ಸಾರಾಂಶ
ವಿದ್ಯಾರ್ಥಿನಿಯರು, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳದ್ದೇ ಮೇಲುಗೈ
ರಾಜ್ಯ ಮಟ್ಟದ ರ್‍ಯಾಂಕಿಂಗ್‌ನಲ್ಲಿ ಜಿಲ್ಲೆಗೆ 22ನೇ ಸ್ಥಾನಸೋಮರಡ್ಡಿ ಅಳವಂಡಿಕನ್ನಡಪ್ರಭ ವಾರ್ತೆಕೊಪ್ಪಳ
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕೊಪ್ಪಳ ಜಿಲ್ಲೆ ಕಳೆದ ಬಾರಿಗಿಂತಲೂ ಶೇ. 6ರಷ್ಟು ಫಲಿತಾಂಶ ಸುಧಾರಣೆಯಾದರೂ ಕಳೆದ ವರ್ಷದ ಸ್ಥಾನಮಾನವನ್ನೇ ಈ ವರ್ಷವೂ ಪಡೆದುಕೊಂಡಿದೆ. ಆದರೆ, ಧಾರವಾಡ ಜಿಲ್ಲೆಗಿಂತಲೂ ಉತ್ತಮ ಫಲಿತಾಂಶ ಬಂದಿರುವುದು ವಿಶೇಷ. ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.ಕೊಪ್ಪಳ ಜಿಲ್ಲೆಯು ಶೇ.80.83 ಫಲಿತಾಂಶ ಪಡೆಯುವ ಮೂಲಕ ರಾಜ್ಯ ಮಟ್ಟದ ರ್‍ಯಾಂಕಿಂಗ್‌ನಲ್ಲಿ 22ನೇ ಸ್ಥಾನ ಪಡೆದುಕೊಂಡಿದೆ. ಆದರೆ, ಕಳೆದ ವರ್ಷವೂ ಇದೇ ಸ್ಥಾನದಲ್ಲಿತ್ತು. ಕಳೆದ ವರ್ಷ 74.08ರಷ್ಟು ಫಲಿತಾಂಶ ಪಡೆದುಕೊಂಡಿದ್ದು, ಈ ವರ್ಷ 80.83ರಷ್ಟು ಫಲಿತಾಂಶ ಬಂದಿರುವುದು ಸಮಾಧಾನಕರ ಅಂಶವಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗ, ರೆಗ್ಯುಲರ್, ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ 15,560 ವಿದ್ಯಾರ್ಥಿಗಳು ಪರೀಕ್ಷೆ ಬರೆದವರ ಪೈಕಿ 11,817 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ರೆಗ್ಯುಲರ್, ಪುನರಾವರ್ತಿತ ಸೇರಿದಂತೆ ಒಟ್ಟಾರೆ ಜಿಲ್ಲೆಯ ಫಲಿತಾಂಶ ಶೇ.75.94ರಷ್ಟು ಬಂದಿದ್ದರೆ, ಜಿಲ್ಲೆಯಲ್ಲಿ ರೆಗ್ಯುಲರ್ 13,435 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 10,859 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಜಿಲ್ಲೆಗೆ ಶೇ.80.83 ಫಲಿತಾಂಶ ಬಂದಿದೆ. ಪ್ರಸಕ್ತ ವರ್ಷದ ರ್‍ಯಾಂಕಿಂಗ್‌ನ್ನು ಕೇವಲ ರೆಗ್ಯುಲರ್ ವಿದ್ಯಾರ್ಥಿಗಳ ಫಲಿತಾಂಶದೊಂದಿಗೆ ಮಾತ್ರ ಲೆಕ್ಕಾಚಾರ ಮಾಡುತ್ತಾರೆ.ಕಲಾ ವಿಭಾಗ ಶೇ.71.05:
ಜಿಲ್ಲೆಯಲ್ಲಿ ಕಲಾ ವಿಭಾಗದಲ್ಲಿ ಪರೀಕ್ಷೆ ಹಾಜರಾದ 7,689 ವಿದ್ಯಾರ್ಥಿಗಳ ಪೈಕಿ 5045 ವಿದ್ಯಾರ್ಥಿಗಳ ಪಾಸಾಗಿದ್ದಾರೆ. ಇದೇ ವಿಭಾಗದ ರೆಗ್ಯುಲರ್ ವಿದ್ಯಾರ್ಥಿಗಳ ಪೈಕಿ 6017 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ, 4275 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಕಲಾ ವಿಭಾಗದ ಶೇ.71.05ರಷ್ಟು ಫಲಿತಾಂಶ ಪಡೆದುಕೊಂಡಿದೆ.ವಾಣಿಜ್ಯ ವಿಭಾಗ ಶೇ.83.43:
ಜಿಲ್ಲೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 2,531 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ, 1,997 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಇದರಲ್ಲಿ ರೆಗ್ಯುಲರ್ 2,269 ವಿದ್ಯಾರ್ಥಿಗಳ ಪೈಕಿ, 1,893 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಜಿಲ್ಲೆಯಲ್ಲಿ ವಾಣಿಜ್ಯ ವಿಭಾಗ ಶೇ.83.43 ಫಲಿತಾಂಶ ಪಡೆದಿದೆ.ವಿಜ್ಞಾನ ವಿಭಾಗ ಶೇ.91.11:
ಜಿಲ್ಲೆಯಲ್ಲಿ ವಿಜ್ಞಾನ ವಿಭಾಗದಲ್ಲಿ ರೆಗ್ಯುಲರ್, ಪುನರಾವರ್ತಿತ ವಿದ್ಯಾರ್ಥಿಗಳನ್ನೊಳಗೊಂಡು 5,340 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ 4,775 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ರೆಗ್ಯುಲರ್ 5,149 ವಿದ್ಯಾರ್ಥಿಗಳಲ್ಲಿ 4,691 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಜಿಲ್ಲೆಗೆ ವಿಜ್ಞಾನ ವಿಭಾಗವು ಶೇ.91.11ರಷ್ಟು ಫಲಿತಾಂಶ ಪಡೆದುಕೊಳ್ಳುವ ಮೂಲಕ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ.ನಗರ ಪ್ರದೇಶದಲ್ಲಿ 10,529 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರೆ, 8,016 ವಿದ್ಯಾರ್ಥಿಗಳು ಪಾಸ್ ಆಗಿ ಶೇ.76.13 ರಷ್ಟು ಫಲಿತಾಂಶ ತಂದಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ 5,031 ವಿದ್ಯಾರ್ಥಿಗಳು ಪರೀಕ್ಷೆ ಬರೆದು, ಇದರಲ್ಲಿ 3,801 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.75.55 ರಷ್ಟು ಫಲಿತಾಂಶ ಬಂದಿದೆ. ನಗರ ಪ್ರದೇಶದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.
ವಿಜ್ಞಾನ ವಿಭಾಗ ಮೇಲುಗೈ:ಶೇ.91.11ರಷ್ಟು ಫಲಿತಾಂಶ ಪಡೆಯುವ ಮೂಲಕ ವಿಜ್ಞಾನ ವಿಭಾಗವೇ ಮೇಲುಗೈ ಸಾಧಿಸಿದೆ. ಕಲಾ ವಿಭಾಗ, ವಾಣಿಜ್ಯ ವಿಭಾಗಕ್ಕಿಂತಲೂ ವಿಜ್ಞಾನ ವಿಭಾಗದಲ್ಲಿಯೇ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ.
ವಿದ್ಯಾರ್ಥಿನಿಯರೇ ಮೇಲುಗೈ:ಪಿಯುಸಿ ಫಲಿತಾಂಶದಲ್ಲಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಶೇ. 71.59 ಪಾಸಾಗಿದ್ದರೇ ವಿದ್ಯಾರ್ಥಿನಿಯರು ಶೇ. 79.5ರಷ್ಟು ತೇರ್ಗಡೆಯಾಗಿದ್ದಾರೆ.
ಕನ್ನಡದಲ್ಲಿಯೇ ಫೇಲು:ಇಂಗ್ಲಿಷ್ ಮತ್ತು ಕನ್ನಡ ಭಾಷೆಯ ಪರೀಕ್ಷೆಯಲ್ಲಿ ಕನ್ನಡ ವಿಷಯಕ್ಕಿಂತ ಇಂಗ್ಲಿಷ್ ವಿಷಯದಲ್ಲಿಯೇ ತೇರ್ಗಡೆಯಾದ ಪ್ರಮಾಣವೂ ಅಧಿಕ ಎನ್ನುವುದು ಗಮನಾರ್ಹ ಸಂಗತಿಯಾಗಿದೆ.
ಕನ್ನಡ ವಿಷಯದಲ್ಲಿ 9502 ವಿದ್ಯಾರ್ಥಿಗಳು ಹಾಜರಾಗಿ 6435 ವಿದ್ಯಾರ್ಥಿಗಳು ಮಾತ್ರ ತೇರ್ಗಡೆಯಾಗಿ ಶೇ. 67.72ರಷ್ಟು ಪಾಸಾಗಿದ್ದಾರೆ. ಆದರೆ, ಇಂಗ್ಲಿಷ್ ವಿಷಯದಲ್ಲಿ 6058 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 5382 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ. 88.84 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.ವಿಭಾಗವಾರು ಟಾಪರ್:ಕೊಪ್ಪಳ ಜಿಲ್ಲೆಯ ಕಲಾ ವಿಭಾಗದಲ್ಲಿ ಅಳವಂಡಿ ಪಟ್ಟಣದ ಶ್ರೀ ಸಿದ್ದೇಶ್ವರ ಪಿಯು ಕಾಲೇಜಿನ ಅಮಿತಾ ಕಾತರಕಿ(೫೯೦) ಪ್ರಥಮ ಪಡೆದಿದ್ದರೆ, ಸಿದ್ದಾಪೂರ ವಿಶ್ವಚೇತನ ಪಿಯು ಕಾಲೇಜಿನ ಗಂಗಮ್ಮ(೫೮೬)ದ್ವಿತೀಯ ಸ್ಥಾನ, ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಪಿಯು ಕಾಲೇಜಿನ ಲತಿಕ್ ಶರ್ಮಾ (೫೮೪)ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಭಾಗ್ಯನಗರ ಜ್ಞಾನ ಬಂಧು ಪಿಯು ಕಾಲೇಜಿನ ಅಹೀಶ್ರೀ ದೇಸಾಯಿ (೫೮೯)-ಪ್ರಥಮ, ಶ್ರೀರಾಮನಗರದ ವಿದ್ಯಾನಿಕೇತನ ಪಿಯು ಕಾಲೇಜಿನ ಮಲ್ಲಿಕಾರ್ಜುನ (೫೮೭)-ದ್ವಿತೀಯ, ಮರ್ಲಾನಹಳ್ಳಿ ಗ್ರಾಮದ ರೆಡ್ಡಿ ವೀರಣ್ಣ ಪಿಯು ಕಾಲೇಜಿನ ಹರಿಕಾ ದಮ್ಮು(೫೮೫)ಹಾಗೂ ಶ್ರೀರಾಮನಗರದ ವಿದ್ಯಾನಿಕೇತನ ಕಾಲೇಜಿನ ಪೂರ್ವ ತವಾನಿ(೫೮೫)-ತೃತೀಯ ಸ್ಥಾನ ಪಡೆದಿದ್ದಾರೆ.ವಿಜ್ಞಾನ ವಿಭಾಗದಲ್ಲಿ ಶ್ರೀರಾಮನಗರ ವಿದ್ಯಾನಿಕೇತನ ಪಿಯು ಕಾಲೇಜಿನ ಕಾವ್ಯಾ(೫೯೩)-ಪ್ರಥಮ, ಸಂಗೀತಾ(೫೯೨)ದ್ವಿತೀಯ, ಅಶ್ವಿನಿ(೫೯೧)ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.ಜಿಲ್ಲೆಯ ಪಿಯು ಟಾಪರ್:
ಅಮಿತಾ ಕಾತರಕಿ - ಸಿದ್ದೇಶ್ವರ ಪಿಯು ಕಾಲೇಜು-ಅಳವಂಡಿ, ಕಲಾ ವಿಭಾಗ (590) ಶೇ.98.33ಅಹಿಶ್ರೀ ದೇಸಾಯಿ – ಜ್ಞಾನಬಂಧು ಪಿಯು ಕಾಲೇಜು-ಭಾಗ್ಯನಗರ, ವಾಣಿಜ್ಯ ವಿಭಾಗ(589) ಶೇ.98.16
ಕಾವ್ಯಾ - ವಿದ್ಯಾನಿಕೇತನ ಪಿಯು ಕಾಲೇಜು-ಶ್ರೀರಾಮನಗರ –ವಿಜ್ಞಾನ ವಿಭಾಗ (593) ಶೇ.98.83ಜಾತಿ – ವರ್ಗವಾರು
ಎಸ್ಸಿ – ಶೇಕಡಾ 67.19ಎಸ್ಟಿ – ಶೇಕಡಾ 72.88
ಪ್ರವರ್ಗ 1 – ಶೇಕಡಾ 71.82ಎ ವರ್ಗ – ಶೇಕಡಾ 77.73
2 ಬಿ. ವರ್ಗ – ಶೇಕಡಾ 75.473ಎ ವರ್ಗ – ಶೇಕಡಾ 90.33
3ಬಿ ವರ್ಗ – ಶೇಕಡಾ 81.38ಇತರೆ - ಶೇಕಡಾ 80.39