ಸುದ್ದಿಪತ್ರಿಕೆ ಪ್ರತಿದಿನ ಓದುವ ಅಭ್ಯಾಸ ಮುಖ್ಯ

| Published : Jul 31 2024, 01:03 AM IST

ಸಾರಾಂಶ

ದೃಶ್ಯ ಮಾಧ್ಯಮಗಳ ಸುದ್ದಿಗಳು ಕಂಡು ಮರೆಯಾಗುತ್ತವೆ. ಅದೇ ಮುದ್ರಣ ಮಾಧ್ಯಮಗಳು ದಾಖಲೆಗಳಾಗಿ ಅಚ್ಚಳಿಯದೇ ಉಳಿದಿರುತ್ತವೆ. ಪ್ರತಿದಿನ ಬೆಳಗ್ಗೆ ದಿನ ಪತ್ರಿಕೆಗಳನ್ನು ಓದದೇ ಇದ್ದರೆ ಸಮಾಧಾನ ಇರುವುದಿಲ್ಲ. ಅಂತಹ ಪ್ರೇರಕ, ಮೋಹಕಶಕ್ತಿ ಪತ್ರಿಕೆಗಳಿವೆ. ಎಲ್ಲರೂ ಪತ್ರಿಕೆಗಳನ್ನು ಓದುವ ಅಭ್ಯಾಸ ಹೊಂದಬೇಕು ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಚನ್ನಗಿರಿಯಲ್ಲಿ ಹೇಳಿದ್ದಾರೆ.

- ಪತ್ರಿಕಾ ದಿನ ಸಮಾರಂಭ ಉದ್ಘಾಟಿಸಿ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ - - - ಕನ್ನಡಪ್ರಭ ವಾರ್ತೆ, ಚನ್ನಗಿರಿ

ದೃಶ್ಯ ಮಾಧ್ಯಮಗಳ ಸುದ್ದಿಗಳು ಕಂಡು ಮರೆಯಾಗುತ್ತವೆ. ಅದೇ ಮುದ್ರಣ ಮಾಧ್ಯಮಗಳು ದಾಖಲೆಗಳಾಗಿ ಅಚ್ಚಳಿಯದೇ ಉಳಿದಿರುತ್ತವೆ. ಪ್ರತಿದಿನ ಬೆಳಗ್ಗೆ ದಿನ ಪತ್ರಿಕೆಗಳನ್ನು ಓದದೇ ಇದ್ದರೆ ಸಮಾಧಾನ ಇರುವುದಿಲ್ಲ. ಅಂತಹ ಪ್ರೇರಕ, ಮೋಹಕಶಕ್ತಿ ಪತ್ರಿಕೆಗಳಿವೆ. ಎಲ್ಲರೂ ಪತ್ರಿಕೆಗಳನ್ನು ಓದುವ ಅಭ್ಯಾಸ ಹೊಂದಬೇಕು ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.

ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಸೋಮವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ದಾವಣಗೆರೆ ಜಿಲ್ಲೆಯಲ್ಲಿಯೇ ಚನ್ನಗಿರಿ ತಾಲೂಕಿನ ಪತ್ರಕರ್ತರ ಸಂಘಕ್ಕೆ ಸ್ವಂತ ಭವನ ನಿರ್ಮಾಣ ಮಾಡಿಕೊಳ್ಳಲು ಈ ಹಿಂದೆ ನಾನು ಮೊದಲ ಬಾರಿಗೆ ಶಾಸಕನಾಗಿದ್ದ ಸಂದರ್ಭ ₹10 ಲಕ್ಷ ಅನುದಾನ ಬಿಡುಗಡೆ ಮಾಡಿದ್ದೆ. ಎರಡನೇ ಬಾರಿ ಶಾಸಕನಾದ ಸಂದರ್ಭ ₹5 ಲಕ್ಷಗಳನ್ನು ಮಂಜೂರು ಮಾಡಿದ್ದೆ. ಆ ಹಣದಲ್ಲಿ ಮೇಲ್ಭಾಗದ ಕಾಮಗಾರಿಯನ್ನು ಮಾಡಿದ್ದೀರಿ. ಒಂದು ಬಾರಿ ಉದ್ಘಾಟನೆಗೊಂಡ ಕಟ್ಟಡಕ್ಕೆ ಮತ್ತೊಂದು ಬಾರಿ ಉದ್ಘಾಟನೆ ಮಾಡುವುದು ತರವಲ್ಲ ಎಂದು ಹೇಳಿದರು.

ಮಾಜಿ ಶಾಸಕ ಮಹಿಮಾ ಜೆ. ಪಟೇಲ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಮಂಜುನಾಥ ಮಾತನಾಡಿದರು. ಪತ್ರಕರ್ತ ಎಚ್.ವಿ. ನಟರಾಜ್ ಅವರಿಗೆ ಕೆಳದಿರಾಣಿ ಚನ್ನಮ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ತಾಲೂಕಿನ ತ್ಯಾವಣಿಗೆಯ ಪತ್ರಕರ್ತ ದಿವಂಗತ ರಾಜು ಅವರ ಪತ್ನಿ ರೇಖಾ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವೀರೇಶ್ ಪ್ರಸಾದ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪತ್ರಕರ್ತರ ಸಂಘಧ ಕಾರ್ಯದರ್ಶಿ ಫಕೃದ್ದೀನ್, ಬದರಿನಾಥ್, ವೇದಮೂರ್ತಿ, ಪುರಸಭಾ ಸದಸ್ಯರಾದ ಪಟ್ಲಿ ನಾಗರಾಜ್, ಕಮಲಾ ಹರೀಶ್, ಹಿರಿಯ ಪತ್ರಕರ್ತ ಬಾ.ರಾ.ಮಹೇಶ್, ಸತೀಶ್ ಎಂ. ಪವಾರ್, ಟಿ.ಎನ್.ಜಗದೀಶ್ ಮೊದಲಾದವರು ಹಾಜರಿದ್ದರು.

- - - -29ಕೆಸಿಎನ್‌ಜಿ2:

ಚನ್ನಗಿರಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನ ಸಮಾರಂಭವನ್ನು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಉದ್ಘಾಟಿಸಿದರು.