು ಖ್ಯಾತಿಯನ್ನು ಪಡೆಯುತ್ತೀರಿ. ಅದರಂತೆ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಹೊಸಮುಖ ಹೊತ್ತು ಚುನಾವಣೆಗೆ ಧುಮ್ಕಿದೆ. ಅಲ್ಲಿ ಪುರುಷರಿಗಿಂತ ಮಹಿಳೆಯರೇ ನನಗೆ ಹೆಚ್ಚಿನ ಮತಗಳನ್ನು ನೀಡಿ ಕೇಂದ್ರಕ್ಕೆ ಕಳಿಸಿದರು. ಅವರ ಕಾರ್ಯಕ್ಕೆ ನಾನು ಚಿರಋಣಿಯಾಗಿದ್ದೇನೆ ಎಂದು ಧನ್ಯವಾದಗಳನ್ನು ತಿಳಿಸಿದರು.ಭಾಜಪ ಪಕ್ಷದ ಹಿರಿಯ ಮುಖಂಡರಾದ ಧರೆಪ್ಪ ಸಾಂಗ್ಲಿಕರ ಮಾತನಾಡಿ, ನಾವು ವಿರೋಧ ಪಕ್ಷದಲ್ಲಿದ್ದಾಗಲೂ ಸಂಸದ ಕಾರಜೋಳರನ್ನು ಅಭಿವೃದ್ಧಿ ಪರ ವ್ಯಕ್ತಿ ಎಂದೆ ಕರೆಯುತ್ತಿದ್ದೇವು. ಈಗಲೂ ಜನೋಪಯೋಗಿ ಕೆಲಸಗಳಿಂದ ನಾಡಿನಾದ್ಯಂತ ಅವರ ಹೆಸರು ಉತ್ತುಂಗದಲ್ಲಿದೆ ಎಂದು ಬಣ್ಣಿಸಿದರು.ಪತ್ರಕರ್ತ ಜಯರಾಮ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತ ಒಬ್ಬ ವ್ಯಕ್ತಿ ಶಕ್ತಿಯಾಗಿ ಬೆಳೆದು ನಿಂತಿದ್ದು ಅಷ್ಟೇ ಅಲ್ಲ ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸ್ಥಾಯಿ ಸಮಿತಿ ಸದಸ್ಯರಾಗಿಯೂ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.ಬೆಳಗಲಿ ಪಟ್ಟಣದ ವಿವಿಧ ಸಮುದಾಯ ಮತ್ತು ಸಂಘಟನೆಗಳು ಆದರದ ಸನ್ಮಾನ ನೀಡಿದವು. ಹಿರಿಯ ಮುಖಂಡರಾದ ಎಸ್.ಟಿ.ಪಾಟೀಲ, ಅರುಣ ಕಾರಜೋಳ, ಬೆಳಗಲಿ ಪಪಂ ರೂಪಾ ಹೊಸಟ್ಟಿ, ಉಪಾಧ್ಯಕ್ಷೆ ಸಹನಾ ಸಾಂಗ್ಲಿಕರ, ಕೆ.ಆರ್.ಮಾಚಪ್ಪನ್ನವರ, ಹಣ್ಮಂತ ತುಳಸಿಗೇರಿ, ಸಂಗನಗೌಡ ಕಾತರಕಿ, ಶ್ರೀಶೈಲಗೌಡ ಪಾಟೀಲ, ಮಹಾಲಿಂಗಪ್ಪ ಗುಂಜಿಗಾಂವಿ, ಸಿದ್ದುಗೌಡ ಪಾಟೀಲ, ಚಿಕ್ಕಪ್ಪ ನಾಯಕ, ಸದಾಶಿವ ಚಿಚಖಂಡಿ, ನಾಗಪ್ಪ ಅಂಬಿ, ಪುಟ್ಟು ಕುಲಕರ್ಣಿ, ರಾಜು ಪಾಟೀಲ, ಅಶೋಕ ಸಿದ್ದಾಪುರ, ಲಕ್ಕಪ್ಪ ಮೇಡ್ಯಾಗೋಳ ಸೇರಿದಂತೆ ಮುಖಂಡರು ಇದ್ದರು. ಭಾಜಪ ಹಿರಿಯ ಮುಖಂಡ ಪಂಡಿತ ಪೂಜಾರ ಸ್ವಾಗತಿಸಿ, ವಂದಿಸಿದರು.ಮುಧೋಳ ಕ್ಷೇತ್ರದಲ್ಲಿ 7 ಬ್ಯಾರೇಜ್ ಗಳನ್ನು ನಿರ್ಮಾಣ ಮಾಡಿದಂತೆ ಅಲ್ಲಿಯೂ ಕೂಡ ಅನೇಕ ಬ್ಯಾರೇಜ್‌ಗಳ ನಿರ್ಮಾಣ ಮತ್ತು ಅಭಿವೃದ್ಧಿ ಕೆಲಸಗಳಿಗೆ ಸಂಕಲ್ಪ ಮಾಡಿ, ಕಾರ್ಯಪ್ರವೃತ್ತನಾಗಿದ್ದೇನೆ. ಅಷ್ಟಕ್ಕೆ ನಾನು ಮುಧೋಳ ಕ್ಷೇತ್ರವನ್ನು ಮರೆಯೋದಿಲ್ಲ. ಇಲ್ಲಿಯೂ ಸಹ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇನೆ.

-ಗೋವಿಂದ ಕಾರಜೋಳ, ಸಂಸದರು.