ರಸ್ತೆ ಕಾಣದೆ ಕೊಚ್ಚಿಹೋದ ಗೂಡ್ಸ್ ವಾಹನ

| Published : Oct 24 2024, 12:31 AM IST

ಸಾರಾಂಶ

ಮಳೆ ನೀರು ರಸ್ತೆಯ ಮೇಲೆ ಹರಿದಿದ್ದರಿಂದ ರಸ್ತೆ ಕಾಣದೆ ಗೂಡ್ಸ್ ವಾಹನ ಕೊಚ್ಚಿ ಹೋದ ಘಟನೆ ತಾಲೂಕಿನ ತೊರೇಹಳ್ಳಿಯ ಹಳ್ಳದ ಕಚ್ಚಾ ಸೇತುವೆ ಬಳಿ ನಡೆದಿದೆ.

ಗುಬ್ಬಿ: ಮಳೆ ನೀರು ರಸ್ತೆಯ ಮೇಲೆ ಹರಿದಿದ್ದರಿಂದ ರಸ್ತೆ ಕಾಣದೆ ಗೂಡ್ಸ್ ವಾಹನ ಕೊಚ್ಚಿ ಹೋದ ಘಟನೆ ತಾಲೂಕಿನ ತೊರೇಹಳ್ಳಿಯ ಹಳ್ಳದ ಕಚ್ಚಾ ಸೇತುವೆ ಬಳಿ ನಡೆದಿದೆ.

ಈ ವಾಹನ ಚಿಕ್ಕನಾಯಕನಹಳ್ಳಿಯಿಂದ ಬಂದಿದ್ದು ಡ್ರೈವರ್ ಮಾಮೂಲಿ ರಸ್ತೆಯ ಎಂದೇ ಹೋಗುವ ಸಮಯದಲ್ಲಿ ನೀರಿನ ರಭಸಕ್ಕೆ ಗೂಡ್ಸ್ ವಾಹನ ಕೊಚ್ಚಿಹೋಗಿದೆ. ಈ ಗೂಡ್ಸ್ ವಾಹನ ರಾತ್ರಿ ಮುಳುಗಡೆಯಾಗಿದ್ದು, ಬೆಳಿಗ್ಗೆ ಕ್ರೇನ್ ಮೂಲಕ ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ನಡೆಸಿ ನಂತರ ಮೇಲೆತ್ತಲಾಯಿತು.ಇಂತಹ ಘಟನೆ ಎರಡು ವರ್ಷಗಳಿಂದ ನಡೆಯುತ್ತಿವೆ. ತೊರೇಹಳ್ಳಿ ಹಳ್ಳಕ್ಕೆ ಸೇತುವೆ ನಿರ್ಮಿಸಲು ಸ್ಥಳೀಯರು ಹಾಗೂ ರೈತರು ಸಂಬಂಧಪಟ್ಟ ಅಧಿಕಾರಿ, ಜನಪ್ರತಿನಿಧಿಗಳಿಗೆ ತಿಳಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.

ಹೇರೂರು ಗ್ರಾಪಂ ಮಾಜಿ ಅಧ್ಯಕ್ಷ ಟಿ.ಬಿ. ರಂಗನಾಥ್ ಮಾತನಾಡಿ, ತೊರೇಹಳ್ಳಿ ಸಮೀಪವಿರುವ ಹಳ್ಳಕ್ಕೆ ಸೇತುವೆ ನಿರ್ಮಿಸಿದರೆ ಗೊಳೇನಳ್ಳಿ, ಮಡೇನಹಳ್ಳಿ, ಹೂನ್ನ ಶೆಟ್ಟಿಹಳ್ಳಿ ಹಾಗೂ ಕಡಬ ಕಡೆಯಿಂದ ಬರುವ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಸಂಬಂಧಪಟ್ಟ ಅಧಿಕಾರಿ, ಜನ ಪ್ರತಿನಿಧಿಗಳು ಎಚ್ಚೆತ್ತು ಸೇತುವೆ ನಿರ್ಮಿಸಬೇಕೆಂದು ಮನವಿ ಮಾಡಿದ್ದಾರೆ.