ಸಾರಾಂಶ
-ಶ್ರೀಸೀತಾ ರಾಘವ ಬ್ಯಾಂಕಿನ ಅಧ್ಯಕ್ಷ ಹಂಜಿ ಶಿವಸ್ವಾಮಿ ಅಧ್ಯಕ್ಷತೆಯಲ್ಲಿ ಗ್ರಾಹಕರ ಸಭೆ
----ಕನ್ನಡಪ್ರಭ ವಾರ್ತೆ, ಕಡೂರು.
ದೇಶದ ಇಂದಿನ ಆರ್ಥಿಕ ಸ್ಥಿತಿಯಲ್ಲಿ ರಾಜ್ಯ ಮತ್ತು ದೇಶದ ಆರ್ಥಿಕತೆ ಬಹಳಷ್ಟು ಕುಸಿಯುತ್ತಿದ್ದು ರಾಷ್ಟ್ರೀಕೃತ ಬ್ಯಾಂಕ್ ಮತ್ತು ಶೆಡ್ಯೂಲ್ ಬ್ಯಾಂಕ್‍ಗಳಲ್ಲಿ ಹಣವೇ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಆದರೆ, ಗ್ರಾಹಕರ ನಂಬಿಕೆ ಬಹುಮುಖ್ಯ ಎಂದು ಶ್ರೀಸೀತಾ ರಾಘವ ಬ್ಯಾಂಕಿನ ಅಧ್ಯಕ್ಷ ಹಂಜಿ ಶಿವಸ್ವಾಮಿ ಹೇಳಿದರು.ಅವರು ಪಟ್ಟಣದ ಕೆ.ವಿ.ಕಾಲೋನಿಯಲ್ಲಿರುವ ಶ್ರೀ ಸೀತಾರಾಘವ ಸೌಹಾರ್ದ ಸಹಕಾರ ಬ್ಯಾಂಕಿನ ಶಾಖೆಯ ಆವರಣದಲ್ಲಿ ಆಯೋಜಿಸಿದ್ದ ಗ್ರಾಹಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸಕ್ತ ದಿನಗಳಲ್ಲಿ ರಾಜ್ಯ ಮತ್ತು ದೇಶದ ಆರ್ಥಿಕತೆ ಕುಸಿಯುತ್ತಿರುವ ಪರಿಸ್ಥಿತಿಯಲ್ಲಿ ಸಹಕಾರಿ ಬ್ಯಾಂಕ್ ನಡೆಸುವುದು ಕಷ್ಟ.ಇಂತಹ ಸ್ಥಿತಿಯಲ್ಲೂ ನಮ್ಮ ಸೀತಾ ರಾಘವ ಸೌಹಾರ್ದ ಸಹಕಾರ ಬ್ಯಾಂಕಿನ ಹೊಸದುರ್ಗ, ಕಡೂರು, ಭದ್ರಾವತಿ, ಬೆಂಗಳೂರು ಶಾಖೆಗಳು ಉತ್ತಮ ರೀತಿಯಲ್ಲಿ ಲಾಭಾಂಶದತ್ತ ಮುನ್ನೆಡೆಯುತ್ತಿರುವುದಕ್ಕೆ ನಮ್ಮ ನಂಬಿಕೆಯ ಗ್ರಾಹಕರೇ ಮೂಲ ಕಾರಣರು ಎಂದು ಶ್ಲಾಘಿಸಿದರು.ಬ್ಯಾಂಕಿಂಗ್ ಕ್ಷೇತ್ರದ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಮೌಲ್ಯಗಳು ಮರೆಯಾಗುವ ಮೂಲಕ ಭ್ರಷ್ಟಾಚಾರ ಹೆಚ್ಚುತ್ತಿರುವುದು ಮುಂದಿನ ಆರ್ಥಿಕ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ಎಚ್ಚರಿಸಬೇಕಿದೆ. ಠೇವಣಿ ಇಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‍ಗಳು ಠೇವಣಿಗಾಗಿ ಸಹಕಾರ ಬ್ಯಾಂಕ್‍ಗಳ ಮೊರೆ ಹೋಗುತ್ತಿವೆ. ಈ ಹಿನ್ನೆಲೆ ದೇಶದ ಆರ್ಥಿಕತೆ ಎತ್ತ ಸಾಗುತ್ತಿದೆ ಎಂಬ ಅನುಮಾನ ಹುಟ್ಟಿಕೊಳ್ಳುತ್ತಿದ್ದು. ಇದನ್ನು ಕೇಂದ್ರ ಅರ್ಥ ಸಚಿವರು ಒಪ್ಪಿಕೊಳ್ಳುತ್ತಿದ್ದಾರೆ. ಆದರೆ, ಪ್ರಧಾನಿಗಳು ದೇಶದ ಆರ್ಥಿಕತೆಯ ಬಗ್ಗೆ ಎಲ್ಲಿಯೂ ಮಾತನಾಡುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಆರ್ ಬಿಐ ಗೆ ಹಿಂದೆ ಒಬ್ಬರೇ ಗೌರ್ನರ್ ಇದ್ದರು. ಈಗ ಮೂರು ಜನರನ್ನು ಮತ್ತೆ ನೇಮಕ ಮಾಡಿರುವುದು ಏಕೆಂದು ತಿಳಿಯುತ್ತಿಲ್ಲ. ಈ ಬಗ್ಗೆ ಚಾರ್ಟ್‌ಡ್ ಅಕೌಂಟೆಂಟ್, ಆರ್ಥಿಕ ತಜ್ಞರು, ಬ್ಯಾಂಕ್‍ನ ಉನ್ನತ ಮಟ್ಟದ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ಇಲ್ಲ ಇದನ್ನು ಪ್ರಶ್ನಿಸುವವರು ಯಾರು? ಎಂದರು.ಸಹಕಾರ ಸಂಘಗಳಲ್ಲಿ ಉದ್ದೇಶ ಪೂರಿತ ಸಾಲಗಾರರು ಹೆಚ್ಚುತ್ತಿದ್ದು, ಶಾಖೆಯನ್ನು ಇಂತಹವರಿಂದ ನಡೆಸುವುದೇ ಕಷ್ಟಕರ. ಸಾಲ ಪಡೆದು ನ್ಯಾಯಾಲಯದ ಮೊರೆ ಹೋಗುವುದು ಇವರ ಉದ್ದೇಶ. ಕಾನೂನಿನ ರೀತಿ ಹೋರಾಟ ಮಾಡಿ ಅವರಿಂದ ಸಾಲ ವಸೂಲಾತಿ ಮಾಡುವಲ್ಲಿ ಸೀತಾರಾಘವ ಬ್ಯಾಂಕ್ ವಸೂಲಾತಿಯಲ್ಲಿ ಗಣನೀಯ ಸಾಧನೆ ಮಾಡಿದೆ ಎಂದರು.
ದೇಶದ ಆರ್ಥಿಕತೆ ಪರಿಸ್ಥಿತಿಯಲ್ಲಿಯೂ ಶಾಖೆಗಳು ಸಾಧನೆ ಮಾಡುತ್ತಿದ್ದು, ನಮ್ಮ ನಂಬಿಕೆಯ ಅರ್ಹ ಗ್ರಾಹಕರಿಂದ ಹಾಗೂ ಕಳೆದ ಮೂರು ದಶಕಗಳಿಂದ ಬ್ಯಾಂಕ್ ಯಾವುದೇ ಲೋಪವಿಲ್ಲದಂತೆ ಮುನ್ನೆಡೆಸುತ್ತಿದ್ದು, ನಿಮ್ಮ ಸಲಹೆ, ಸಹಕಾರದ ಶಕ್ತಿ ತುಂಬಿದರೆ ಯಾವುದೇ ಸಮಸ್ಯೆ ಇಲ್ಲದಂತೆ ಶಾಖೆಗಳನ್ನು ಆರ್ಥಿಕವಾಗಿ ಇನ್ನು ಲಾಭ ಗಳಿಸಿ ನಿಮ್ಮ ಸೇವೆಗೆ ಸಿದ್ದವಾಗಿರುತ್ತದೆ ಎಂದರು.ಬ್ಯಾಂಕ್ ಉಪಾಧ್ಯಕ್ಷ ಆದಿರಾಜಯ್ಯ,ಪ್ರಧಾನ ವ್ಯವಸ್ಥಾಪಕ ಎನ್.ಮಂಜುನಾಥ್ ಬ್ಯಾಂಕ್‍ನ ಬೆಳವಣಿಗೆಯ ಬಗ್ಗೆ ಮಾತನಾಡಿ, ಗ್ರಾಹಕರ ಸಲಹೆ ಸೂಚನೆಗಳನ್ನು ಪಡೆದು, ಬ್ಯಾಂಕಿನ ಅಂಕಿ ಅಂಶಗಳ ಪ್ರಗತಿಯನ್ನು ಮಂಜುನಾಥ್ ವಿವರಿಸಿದರು. ಕಡೂರು ಶಾಖೆಯ ವ್ಯವಸ್ಥಾಪಕ ಚೇತನ್ ಜಿ.ಪಿ. ಮತ್ತು ಸಿಬ್ಬಂದಿ ವರ್ಗದವರು, ಗ್ರಾಹಕರು ಹಾಜರಿದ್ದರು.
......ಬಾಕ್ಸ್ ಸುದ್ದಿ.......ಈ ಭಾರಿ ನಮ್ಮ ಬ್ಯಾಂಕಿಗೆ 118 ಕೋಟಿ ರು. ಠೇವಣಿ ಸಂಗ್ರಹದ ಗುರಿ ಹೊಂದಲಾಗಿದೆ. ಇದಕ್ಕೆ ನಮ್ಮೆಲ್ಲ ಗ್ರಾಹಕರ ಸಹಕಾರ ಬೇಕಾಗಿದೆ ಎಂದು ಮನವಿ ಮಾಡಿದ ಹಂಜಿ ಶಿವಸ್ವಾಮಿ, ನಮ್ಮ ನಾಲ್ಕು ಶಾಖೆಗಳಿಂದ 117 ಕೋಟಿ ರು. ಸಾಲವನ್ನು ಗ್ರಾಹಕರಿಗೆ ನೀಡಿದ್ದು, 165 ಕೋಟಿ ರು. ಠೇವಣಿ ಸಂಗ್ರಹವಾಗಿದೆ, ಒಟ್ಟಾರೆ 285 ಕೋಟಿ ವ್ಯವಹಾರ ನಡೆಯುತ್ತಿದೆ. ಕಡೂರು ಶಾಖೆಯಲ್ಲಿ 29,63 ಕೋಟಿ ರು. ಠೇವಣಿ ಸಂಗ್ರಹವಾಗಿದೆ. 35 ಕೋಟಿ ರು. ಸಾಲ ವಿತರಿಸಲಾಗಿದೆ ಎಂದರು.
----ಫೋಟೋ: 16ಕೆಕೆಡಿಯು1
ಕಡೂರು ಪಟ್ಟಣದ ಸೀತಾ ರಾಘವ ಬ್ಯಾಂಕ್‍ನ ಗ್ರಾಹಕರ ಸಭೆಯಲ್ಲಿ ಅಧ್ಯಕ್ಷ ಹಂಜಿ ಶಿವಸ್ವಾಮಿ ಮಾತನಾಡಿದರು. ಉಪಾಧ್ಯಕ್ಷ ಆದಿರಾಜಯ್ಯ,ವ್ಯವಸ್ಥಾಪಕ ಮಂಜುನಾಥ್ ಇದ್ದರು.