ಹಾನಗಲ್ಲ:ನವನಗರದ ಚೌಡೇಶ್ವರಿ ಭೂತನಾಥೇಶ್ವರ ಜಾತ್ರಾ ಮಹೋತ್ಸವ ಭಕ್ತರ ಹರ್ಷೋದ್ಗಾರದ ಮಧ್ಯೆ ಸಂಭ್ರಮ, ಸಡಗರದಿಂದ ನೆರವೇರಿತು.ಶಾಸಕ ಶ್ರೀನಿವಾಸ ಮಾನೆ ಭಾಗವಹಿಸಿ, ವಿಶೇಷ ಪೂಜೆ ಸಲ್ಲಿಸಿದರು. ಜಾತ್ರಾ ಮಹೋತ್ಸವಗಳು ಕೇವಲ ಧಾರ್ಮಿಕ ಆಚರಣೆಗಳಲ್ಲ. ನಮ್ಮ ಸಂಸ್ಕೃತಿ, ಜನಪದ ಪರಂಪರೆ ಮತ್ತು ಒಗ್ಗಟ್ಟಿನ ಸಂಕೇತಗಳಾಗಿವೆ. ಯುವ ಪೀಳಿಗೆ ನಮ್ಮ ಸಂಪ್ರದಾಯಗಳನ್ನು ಅರಿತು ಮುಂದಿನ ತಲೆಮಾರಿಗೆ ಸಾಗಿಸುವ ಜವಾಬ್ದಾರಿ ಪ್ರದರ್ಶಿಸಬೇಕಿದೆ. ಆಧುನಿಕತೆಯ ಪ್ರಭಾವ ಹೆಚ್ಚಿದ್ದರೂ ಸಹ ಇಂದಿಗೂ ಸಹ ಧಾರ್ಮಿಕ ಆಚರಣೆ, ಸಂಪ್ರದಾಯಗಳು ಜೀವಂತಾಗಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.ಪಂಚಗವ್ಯ ಕಲಶ ಪೂಜೆ, ಧರ್ಮ ಧ್ವಜಾರೋಹಣ, ಗಂಗಾಪೂಜೆ, ಅಭಿಷೇಕ, ಕಲಾವೃದ್ಧಿ ಹೋಮ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪುರಸಭೆ ಮಾಜಿ ಅಧ್ಯಕ್ಷ ಪರಶುರಾಮ ಖಂಡೂನವರ, ಮಾಜಿ ಉಪಾಧ್ಯಕ್ಷ ಮಹೇಶ ಪವಾಡಿ, ಮಾಜಿ ಸದಸ್ಯ ವಿರುಪಾಕ್ಷಪ್ಪ ಕಡಬಗೇರಿ, ಮುಖಂಡರಾದ ಗುರುರಾಜ ನಿಂಗೋಜಿ, ಆದರ್ಶ ಶೆಟ್ಟಿ, ಸುರೇಶ ನಾಗಣ್ಣನವರ, ಸಂತೋಷ ಸುಣಗಾರ, ರಾಜಕುಮಾರ ಶಿರಪಂಥಿ, ಉಮೇಶ ಮಾಳಗಿ, ಸುರೇಶ ಭದ್ರಾವತಿ, ಸೋಮು ವಡ್ಡರ, ನಾಗಪ್ಪ ವಡ್ಡರ, ಲೋಹಿತ್ ಜೋಗಿ, ವಿಶಾಲ ಬಾಬಜಿ, ಜಾಫರ್, ಪರಶುರಾಮ ಹರಿಜನ, ವೆಂಕಟೇಶ ಬೆಟಗೇರಿ, ಶರಣ ಹಾಲಗೊಲ್ಲರ, ಹನುಮಂತ ಅಲೆಮಾರಿ, ಪರಶುರಾಮ ಜೋಗಿ, ಆಕಾಶ ವಡ್ಡರ, ಸುರೇಶ ಭದ್ರಾವತಿ ಇದ್ದರು.