ಸಾರಾಂಶ
ಕುದೂರು: ಮನಸುಗಳನ್ನು ಕಟ್ಟುವ ಕೆಲಸವಾಗಬೇಕು. ವ್ಯಕ್ತಿಯೊಳಗಿನ ಶಕ್ತಿಯನ್ನು ಗುರುತಿಸಿ ಹೊರತೆಗೆಯಬೇಕು. ಅಂತಹ ವ್ಯಕ್ತಿಗಳಿಗೆ ಸ್ವಾವಲಂಬನೆ, ಸ್ವಾಭಿಮಾನದ ರುಚಿ ಹತ್ತಿಸಿ ಗೆಲುವು ಕಾಣುತ್ತಿರುವ ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆಯವರ ಸಾಧನೆಯನ್ನು ಚಿಕ್ಕಮಸ್ಕಲ್ ಜಂಗಮಠದ ಅಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ ಶ್ಲಾಘಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಣಿಗಲ್ ವಲಯ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮರೂರು ವಲಯಗಳ ಸಂಯುಕ್ತ ಆಶ್ರಯದಲ್ಲಿ ಕುದೂರಿನ ಕೆಪಿಎಸ್ ಶಾಲಾ ಅವರಣದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಶ್ರೀ ಸತ್ಯ ನಾರಾಯಣಸ್ವಾಮಿ ಪೂಜೆ ಹಾಗೂ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣೊಬ್ಬಳು ಸಾಧನೆಯ ಕ್ಷೇತ್ರಕ್ಕೆ ಬಂದರೆ ಆಕೆಯ ಮನೆ ಮಾತ್ರವಲ್ಲ ಮನೆತನವೂ ಉದ್ದಾರವಾಗುತ್ತದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರಿಗೆ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ ಎಂದರು.ಬೆಂಗಳೂರು ಹಾಲು ಒಕ್ಕೂಟದ ಸದಸ್ಯ ಡಾ.ರಾಜಣ್ಣ ಮಾತನಾಡಿ, ಭಾರತ ಅಧ್ಯಾತ್ಮಿಕತೆಯನ್ನು ಹೊಂದಿದ ದೇಶ. ಇಲ್ಲಿನ ಪ್ರತಿ ಆಚರಣೆಯೂ ಮನಸಿಗೆ ಶಾಂತಿ, ನೆಮ್ಮದಿ ಕೊಡುವಂತಹುದ್ದೇ ಆಗಿದೆ. ಸಾಮೂಹಿಕ ಸತ್ಯನಾರಾಯಣ ಪೂಜೆ ಮಾಡುವಾಗ ಯಾವುದೇ ಬೇಧಭಾವವಿಲ್ಲದೆ ಜಾತಿ ಧರ್ಮದ ವ್ಯತ್ಯಾಸ ಇಲ್ಲದೆ ಒಟ್ಟಿಗೆ ಕುಳಿತು ಪೂಜೆ ಮಾಡುವುದೇ ನಿಜದಾದ ರೀತಿನೀತಿ ಎಂದರು.
ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಕೆ.ಮುನಿರಾಜು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ದೇಶಕಂಡ ಸುಸಂಸ್ಕೃತ ಸಂಸ್ಥೆ, ಹಣಗಳಿಕೆಗೆ, ಆರ್ಥಿಕ ವಹಿವಾಟಿಗೆ ಮಾತ್ರ ಸೀಮಿತವಾಗದೆ, ಸಂಸ್ಕಾರ ನೀಡುವ ಕೆಲಸ ಮಾಡುತ್ತಿದೆ. ಬಡತನ ನಿವಾರಿಸಿ ಸ್ವಾವಲಂಬಿ ಭಾರತ ನಿರ್ಮಿಸುವುದೇ ಸಂಘದ ಮುಖ್ಯ ಉದ್ದೇಶ ಎಂದರು.ಸಂಸ್ಥೆಯ ಜಿಲ್ಲಾ ನಿರ್ದೆಶಕ ದಯಾಶೀಲಾ, ಗ್ರಾಪಂ ಅಧ್ಯಕ್ಷೆ ಕುಸುಮಾ, ಸಮಿತಿ ಅಧ್ಯಕ್ಷ ಬಸವರಾಜು, ಉಪಾಧ್ಯಕ್ಷೆ ನಿರ್ಮಲಾ ನಾಗೇಂದ್ರ, ಕಾರ್ಯದರ್ಶಿ ಅನಿಲ್ ಕುಮಾರ್, ಶ್ವೇತಾ, ಮಂಜುಳಾ, ಗಿರೀಶ್, ಶ್ರೀನಿವಾಸ್, ನಿಸಾರ್, ಹೊನ್ನಪ್ಪ, ಕಾವ್ಯ, ಸುಧ, ಪುಷ್ಪಲತಾ, ಪ್ರಸಾದ್, ಚಂದ್ರಕಲಾ, ದ್ರಾಕ್ಷಾಯಿಣಿ, ಅಸ್ಲಾಂಪಾಷ, ಅಬುತಾಲಿಬ್, ಮುರಳೀಧರ್ ಉಪಸ್ಥಿತರಿದ್ದರು.19ಕೆಆರ್ ಎಂಎನ್ 1.ಜೆಪಿಜಿ
ಕುದೂರು ಕೆಪಿಎಸ್ ಶಾಲಾ ಅವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಆಯೋಜಿದ್ದ ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜೆ ಹಾಗೂ ಧಾರ್ಮಿಕ ಸಭೆಯನ್ನು ಚಿಕ್ಕಮಸ್ಕಲ್ ಜಂಗಮ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಉದ್ಘಾಟಿಸಿದರು.