ಸಾರಾಂಶ
ಪಾನಮತ್ತನಾಗಿ ಬೈಲಹೊಂಗಲದಿಂದ ಇಟಗಿ ಕ್ರಾಸ್‌ಗೆ ಬಸ್‌ನ್ನು ಅಜಾಗರೂಕತೆಯಿಂದ ಚಲಾಯಿಸುತ್ತ ಮೊದಲು ಟೋಲ್ ನಾಕಾದಲ್ಲಿನ ಗೋಡೆಗೆ ತಾಗಿಸಿ ಮುನ್ನಡೆದು ನಂತರ ಯರಡಾಲ ಕ್ರಾಸ್ ಹತ್ತಿರದ ದೊಡ್ಡ ತಗ್ಗಿನಲ್ಲಿ ಇನ್ನೇನು ಬಸ್ ಬೀಳಿಸುತ್ತಾನೆ ಎನ್ನುವಷ್ಟರಲ್ಲಿ ಬಸ್‌ನಲ್ಲಿದ್ದ ಪ್ರಯಾಣಿಕರು ಗಾಬರಿಗೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಕುಡಿದ ಮತ್ತಿನಲ್ಲಿ ಬಸ್ ಚಲಾಯಿಸುತ್ತ ಗೋಡೆಗೆ ತಾಗಿಸಿ ದೊಡ್ಡ ತಗ್ಗಿನಲ್ಲಿ ಬಸ್ ಬೀಳುವ ಹೊತ್ತಿನಲ್ಲಿ ಪ್ರಯಾಣಿಕರ ಜಾಗರೂಕತೆಯಿಂದ ಭಾರಿ ಅವಘಡ ತಪ್ಪಿರುವ ಘಟನೆ ಇಟಗಿ ಕ್ರಾಸ್ ಬಳಿ ನಡೆದಿದೆ. ಮಲ್ಲಪ್ಪ ಕರಿಮಲ್ಲನ್ನವರ ಅವರು ಈ ಬಸ್ ಚಾಲನೆ ಮಾಡುತ್ತಿದ್ದರು..ಆಗಿದ್ದೇನು?: ಪಾನಮತ್ತನಾಗಿ ಬೈಲಹೊಂಗಲದಿಂದ ಇಟಗಿ ಕ್ರಾಸ್‌ಗೆ ಬಸ್‌ನ್ನು ಅಜಾಗರೂಕತೆಯಿಂದ ಚಲಾಯಿಸುತ್ತ ಮೊದಲು ಟೋಲ್ ನಾಕಾದಲ್ಲಿನ ಗೋಡೆಗೆ ತಾಗಿಸಿ ಮುನ್ನಡೆದು ನಂತರ ಯರಡಾಲ ಕ್ರಾಸ್ ಹತ್ತಿರದ ದೊಡ್ಡ ತಗ್ಗಿನಲ್ಲಿ ಇನ್ನೇನು ಬಸ್ ಬೀಳಿಸುತ್ತಾನೆ ಎನ್ನುವಷ್ಟರಲ್ಲಿ ಬಸ್‌ನಲ್ಲಿದ್ದ ಪ್ರಯಾಣಿಕರು ಗಾಬರಿಗೊಂಡಿದ್ದಾರೆ.
ಪಾನಮತ್ತನಾಗಿ ಬೇಕಾಬಿಟ್ಟಿಯಾಗಿ ಬಸ್ ಚಾಲನೆ ಮಾಡುತ್ತಿರುವಾಗ ಪ್ರಯಾಣಿಕರು ರೋಸಿ ಹೋಗಿ ಚಾಲಕನನ್ನು ಬಸ್ ನಿಲ್ಲಿಸುವಂತೆ ಗದರಿಸಿದರು. ಬಸ್ ನಿಲ್ಲಿಸಿದ ಪ್ರಯಾಣಿಕರು ಬೇರೆ ವಾಹನದ ಮೊರೆ ಹೋಗಿ ತಮ್ಮ ಊರುಗಳಿಗೆ ತೆರಳಿದರು.ನಂತರ ಚಾಲಕನು ತನ್ನ ಸೀಟ್‌ನಲ್ಲಿ ನಿದ್ರಾವ್ಯಸ್ಥೆಗೆ ಜಾರಿದನು ಎಂದು ಹೇಳಲಾಗುತ್ತಿದೆ. ಈ ಬಸ್‌ನಲ್ಲಿನ ಪರ ಊರಿಗೆ ತೆರಳುವ ಶಾಲಾ ಕಾಲೇಜು ವಿದ್ಯಾರ್ಥಿಗಳು, ಪ್ರಯಾಣಿಕರು ಮದ್ಯವೆಸನಿ ಚಾಲಕ ಸೃಷ್ಟಿಸಿದ ಆವಾಂತರದಿಂದ ಸಾಕಷ್ಟು ತೊಂದರೆ ಅನುಭವಿಸಿದರು. ಇನ್ನಾದರೂ ಸಾರಿಗೆ ಅಧಿಕಾರಿಗಳು ಪಾನಮತ್ತ ಚಾಲಕರ ಮೇಲೆ ನಿಗಾ ವಹಿಸಿ ಕ್ರಮಕೈಗೊಳ್ಳೂತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.
---------