ಸಾರಾಂಶ
ಸವಿತಾ ಸಮಾಜದವರ ವಿಶೇಷ ಮಂಗಳವಾದ್ಯ ಹಾಗೂ ವೈವಿಧ್ಯಮಯ ಪಟಾಕಿಗಳ ಚಿತ್ತಾರದೊಂದಿಗೆ ನಾಲ್ಕೂ ಬೀದಿಗಳಲ್ಲಿ ಉತ್ಸವ ನೆರವೇರಿತು.
ಮೇಲುಕೋಟೆ: ಶ್ರೀ ಚೆಲುವನಾರಾಯಣಸ್ವಾಮಿಗೆ ನರಕ ಚತುರ್ದಶಿ ಉತ್ಸವ ರಾತ್ರಿ ವೈಭವದಿಂದ ನೆರವೇರಿತು. ದೇವಾಲಯದಿಂದ ದೀಪಾವಳಿ ಮಂಟಪಕ್ಕೆ ಸ್ವಾಮಿ ಉತ್ಸವ ನೆರವೇರಿದ ನಂತರ ಅಲ್ಲಿ ತಿರುವಾರಾಧನೆ ಸಮೇತ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ನಂತರ ಸವಿತಾ ಸಮಾಜದವರ ವಿಶೇಷ ಮಂಗಳವಾದ್ಯ ಹಾಗೂ ವೈವಿಧ್ಯಮಯ ಪಟಾಕಿಗಳ ಚಿತ್ತಾರದೊಂದಿಗೆ ನಾಲ್ಕೂ ಬೀದಿಗಳಲ್ಲಿ ಉತ್ಸವ ನೆರವೇರಿತು. ಸ್ಥಾನೀಕರು ಅರ್ಚಕರ ಮತ್ತು ಕೈಂಕರ್ಯಪರರು ದೇವರ ಉತ್ಸವದ ಮುಂದೆ ವಿಶೇಷ ಪಟಾಕಿಗಳನ್ನು ಸಿಡಿಸಿ ಉತ್ಸವಕ್ಕೆ ಮೆರಗು ನೀಡಿದರು. ಇದಕ್ಕೂ ಮುನ್ನ ಮುಂಜಾನೆ ನರಕ ಚತುರ್ದಶಿ ಪ್ರಯುಕ್ತ ವೇದಮಂತ್ರದೊಂದಿಗೆ ಅಭಿಷೇಕ ನೆರವೇರಿತು.