ವಾಲ್ಮೀಕಿ ರಾಮಾಯಣದ ತತ್ವಾದರ್ಶಗಳು ಸಾರ್ವಕಾಲಿಕ

| Published : Oct 29 2023, 01:00 AM IST / Updated: Oct 29 2023, 01:01 AM IST

ವಾಲ್ಮೀಕಿ ರಾಮಾಯಣದ ತತ್ವಾದರ್ಶಗಳು ಸಾರ್ವಕಾಲಿಕ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ಜಿಲ್ಲಾಡಳಿತ ಭವನದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಪುಷ್ಪ ನಮನ ಸಲ್ಲಿಸಿದರು.

ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಿಪ ಸದಸ್ಯ ಎಸ್‌.ವಿ. ಸಂಕನೂರಗದಗ: ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣವನ್ನು ಪ್ರತಿಯೊಬ್ಬರೂ ಓದಬೇಕು, ಅದರಲ್ಲಿನ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಅವುಗಳೆಲ್ಲಾ ಸಾರ್ವಕಾಲಿಕ ಸತ್ಯಗಳಾಗಿವೆ ಎಂದು ವಿಧಾನ ಪರಿಷತ್‌ ಸದಸ್ಯ ಎಸ್.ವಿ. ಸಂಕನೂರ ಹೇಳಿದರು. ಅವರು ಶನಿವಾರ ಜಿಲ್ಲಾಡಳಿತ ಭವನದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ದೇಶದ ಇತಿಹಾಸದಲ್ಲಿ ಪ್ರಥಮವಾಗಿ ಕಾವ್ಯ ರೂಪದಲ್ಲಿರುವ ದೊಡ್ಡ ಗ್ರಂಥ ರಾಮಾಯಾಣ. ಇದು ಪ್ರಥಮ ಗ್ರಂಥವಾಗಿದ್ದು ಇದನ್ನು ರಚಿಸಿದ ಮಹರ್ಷಿ ಅವರನ್ನು ಆದಿಕವಿ ಎನ್ನುತ್ತೇವೆ ಎಂದರು.ವಾಲ್ಮೀಕಿ ಅವರ ಜೀವನ ಚರಿತ್ರೆ ನಾವು ಅರಿತುಕೊಳ್ಳಬೇಕು. ಅವರ ಜೀವನದಲ್ಲಿ ನಡೆದಂತಹ ಘಟನೆಯನ್ನು ನೆನಪಿಸಿಕೊಳ್ಳುತ್ತಾ ಅವರ ಜೀವನ ನಿರ್ವಹಣೆಗಾಗಿ ಮಾಡುತ್ತಿದ್ದ ಬೇಟೆಗಾರಿಕೆ ವೃತ್ತಿಯಿಂದ ಮಹರ್ಷಿಗಳು ಹೇಗಾದರೂ ಎಂಬುದನ್ನು ನಾವು ಅರಿತುಕೊಳ್ಳಬೇಕು. ಮನುಷ್ಯ ಸಹಜವಾಗಿ ತಪ್ಪುಗಳನ್ನು ಮಾಡುತ್ತಾನೆ. ಆ ತಪ್ಪುಗಳನ್ಬು ತಿದ್ದಿ ನಡೆಯುವುದೇ ಮುಖ್ಯ ಎಂದರು.ನಾರದ ಮುನಿಗಳ ಹಿತೋಪದೇಶದಿಂದ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವ ಮೂಲಕ ಬದಲಾದ ರತ್ನಾಕರರು ಮಹರ್ಷಿ ವಾಲ್ಮೀಕಿಯಾದರು. ಅವರು ರಚಿಸಿದ ರಾಮಾಯಣ ಇಂದು ಪ್ರತಿಯೊಬ್ಬರು ಓದಬೇಕು, ಅದರಲ್ಲಿನ ಅಣ್ಣ-ತಮ್ಮ, ಗಂಡ-ಹೆಂಡತಿಯ ಸಂಬಂಧಗಳ ಕುರಿತು ಉಲ್ಲೇಖಿಸಲಾಗಿದ್ದು, ಇದನ್ನು ಅರಿತು ನಾವು ಜೀವನ ನಡೆಸಬೇಕು. ರಾಮಾಯಣವನ್ನು ಮುಖ್ಯವಾಗಿ ಜನ ಪ್ರತಿನಿಧಿಗಳು ಓದಿ ಅರಿತುಕೊಂಡು ರಾಜ ತನ್ನ ಸಾಮ್ರಾಜ್ಯದ ಪ್ರಜೆಗಳ ಜೊತೆ ಯಾವ ರೀತಿ ಸಂಬಂಧಗಳನ್ನು ಹೊಂದಿರಬೇಕು ಎಂಬುದನ್ನು ಅರಿತುಕೊಳ್ಳಬೇಕಾಗಿದೆ ಎಂದರು. ಮಹಾತ್ಮ ಗಾಂಧೀಜಿಯವರು ಕೂಡ ರಾಮಾಯಣದಿಂದ ಪ್ರಭಾವಿತರಾಗಿ ರಾಮ ರಾಜ್ಯದ ಕನಸು ಕಂಡಿದ್ದರು. ರಾಮಾಯಣ ಹಾಗೂ ವಾಲ್ಮೀಕಿ ಅವರ ಜೀವನದ ತತ್ವಾದರ್ಶಗಳನ್ನು ಅರಿತುಕೊಂಡು ಆದರ್ಶ, ಸುಂಸ್ಕೃತ ಜೀವನ ನಡೆಸಬೇಕು. ವ್ಯಕ್ತಿ ಸುಂಸ್ಕೃತವಾದರೆ ಸಮಾಜ ಸುಧಾರಣೆಯಾಗುತ್ತದೆ. ಆದ್ದರಿಂದ ರಾಮಾಯಣವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ನಿವೃತ್ತ ನ್ಯಾಯಾಧೀಶ ಡಿ.ವೈ. ಬಸಾಪುರ ಮಹರ್ಷಿ ವಾಲ್ಮೀಕಿ ಅವರ ತತ್ವಾದರ್ಶಗಳ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಎಸ್ಪಿ ಬಿ.ಎಸ್. ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಮಹರ್ಷಿ ವಾಲ್ಮೀಕಿ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಬೆಳದಡಿ, ತಾಲೂಕು ಅಧ್ಯಕ್ಷರಾದ ಆದಪ್ಪನವರ, ಸಮುದಾಯದ ಗಣ್ಯರು, ಮುಖಂಡರು, ಸಾರ್ವಜನಿಕರು, ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ಸ್ವಾಗತಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು.