ಕನಕಪುರ: ರೈತ ಚಳವಳಿಯ ಮಹಾಶಕ್ತಿಯಾಗಿದ್ದ ಎನ್ ಡಿ ಸುಂದರೇಶ್ ತಾಯಿಯಂತ ಹೃದಯ ಹೊಂದಿದ್ದ ಮಹಾನ್ ಚೇತನ ಎಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ನಲ್ಲಹಳ್ಳಿ ಶ್ರೀನಿವಾಸ್ ತಿಳಿಸಿದರು.
ಕನಕಪುರ: ರೈತ ಚಳವಳಿಯ ಮಹಾಶಕ್ತಿಯಾಗಿದ್ದ ಎನ್ ಡಿ ಸುಂದರೇಶ್ ತಾಯಿಯಂತ ಹೃದಯ ಹೊಂದಿದ್ದ ಮಹಾನ್ ಚೇತನ ಎಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ನಲ್ಲಹಳ್ಳಿ ಶ್ರೀನಿವಾಸ್ ತಿಳಿಸಿದರು.
ರೈತ ಸಂಘದ ಕಚೇರಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಆಯೋಜಿಸಿದ್ದ ರೈತ ಸಂಘದ ಸಂಸ್ಥಾಪಕ ಹಸಿರು ನಕ್ಷತ್ರ ಎನ್.ಡಿ.ಸುಂದರೇಶ್ 33ನೇ ಪುಣ್ಯ ಸ್ಮರಣೋತ್ಸವ ಹಾಗೂ ವಿಶ್ವ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 80ರ ದಶಕದಲ್ಲಿ ಎಂ.ಡಿ.ಸುಂದರೇಶ್ ರೈತರ ಮೇಲಿನ ದೌರ್ಜನ್ಯಗಳನ್ನು ಖಂಡಿಸಲು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯನ್ನು ಹುಟ್ಟುಹಾಕಿದರು. ರೈತ ಚಳವಳಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಎನ್.ಡಿ.ಸುಂದರೇಶ್ ರೈತರ ಪಾಲಿಗೆ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದರು ಎಂದು ತಿಳಿಸಿದರು.ಅವರನ್ನು ಕಳೆದುಕೊಂಡು ಇಂದಿಗೆ 33 ವರ್ಷವಾಗಿದೆ. ಅವರ ಆದರ್ಶ ಹಾಗೂ ಹೋರಾಟದ ಮನೋಭಾವನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದೆ. ವಿಶ್ವ ರೈತ ದಿನಾಚರಣೆ ದಿನವಾದ ಇಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಮೇಲೆ ದಬ್ಬಾಳಿಕೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರದ ಅಮೆರಿಕದೊಂದಿಗೆ ಕೃಷಿ ಉತ್ಪನ್ನ ಹಾಗೂ ಹಾಲಿನ ಉತ್ಪನ್ನಗಳನ್ನು ಆಮದು ಒಪ್ಪಂದ ಮಾಡಿಕೊಳ್ಳುವುದನ್ನು ಕೂಡಲೇ ನಿಲ್ಲಿಸಬೇಕು. ಹಾಗೂ ರಾಜ್ಯ ಸರ್ಕಾರ ಭೂಸ್ವಾಧೀನ ಕಾಯ್ದೆ ಎಂಬ ಕರಾಳ ಕಾನೂನನ್ನು ಕೂಡಲೆ ಕೈಬಿಡಬೇಕು. ರೈತರ ಬೆಳೆಗೆ ಸೂಕ್ತ ಬೆಲೆ ಬಂದಾಗ ಮಾತ್ರ ರೈತ ದಿನಾಚರಣೆಗೆ ಮಹತ್ವದ ಅರ್ಥ ಸಿಗುತ್ತದೆ ಎಂದು ತಿಳಿಸಿದರು.
ಮುಳ್ಳಳ್ಳಿ ಮಂಜುನಾಥ್ ಮಾತನಾಡಿ, ರೈತರು ಒಗ್ಗಟ್ಟಾಗದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗೆ ತೆಲೆದಂಡ ತರಬೇಕಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ಕೆಬ್ಬಳ್ಳಿ ಶಿವರಾಜ, ಮಲ್ಲಿಕಾರ್ಜುನ್, ರವಿ ದುಂಡಪ್ಪ, ಶಿವರಾಜು, ಸಿದ್ದು, ಕರಿಯಪ್ಪ, ರೈತ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.ಕೆ ಕೆ ಪಿ ಸುದ್ದಿ 02:
ಕನಕಪುರದ ರೈತ ಸಂಘದ ಕಚೇರಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಆಯೋಜಿಸಿದ್ದ ರೈತ ಸಂಘದ ಸಂಸ್ಥಾಪಕ ಹಸಿರು ನಕ್ಷತ್ರ ಎನ್.ಡಿ.ಸುಂದರೇಶ್ 33ನೇ ಪುಣ್ಯ ಸ್ಮರಣೋತ್ಸವ ಹಾಗೂ ವಿಶ್ವ ರೈತ ದಿನಾಚರಣೆ ಆಚರಿಸಲಾಯಿತು.