ಎಲ್ಲ ಧರ್ಮಗಳ ಸಾರವೂ ಒಂದೇ: ವೀರೇಶ್ ಮೊರಸ್

| Published : Jul 06 2025, 01:48 AM IST

ಸಾರಾಂಶ

ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಭೇದಭಾವ ಮಾಡದೆ ನಾವೆಲ್ಲರೂ ಒಂದೇ, ಎಲ್ಲ ಧರ್ಮದ ಸಾರವೂ ಒಂದೇಯಾಗಿದೆ ಎಂದು ತೀರ್ಥಹಳ್ಳಿ ಕ್ರಿಶ್ಚಿಯನ್ ಧರ್ಮಗುರುಗಳು ವೀರೇಶ್ ಮೊರಸ್ ಹೇಳಿದರು.

ರಿಪ್ಪನ್‍ಪೇಟೆ: ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಭೇದಭಾವ ಮಾಡದೆ ನಾವೆಲ್ಲರೂ ಒಂದೇ, ಎಲ್ಲ ಧರ್ಮದ ಸಾರವೂ ಒಂದೇಯಾಗಿದೆ ಎಂದು ತೀರ್ಥಹಳ್ಳಿ ಕ್ರಿಶ್ಚಿಯನ್ ಧರ್ಮಗುರುಗಳು ವೀರೇಶ್ ಮೊರಸ್ ಹೇಳಿದರು.

ರಿಪ್ಪನ್‍ಪೇಟೆಯ ಜುಮ್ಮಾ ಮಸೀದಿಯ ಎಸ್.ಎಸ್.ಎಫ್.ನವರು ಆಯೋಜಿಸಲಾದ ಸೌಹಾರ್ದ ನಡಿಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲ ಉಪನದಿಗಳು ಸಮುದ್ರವನ್ನು ಸೇರುತ್ತವೆ ಹಾಗೆ ಅಯಾ ಧರ್ಮದವರು ಕೊನೆಯಲ್ಲಿ ಸೇರುವುದು ಸ್ಮಶಾನಕ್ಕೆ ಎಂದರು.

ಧಾರ್ಮಿಕ ಗುರುಗಳಾದವರು ಧರ್ಮಭೋದನೆ ಮಾಡುವ ಮೂಲಕ ಸಮಾಜದ ಸಂಘಟನೆ ಮಾಡಬೇಕು, ಅದರೆ ಧರ್ಮಭೋದನೆ ಬಿಟ್ಟು ರಾಜಕೀಯ ನಾಯಕರ ಬೆಂಬಲಕ್ಕೆ ನಿಂತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಇದು ಸಮಾಜದಲ್ಲಿ ಸಾಮರಸ್ಯಕ್ಕೆ ಅಪಾಯಕಾರಿಯಾಗಲಿದೆ ಎಂದು ತಿಳಿಸಿದರು.

ಒಂದು ದೇಶ, ಒಂದು ಸಮಾಜ, ಒಂದು ಧರ್ಮಕ್ಕೆ ಗೌರವ ಉಂಟಾಗಬೇಕಾದರೆ ಜಾತಿ, ಮತ, ಪಂಥಗಳ ಭೇದವನ್ನು ಮರೆತು ಎಲ್ಲ ಧರ್ಮವರು ಮತ್ತು ಜಾತಿಯವರು ಸಾಮರಸ್ಯದಿಂದ ಬದುಕಿ ಒಗ್ಗಟಾಗಿದ್ದರೆ ದೇಶದಲ್ಲಾಗಲಿ ಸಮಾಜದಲ್ಲಾಗಲಿ ಯಾವುದೇ ಒಡಕುಗಳಾಗಲಿ ಕೆಡಕುಗಳಾಗಲಿ ಉಂಟಾಗುವುದಿಲ್ಲ, ನಾವೆಲ್ಲಾ ಒಂದೇ ಎಂಬ ಮನೋಭಾನವೆ ಬೆಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮಳಲಿಮಠದ ಪೀಠಾಧ್ಯಕ್ಷರಾದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಮುಸ್ಲಿಮರ ನಿಷ್ಠೆ, ಕ್ರಿಶ್ಚಯನ್‍ರ ಕರುಣೆ ಹಿಂದೂಗಳ ಭಾವೈಕ್ಯತೆಯಿಂದಾಗಿ ಸಮಾಜದಲ್ಲಿ ಸೌಹಾರ್ದತೆಯ ಭಾವನೆ ಬೆಳಸಲು ಸಾಧ್ಯ ಎಂದ ಅವರು, ಸಿದ್ಧಾಂತ ಶಿಖಾಮಣಿಯ ಧರ್ಮಗ್ರಂಥದ ಸಾರದಿಂದ ಸರ್ವ ಧರ್ಮದ ಪರಿಪಾನೆಯಿಂದ ಸಮಾಜದಲ್ಲಿ ಸಾಮರಸ್ಯ ಬೆಳಸಲು ಸಾಧ್ಯ ಎಂದು ಹೇಳಿದರು.

ರಾಜ್ಯ ಎಸ್.ಎಸ್.ಎಫ್ ಅಧ್ಯಕ್ಷ ಸೂಫಿಯನ್ ಶಖಾಪಿ ಮಾತನಾಡಿ, ಎಲ್ಲ ಧರ್ಮದಲ್ಲಿ ಶೇ.10 ಕ್ಕೂ ಆಧಿಕ ಜನರು ಸಮಾಜದಲ್ಲಿ ಕೋಮುಭಾವನೆಯಿಂದ ಆಶಾಂತಿ ಹುಟ್ಟು ಹಾಕುತ್ತಿದ್ದು, ಇದರಿಂದ ಧರ್ಮ ಧರ್ಮ, ಜಾತಿ ಜಾತಿಯಲ್ಲಿ ಆರಾಜಕತೆ ಸೃಷ್ಟಿಯಾಗುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಮಾಜದಲ್ಲಿ ಶಾಂತಿ ನೆಮ್ಮದಿಯಿಂದ ಇದ್ದರೆ ಮಾತ್ರ ದೇಶದಲ್ಲಿ ನೆಮ್ಮದಿಯ ಬದುಕನ್ನು ಕಂಡುಕೊಳ್ಳುವುದರ ಮೂಲಕ ರಾಷ್ಟ್ರಾಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಜುಮ್ಮಾ ಮಸೀದಿ ಧರ್ಮಗುರು ಮಹ್ಮದ್‍ ಸಖಾಫಿ, ಮುಸ್ಲಿಂ ಮುಖಂಡರಾದ ಆರ್.ಎ.ಚಾಬುಸಾಬ್, ಆರ್.ಎ.ಆಮ್ಮೀರ್‍ಹಂಜಾ, ಗ್ರಾಮ ಪಂಚಾಯಿತಿ ಆಧ್ಯಕ್ಷೆ ಧನಲಕ್ಷ್ಮಿ, ಆಶೀಫ್‍ ಭಾಷಾ, ಜುಮ್ಮಾ ಮಸೀದಿಯ ಆಧ್ಯಕ್ಷ ಹಸನಬ, ಸಾಮಾಜಿಕ ಕಾರ್ಯಕರ್ತ ಟಿ.ಆರ್.ಕೃಷ್ಣಪ್ಪ, ಜನಪರ ಹೋರಾಟ ವೇದಿಕೆ ಅಧ್ಯಕ್ಷ ಆರ್.ಎನ್.ಮಂಜುನಾಥ, ನಿರೂಪ್‌ ಕುಮಾರ್, ಆಟೋ ಗಫೂರ್, ಶೇಖಅಬ್, ಮುನೀರ್ ಇದ್ದರು.

ಇದೇ ಸಂದರ್ಭದಲ್ಲಿ ಜುಮ್ಮಾ ಮಸೀದಿಯಿಂದ ನಾಲ್ಕು ಪ್ರಮುಖ ರಸ್ತೆಯಲ್ಲಿ ಎಸ್.ಎಸ್.ಎಫ್ ನಿಂದ ಪಥ ಸಂಚಲನ ನಡೆಸಲಾಯಿತು.