ಸಾಮಾಜಿಕ ಸಮಾನತೆಗೆ ಹೋರಾಡಿದ ಮಹಾನ್‌ ಶರಣ ಬಸವಣ್ಣ

| Published : Mar 04 2024, 01:17 AM IST

ಸಾಮಾಜಿಕ ಸಮಾನತೆಗೆ ಹೋರಾಡಿದ ಮಹಾನ್‌ ಶರಣ ಬಸವಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವಗುರು ಬಸವೇಶ್ವರರು ಸಾಮಾಜಿಕ ಸಮಾನತೆಯ ಜೊತೆಗೆ ಸ್ತ್ರೀ ಸಮಾನತೆಗಾಗಿ ಹೊರಾಡಿದ ಮಹಾನ್‌ ಶರಣರಾಗಿದ್ದು, ಮೂಢ ನಂಬಿಕೆ, ಕಂದಾಚಾರಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಜೀವನದುದ್ದಕ್ಕೂ ಹೋರಾಟ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಜೇವರ್ಗಿ

12ನೇ ಶತಮಾನದಲ್ಲಿ ವಿಶ್ವಗುರು ಬಸವೇಶ್ವರರು ಸಾಮಾಜಿಕ ಸಮಾನತೆಯ ಜೊತೆಗೆ ಸ್ತ್ರೀ ಸಮಾನತೆಗಾಗಿ ಹೊರಾಡಿದ ಮಹಾನ್‌ ಶರಣರಾಗಿದ್ದು, ಮೂಢ ನಂಬಿಕೆ, ಕಂದಾಚಾರಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಜೀವನದುದ್ದಕ್ಕೂ ಹೋರಾಟ ನಡೆಸಿದ್ದಾರೆ ಎಂದು ಅತ್ತಿವೇರಿಯ ಮಾತೆ ಬಸವೇಶ್ವರಿ ತಾಯಿ ಹೇಳಿದರು.

ಅವರು ಪಟ್ಟಣದ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬಸವ ಕೇಂದ್ರದ ಮಹಿಳಾ ಘಟಕದ 4ನೇ ವಾರ್ಷಿಕೋತ್ಸವ ನಿಮಿತ್ತ ಆಯೋಜಿಸಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಅನುಭಾವ ನೀಡಿದರು.

ಇಷ್ಟಲಿಂಗವೆಂಬ ಅದ್ಭುತ ಶಕ್ತಿಯನ್ನು ಕರುಣಿಸಿದ ಬಸವಣ್ಣನವರು, ಪಾಪ, ಪುಣ್ಯ, ಪವಿತ್ರ, ಅಪವಿತ್ರ, ಶ್ರೇಷ್ಠ, ಶಕುನ, ಅಪಶಕುನ, ರಾಹುಕಾಲ, ಗುಳಿಕಾಲ, ಜಾತಿ ಭೇದ, ಲಿಂಗಭೇದಗಳನ್ನು ತೊಡೆದು ಹಾಕಿ ಸಮಾಜದಲ್ಲಿನ ಪ್ರತಿಯೊಬ್ಬರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದರು ಎಂದು ಮಾತೆ ಬಸವೇಶ್ವರಿ ತಾಯಿ ಹೇಳಿದರು.

ಕಾರ್ಯಕ್ರಮದಲ್ಲಿ ಬಸವಕೇಂದ್ರದ ತಾಲೂಕು ಘಟಕದ ಅಧ್ಯಕ್ಷ ಶರಣಬಸವ ಕಲ್ಲಾ, ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಪಾಟೀಲ್, ಸ್ವಾತಿ ಶಿವರಾಜ ಪಾಟೀಲ್, ಹೇಮಾ ರಾಜಶೇಖರ ಸೀರಿ, ಸುನೀತಾ ಷಣ್ಮುಖಪ್ಪ ಗೋಗಿ, ನೀಲಮ್ಮನ ಬಳಗದ ಅಧ್ಯಕ್ಷೆ ಮಹಾನಂದ ಹುಗ್ಗಿ, ಪ್ರಣವ ಶಿವರಂಜನ ಸತ್ಯಂಪೇಟೆ, ನಾಗಮ್ಮ ಬಿಳವಾರ, ಶರಣಮ್ಮ ಹರವಾಳ, ರೂಪಾ ಪಾಟೀಲ್, ಶಿವನಗೌಡ ಹಂಗರಗಿ, ಸದಾನಂದ ಪಾಟೀಲ್, ವಿಜಯಕುಮಾರ ಪಾಟೀಲ್, ನೀಲಕಂಠ ಅವಂಟಿ, ಅವ್ವಣ್ಣಗೌಡ ಬಿರಾದಾರ, ಬಸವರಾಜ ಅರಳಗುಂಡಗಿ, ಕಂಠೆಪ್ಪ ಮಾಸ್ತರ, ಎಸ್.ಕೆ.ಬಿರಾದಾರ, ಬಾಪುಗೌಡ ಬಿರಾಳ, ಶಿವಶರಣಯ್ಯ ಚತುರಾಚಾರ್ಯಮಠ, ತ್ರಿವೇಣಿ ಕುರಳಗೇರಿ, ಶ್ರೀದೇವಿ ಕಲ್ಲಾ, ಈರಣ್ಣ ಭೂತಪೂರ, ದೇವಿಂದ್ರ ಹಳಿಮನಿ, ರಾಮಣ್ಣ ತೊನಸಳ್ಳಿ ಸೇರಿದಂತೆ ಬಸವಾಭಿಮಾನಿಗಳು ಪಾಲ್ಗೊಂಡಿದ್ದರು.