ರಾಜಕೀಯದಲ್ಲಿ ನನ್ನನ್ನು ಎತ್ತರಕ್ಕೆ ಬೆಳೆಸಿದ್ದೇ ಮುಧೋಳ ಕ್ಷೇತ್ರದ ಜನರು. ಈ ಕ್ಷೇತ್ರದ ಜನರ ಋಣ ಎಂದಿಗೂ ಮರೆಯಲ್ಲ. ಶಾಸಕನಾಗಿ, ವಿವಿಧ ಇಲಾಖೆಯ ಸಚಿವನಾಗಿ, ಉಪಮುಖ್ಯಮಂತ್ರಿಯಾಗಿ ಮುಧೋಳ ಕ್ಷೇತ್ರ ಸೇರಿದಂತೆ ರಾಜ್ಯದೆಲ್ಲಡೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಚಿತ್ರದುರ್ಗ ಜಿಲ್ಲೆಯಲ್ಲೂ ಅಭಿವೃದ್ಧಿ ಕೆಲಸ ಮಾಡಿರುವುದಕ್ಕೆ ಜನರು ಸಂಸದರನ್ನಾಗಿ ಆಯ್ಕೆ ಮಾಡಿದ್ದಾರೆಂದು ಮಾಜಿ ಡಿಸಿಎಂ, ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ರಾಜಕೀಯದಲ್ಲಿ ನನ್ನನ್ನು ಎತ್ತರಕ್ಕೆ ಬೆಳೆಸಿದ್ದೇ ಮುಧೋಳ ಕ್ಷೇತ್ರದ ಜನರು. ಈ ಕ್ಷೇತ್ರದ ಜನರ ಋಣ ಎಂದಿಗೂ ಮರೆಯಲ್ಲ. ಶಾಸಕನಾಗಿ, ವಿವಿಧ ಇಲಾಖೆಯ ಸಚಿವನಾಗಿ, ಉಪಮುಖ್ಯಮಂತ್ರಿಯಾಗಿ ಮುಧೋಳ ಕ್ಷೇತ್ರ ಸೇರಿದಂತೆ ರಾಜ್ಯದೆಲ್ಲಡೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಚಿತ್ರದುರ್ಗ ಜಿಲ್ಲೆಯಲ್ಲೂ ಅಭಿವೃದ್ಧಿ ಕೆಲಸ ಮಾಡಿರುವುದಕ್ಕೆ ಜನರು ಸಂಸದರನ್ನಾಗಿ ಆಯ್ಕೆ ಮಾಡಿದ್ದಾರೆಂದು ಮಾಜಿ ಡಿಸಿಎಂ, ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಹೇಳಿದರು.

ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಗ್ರಾಮೀಣ ಮತ್ತು ನಗರ ಮಂಡಲ ಹಾಗೂ ಅಭಿಮಾನಿಗಳು ಭಾನುವಾರ ಆಯೋಜಿಸಿದ್ದ 76ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಿಜೆಪಿ ಕಾರ್ಯಕರ್ತರನ್ನು ಮತ್ತು ಅಭಿಮಾನಿ ಉದ್ದೇಶಿಸಿ ಮಾತನಾಡಿ, ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನನಗೆ ಮುಧೋಳ ಮತಕ್ಷೇತ್ರದ ಜನತೆ ನನಗೆ ಆಶೀರ್ವಾದ ಮಾಡಿ ಶಾಸಕ, ಸಚಿವನಾಗಿ, ಉಪಮುಖ್ಯಮಂತ್ರಿಯನ್ನಾಗಿ ಮಾಡಿ ಸಮಾಜ ಸೇವೆ ಮತ್ತು ಕ್ಷೇತ್ರದ ಜನತೆಯ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಅವರೆಲ್ಲರಿಗೂ ಚಿರಋಣಿಯಾಗಿರುತ್ತೇನೆ ಎಂದು ಹೇಳಿದರು.

ವಿವಿಧ ಇಲಾಖೆಗಳ ಸಚಿವನಾಗಿ ತಾಲೂಕಿನಲ್ಲಿ ಕುಡಿಯುವ ನೀರು, ಗುಣಮಟ್ಟದ ರಸ್ತೆ ನಿರ್ಮಾಣ, ವಿದ್ಯುತ್ ಸ್ಟೇಷನ್, ವಸತಿ ಶಾಲೆ, ಸರ್ಕಾರಿ ಶಾಲಾ-ಕಾಲೇಜು, ಬ್ರಿಡ್ಜ್ ಕಂ ಬ್ಯಾರೇಜ್, ಜಾಗರಿ ಪಾರ್ಕ್‌, ಸೇತುವೆ, ಸಮುದಾಯ ಭವನ, ಏತ ನೀರಾವರಿ ಯೋಜನೆ, ಕೆರೆಗಳ ನಿರ್ಮಾಣ ಮತ್ತು ಅಭಿವೃದ್ಧಿ, ವಸತಿ, ಬೈಪಾಸ್ ರಸ್ತೆ, ಆಸ್ಪತ್ರೆ, ಮಿನಿ ವಿಧಾನಸೌಧ, ವಾಣಿಜ್ಯ ಮಳಿಗೆ ಸೇರಿದಂತೆ ಎಲ್ಲ ರೀತಿಯ ಮೂಲ ಸೌಲಭ್ಯ ಒದಗಿಸಿಕೊಟ್ಟಿದ್ದೇನೆ. ನಾನು ಮಾಡಿರುವ ಅಭಿವೃದ್ಧಿ ಕೆಲಸ ಕಾರ್ಯ ಮಾಡಿದ್ದೇನೆ. ಸಕ್ಕರೆ ತಾಂತ್ರಿಕ ಮಹಾವಿದ್ಯಾಲಯ ಮತ್ತು ಸರ್ಕಾರಿ ಮಹಿಳಾ ಪ್ರಥಮ ಧರ್ಜೆ ಕಾಲೇಜು ಮಾಡಬೇಕೆಂದುಕೊಂಡಿದ್ದೆ. ಆದರೆ ಚುನಾವಣೆಯಲ್ಲಿ ಪರಾಭವಗೊಂಡಿದ್ದರಿಂದ ನನ್ನ ಕನಸು ನನಸಾಗಲಿಲ್ಲ ಎಂದು ಹೇಳಿದರು.

76ನೇ ಜನ್ಮದಿನಾಚರಣೆ ನಿಮಿತ್ತ ಬಿಜೆಪಿ ಗ್ರಾಮೀಣ ಮತ್ತು ನಗರ ಮಂಡಲ ಮುಧೋಳ ಹಾಗೂ ಕಾರ್ಯಕರ್ತರು ಮತ್ತು ಅಭಿಮಾನಿಗಳು ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಮಾಲಾಪುರ ಗ್ರಾಮದ ಗೋಶಾಲೆಯ ಗೋವುಗಳಿಗೆ ಪೂಜೆ, ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ವಿತರಣೆ, ರಕ್ತದಾನ ಶಿಬಿರ ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆಂದರು.

ಗೋವಿಂದ ಕಾರಜೋಳ ಅವರ ಪತ್ನಿ ಶಾಂತಾದೇವಿ, ಪುತ್ರರಾದ ಅರುಣ ಮತ್ತು ಉಮೇಶ, ಸೊಸೆಯಂದಿರರಾದ ಪುಷ್ಪಾ, ಅಶ್ವಿನಿ ಮತ್ತು ಶ್ರೀದೇವಿ ಹಾಗೂ ಮೊಮ್ಮಕ್ಕಳು, ಬಿಜೆಪಿ ಮುಖಂಡರಾದ ಕೆ.ಆರ್. ಮಾಚಪ್ಪನವರ, ಹನುಮಂತ ತುಳಸಿಗೇರಿ, ಕಲ್ಲಪ್ಪಣ್ಣ ಸಬರದ, ಲಕ್ಷ್ಮಣ ಚಿನ್ನಣ್ಣವರ, ಸದಾಶಿವ ತೇಲಿ, ಶ್ರೀಕಾಂತ ಗುಜ್ಜನ್ನವರ, ಡಾ.ರವಿ ನಂದಗಾಂವ, ಸಂಗಣ್ಣ ಕಾತರಕಿ, ಕೆ.ಎಸ್. ಹಿರೇಮಠ, ಬಸವರಾಜ ಮಳಲಿ, ಕಲ್ಮೇಶ ಗೋಸಾರ, ಸಂತೋಷ ಗೋರ್ಪಡೆ, ನಾಗಪ್ಪ ಅಂಬಿ, ರಾಜು ಯಡಹಳ್ಳಿ, ಶ್ರೀಶೈಲ ಚಿನ್ನಣ್ಣವರ, ಸದಾಶಿವ ಇಟಕನ್ನವರ, ಎಸ್.ಆರ್. ನಿರಾಣಿ, ರವಿ ಮಾಚಪ್ಪನವರ, ಮುಕುಂದ ನಿಂಬಾಳಕರ, ಎಂ.ಎಸ್. ಹಂಚಿನಾಳ, ರಾಘು ಶಿಂಧೆ, ಹೊಳಬಸು ಬಟಕುರ್ಕಿ, ಗುರುಪಾದ ಕುಳಲಿ, ಮಂಜು ಮಾನೆ, ಧರೆಪ್ಪ ಸಾಂಗ್ಲಿಕರ, ರಾಜಶೇಖರ ಭರಮೋಜಿ, ವೆಂಕಪ್ಪ ಲೆಂಕಣ್ಣವರ, ಗಿರೀಶ ಲೆಂಕಣ್ಣವರ, ಚಿದಾನಂದ ಪಂಚಕಟ್ಟಿಮಠ, ವೆಂಕಪ್ಪ ಹುಣಶಿಕಟ್ಟಿ ಹಾಗೂ ಚಿತ್ರದುರ್ಗದಿಂದ ಆಗಮಿಸಿದ್ದ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು, ಹಿತೈಷಿಗಳು ಗೋವಿಂದ ಕಾರಜೋಳ ಅವರ ಹುಟ್ಟುಹಬ್ಬಕ್ಕೆ ಶುಭಕೋರಿದರು.

ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ಸಂಗನಗೌಡ ಕಾತರಕಿ ಸ್ವಾಗತಿಸಿದರು. ಧರೆಪ್ಪ ಸಾಂಗ್ಲಿಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾರುತಿ ಮೋರೆ ನಿರೂಪಿಸಿದರು.

ಜನಪ್ರತಿನಿಧಿಯಾದವರು ಜನರ ಸುಖ, ದುಃಖದಲ್ಲಿ ಪಾಲ್ಗೊಂಡು ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುವುದರ ಜತೆಗೆ ಜನರು ನೆಮ್ಮದಿಯ ಬದುಕು ಸಾಗಿಸುವಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಘಟಪ್ರಭ ನದಿಯಲ್ಲಿನ ಮರಳು ತೆಗೆಯಲು ಅವಕಾಶ ನೀಡಬಾರದು. ಇದರಿಂದ ಪರಿಸರಕ್ಕೆ ಹಾನಿಯಾಗಲಿದೆ. ಶಿಕ್ಷಣದಿಂದ ಮಾತ್ರ ಸಮಾಜ ಸುಧಾರಣೆ ಸಾಧ್ಯ. ಪ್ರತಿಯೊಬ್ಬರೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು.

- ಗೋವಿಂದ ಕಾರಜೋಳ ಸಂಸದರು, ಮಾಜಿ ಡಿಸಿಎಂ